Shubha Poonja: ಮದುವೆ ಯಾವಾಗ? ಸುದೀಪ್ ಎದುರು ಗುಟ್ಟು ಬಿಚ್ಚಿಟ್ಟ ಶುಭಾ ಪೂಂಜಾ
ಬಿಗ್ ಬಾಸ್ ಫಿನಾಲೆ ಹಿಂದಿನ ವಾರ ಅಂದರೆ ಕಳೆದ ವಾರ ಮೂವರು ಎಲಿಮಿನೇಟ್ ಆಗಿದ್ದಾರೆ. ಅದರಲ್ಲಿ ಶುಭಾ ಕೂಡ ಒಬ್ಬರು. ಮಿಡ್ ವೀಕ್ನಲ್ಲಿ ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್ ಆದರೆ, ಶನಿವಾರ (ಜುಲೈ 31) ಶುಭಾ ಹೊರ ಹೋದರು.
ನಟಿ ಶುಭಾ ಪೂಂಜಾ ಅವರು ಸುಮಂತ್ ಬಿಲ್ಲವ ಅವರನ್ನು ವಿವಾಹವಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕನ್ನಡ ಬಿಗ್ ಬಾಸ್ ಸೀಸನ್ 8’ ಜೂನ್ ತಿಂಗಳಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊವಿಡ್ ಕಾಣಿಸಿಕೊಂಡಿದ್ದರಿಂದ ಎಂಟನೇ ಸೀಸನ್ ಅರ್ಧಕ್ಕೆ ನಿಂತಿತ್ತು. ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕೂಡ ಆರಂಭವಾಯಿತು. ಈ ಎಲ್ಲಾ ಕಾರಣಕ್ಕಾಗಿ ಬಿಗ್ ಬಾಸ್ ಮನೆಯಲ್ಲಿದ್ದ ಶುಭಾ ಪೂಂಜಾ ಮದುವೆ ವಿಳಂಬವಾಗಿದೆ. ಈಗ ಅವರು ಮದುವೆ ಬಗ್ಗೆ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಫಿನಾಲೆ ಹಿಂದಿನ ವಾರ ಅಂದರೆ ಕಳೆದ ವಾರ ಮೂವರು ಎಲಿಮಿನೇಟ್ ಆಗಿದ್ದಾರೆ. ಅದರಲ್ಲಿ ಶುಭಾ ಕೂಡ ಒಬ್ಬರು. ಮಿಡ್ ವೀಕ್ನಲ್ಲಿ ಚಕ್ರವರ್ತಿ ಚಂದ್ರಚೂಡ್ ಎಲಿಮಿನೇಟ್ ಆದರೆ, ಶನಿವಾರ (ಜುಲೈ 31) ಶುಭಾ ಹೊರ ಹೋದರು. ಭಾನುವಾರ (ಆಗಸ್ಟ್ 1) ಶಮಂತ್ ಔಟ್ ಆಗಿದ್ದಾರೆ. ಶುಭಾ ಬಿಗ್ ಬಾಸ್ ವೇದಿಕೆ ಮೇಲೆ ಮಾತನಾಡಿದ್ದನ್ನು ಆಗಸ್ಟ್ 1ರಂದು ಪ್ರಸಾರ ಮಾಡಲಾಗಿದೆ.
ತಮ್ಮ ಬಿಗ್ ಬಾಸ್ ಪ್ರಯಾಣದ ವಿಡಿಯೋ ನೋಡಿ ಶುಭಾ ಪೂಂಜಾ ಅತ್ತಿದ್ದಾರೆ. ಈ ವೇಳೆ ಸುದೀಪ್ ಮುಂದೇನು ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಶುಭಾ, ‘ಆಗಸ್ಟ್ 5 ನನ್ನ ಜನ್ಮದಿನ. ಹೀಗಾಗಿ, ಸುಮಂತ್ ಜತೆ ನಾನು ಹೊರಗೆ ಹೋಗುತ್ತೇನೆ. ಅಲ್ಲಿ ತಿಂದುಂಡು ಫಿನಾಲೆಗೆ ಬರುತ್ತೇನೆ’ ಎಂದರು. ನಂತರ ಮುಂದುವರಿಸಿ, ‘ಶೀಘ್ರವೇ ನಾನು ಮದುವೆ ಆಗುತ್ತೇನೆ. ಫಿಯಾನ್ಸೆ 6 ತಿಂಗಳು ಕಾದಿದ್ದಾರೆ. ಅವರೇ ನನಗೆ ಬಿಗ್ ಬಾಸ್ ಹೋಗು ಎಂದಿದ್ದು. ಮತ್ತೆ ಅವರನ್ನು ಕಾಯಿಸಲ್ಲ’ ಎಂದು ಹೇಳುವ ಮೂಲಕ ಶೀಘ್ರವೇ ಮದುವೆ ಆಗುತ್ತೇನೆ ಎನ್ನುವ ಸೂಚನೆಯನ್ನು ಶುಭಾ ನೀಡಿದ್ದಾರೆ.
ಸದ್ಯ, ಬಿಗ್ ಬಾಸ್ ಮನೆಯಲ್ಲಿ ವೈಷ್ಣವಿ, ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಇದ್ದಾರೆ. ಈ ವಾರ ಎಲ್ಲರೂ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ವೋಟ್ ಪಡೆದವರಲ್ಲಿ ವೈಷ್ಣವಿ ಟಾಪ್; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್
ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್