ಫಿನಾಲೆಗೂ ಮೊದಲೇ ಎಲಿಮಿನೇಟ್​ ಆದ ಶಮಂತ್​ ಬ್ರೋ ಗೌಡ

ಫಿನಾಲೆಗೂ ಮೊದಲೇ ಎಲಿಮಿನೇಟ್​ ಆದ ಶಮಂತ್​ ಬ್ರೋ ಗೌಡ
ಶಮಂತ್​ ಬ್ರೋ ಗೌಡ

ಭಾನುವಾರ ಕೂಡ ಒಂದು ಎಲಿಮಿನೇಷನ್​ ನಡೆಯಲಿದೆ ಎಂದು ಸುದೀಪ್​ ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​ ತಲೆಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು.

TV9kannada Web Team

| Edited By: Rajesh Duggumane

Aug 01, 2021 | 9:40 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಅದಕ್ಕೂ ಮೊದಲು ಸದಸ್ಯರಿಗೆ ಎಲಿಮಿನೇಷನ್​ ಭೂತ ಎದುರಾಗಿದೆ. ಈ ವಾರ ಮನೆಯಿಂದ ಶಮಂತ್​ ಬ್ರೋ ಗೌಡ ಅವರು ಎಲಿಮಿನೇಟ್​ ಆಗಿದ್ದಾರೆ. ಲಕ್ಕಿ ಬಾಯ್​ ಎನಿಸಿಕೊಂಡಿದ್ದ ಅವರು, ಫಿನಾಲ್​ ವೀಕ್​ಗೆ ಲಗ್ಗೆ ಇಡುವಲ್ಲಿ ಎಡವಿದ್ದಾರೆ. ಈ ಮೂಲಕ ಮನೆಯ ಸ್ಪರ್ಧಿಗಳ ಸಂಖ್ಯೆ ಆರಕ್ಕೆ ಇಳಿಕೆ ಆಗಿದೆ.

ಫಿನಾಲೆ ಹಿಂದಿನ ವಾರ ಅಂದರೆ ಈ ವಾರ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದರು. ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ನಡೆಯುತ್ತದೆ. ಆದರೆ, ಮಂಗಳವಾರ (ಜುಲೈ 27) ಚಕ್ರವರ್ತಿ ಚಂದ್ರಚೂಡ್​ ಎಲಿಮಿನೇಟ್​ ಆದರು. ಅಚ್ಚರಿ ಎಂಬಂತೆ, ಶನಿವಾರ (ಜುಲೈ 31) ಕೂಡ ಒಂದು ಎಲಿಮಿನೇಷನ್​ ನಡೆಯಿತು. ಈ ವೇಳೆ ಶುಭಾ ಪೂಂಜಾ ಮನೆಯಿಂದ ಹೊರ ನಡೆದರು. ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ನಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿರಲಿಲ್ಲ. ಇನ್ನು, ಉಳಿದ ಕಂಟೆಸ್ಟೆಂಟ್​ಗಳಿಗೆ ಹೋಲಿಸಿದರೆ, ಶುಭಾ ವೀಕ್​ ಆಗಿದ್ದರು. ಈ ಕಾರಣಕ್ಕೆ ಅವರು ಎಲಿಮಿನೇಟ್​ ಆಗಿದ್ದಾರೆ.

ಇನ್ನು, ಭಾನುವಾರ ಕೂಡ ಒಂದು ಎಲಿಮಿನೇಷನ್​ ನಡೆಯಲಿದೆ ಎಂದು ಸುದೀಪ್​ ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​ ತಲೆಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿತ್ತು. ಈ ಪೈಕಿ ಶಮಂತ್​ ಅವರು ಇಂದು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ.

ಶಮಂತ್​ ಮೊದಲ ಇನ್ನಿಂಗ್ಸ್​ನಲ್ಲೇ ಎಲಿಮಿನೇಟ್​ ಆಗಿದ್ದರು. ಆದರೆ, ಅದೃಷ್ಟ ರೀತಿಯಲ್ಲಿ ಅವರು ಬಚಾವ್​ ಆಗಿದ್ದರು. ಇದಾದ ನಂತರ ಅವರು ತಮ್ಮ ಕಲೆಯನ್ನು ಹೊರ ಹಾಕಿದರು. ಸಾಕಷ್ಟು ಹಾಡುಗಳನ್ನು ಅವರು ದೊಡ್ಮನೆಯಲ್ಲಿ ಬರೆದಿದ್ದಾರೆ. ಆದರೆ, ಈ ವಾರ ಅವರಿಗೆ ಅದೃಷ್ಟ ಕೈಕೊಟ್ಟಿದೆ.

ಇನ್ನು, ಮಂಗಳವಾರ (ಆಗಸ್ಟ್​ 3) ಮತ್ತೊಂದು ಎಲಿಮಿನೇಷನ್​ ನಡೆಯಲಿದೆ. ಅಲ್ಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 5ಕ್ಕೆ ಇಳಿಕೆ ಆಗಲಿದೆ. ಫಿನಾಲೆಯಲ್ಲಿ ಇರುವವರು ಯಾರು ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

Follow us on

Related Stories

Most Read Stories

Click on your DTH Provider to Add TV9 Kannada