ಭಾನುವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?

ಭಾನುವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?
ಬಿಗ್ ಬಾಸ್​ ಕನ್ನಡ ಸೀಸನ್​ 8

ಫಿನಾಲೆ ಹಿಂದಿನ ವಾರ ಅಂದರೆ ಈ ವಾರ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದರು. ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ನಡೆಯುತ್ತದೆ. ಆದರೆ, ಮಂಗಳವಾರ (ಜುಲೈ 27) ಚಕ್ರವರ್ತಿ ಚಂದ್ರಚೂಡ್​ ಎಲಿಮಿನೇಟ್​ ಆದರು.

TV9kannada Web Team

| Edited By: Rajesh Duggumane

Aug 01, 2021 | 1:05 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆಗೆ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಸದ್ಯ ಮನೆಯಲ್ಲಿ ಏಳು ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದು, ಫಿನಾಲೆಗೂ ಮೊದಲೇ ಇಬ್ಬರು ಎಲಿಮಿನೇಟ್​ ಆಗುತ್ತಿದ್ದಾರೆ. ಹೀಗಾಗಿ, ಮನೆ ಮಂದಿಯಲ್ಲಿ ಟೆನ್ಶನ್​ ಹೆಚ್ಚಿದೆ. ಶನಿವಾರದ ಎಪಿಸೋಡ್​ನಲ್ಲಿ ಶುಭಾ ಪೂಂಜಾ ಎಲಿಮಿನೇಟ್​ ಆಗಿದ್ದಾರೆ. ಭಾನುವಾರ, ಮತ್ತೋರ್ವ ಸ್ಪರ್ಧಿ ಹೊರಹೋಗುತ್ತಿದ್ದಾರೆ.

ಫಿನಾಲೆ ಹಿಂದಿನ ವಾರ ಅಂದರೆ ಈ ವಾರ ಮನೆಯಲ್ಲಿ 9 ಸ್ಪರ್ಧಿಗಳು ಉಳಿದುಕೊಂಡಿದ್ದರು. ಸಾಮಾನ್ಯವಾಗಿ ವೀಕೆಂಡ್​ನಲ್ಲಿ ಎಲಿಮಿನೇಷನ್​ ನಡೆಯುತ್ತದೆ. ಆದರೆ, ಮಂಗಳವಾರ (ಜುಲೈ 27) ಚಕ್ರವರ್ತಿ ಚಂದ್ರಚೂಡ್​ ಎಲಿಮಿನೇಟ್​ ಆದರು. ಅಚ್ಚರಿ ಎಂಬಂತೆ, ಶನಿವಾರ (ಜುಲೈ 31) ಕೂಡ ಒಂದು ಎಲಿಮಿನೇಷನ್​ ನಡೆಯಿತು. ಈ ವೇಳೆ ಶುಭಾ ಪೂಂಜಾ ಮನೆಯಿಂದ ಹೊರ ನಡೆದರು. ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ನಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿರಲಿಲ್ಲ. ಇನ್ನು, ಉಳಿದ ಕಂಟೆಸ್ಟೆಂಟ್​ಗಳಿಗೆ ಹೋಲಿಸಿದರೆ, ಶುಭಾ ವೀಕ್​ ಆಗಿದ್ದರು. ಈ ಕಾರಣಕ್ಕೆ ಅವರು ಎಲಿಮಿನೇಟ್​ ಆಗಿದ್ದಾರೆ.

ಇನ್ನು, ಭಾನುವಾರ ಕೂಡ ಒಂದು ಎಲಿಮಿನೇಷನ್​ ನಡೆಯಲಿದೆ ಎಂದು ಸುದೀಪ್​ ಹೇಳಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​  ತಲೆಮೇಲೆ ಎಲಿಮಿನೇಷನ್​ ತೂಗುಗತ್ತಿ ತೂಗುತ್ತಿದೆ. ಈ ಪೈಕಿ ಶಮಂತ್​ ಅವರು ಇಂದು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ.

ಶಮಂತ್​ ಮೊದಲ ಇನ್ನಿಂಗ್ಸ್​ನಲ್ಲೇ ಎಲಿಮಿನೇಟ್​ ಆಗಿದ್ದರು. ಆದರೆ, ಅದೃಷ್ಟ ರೀತಿಯಲ್ಲಿ ಅವರು ಬಚಾವ್​ ಆಗಿದ್ದರು. ಇದಾದ ನಂತರ ಅವರು ತಮ್ಮ ಕಲೆಯನ್ನು ಹೊರ ಹಾಕಿದರು. ಸಾಕಷ್ಟು ಹಾಡುಗಳನ್ನು ಅವರು ದೊಡ್ಮನೆಯಲ್ಲಿ ಬರೆದಿದ್ದಾರೆ. ಆದರೆ, ಈ ವಾರ ಅವರಿಗೆ ಅದೃಷ್ಟ ಕೈಕೊಟ್ಟಿದೆ ಎನ್ನಲಾಗುತ್ತಿದೆ. ಇಂದು ರಾತ್ರಿ (ಆಗಸ್ಟ್ 1) ಎಲಿಮಿನೇಷನ್ ಎಪಿಸೋಡ್​ ಪ್ರಸಾರವಾಗಲಿದೆ.

ಇನ್ನು, ಮಂಗಳವಾರ (ಆಗಸ್ಟ್​ 3) ಮತ್ತೊಂದು ಎಲಿಮಿನೇಷನ್​ ನಡೆಯಲಿದೆ. ಅಲ್ಲಿಗೆ, ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ 5ಕ್ಕೆ ಇಳಿಕೆ ಆಗಲಿದೆ. ಫಿನಾಲೆಯಲ್ಲಿ ಇರುವವರು ಯಾರು ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ

ಬಿಗ್​ ಬಾಸ್​ ಎಲಿಮಿನೇಷನ್​ನಲ್ಲಿ ಟ್ವಿಸ್ಟ್​; ಶನಿವಾರವೇ ಹೊರ ಬಿದ್ದ ಶುಭಾ ಪೂಂಜಾ

Follow us on

Related Stories

Most Read Stories

Click on your DTH Provider to Add TV9 Kannada