ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?

ಅಷ್ಟಕ್ಕೂ ಬೆಂಗಾಲಿ ಭಾಷೆಯ ‘ಸೂಪರ್​ ಸಿಂಗರ್​’ ಕಾರ್ಯಕ್ರಮಕ್ಕೆ ಸೋನು ನಿಗಮ್​ ಯಾಕೆ ಜಡ್ಜ್​ ಆಗಿದ್ದಾರೆ? ಅಭಿಮಾನಿಗಳಿಗೆ ಈ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಸ್ವತಃ ಸೋನು ನಿಗಮ್​ ಉತ್ತರ ನೀಡಿದ್ದಾರೆ.

ಬೇರೆಲ್ಲ ರಿಯಾಲಿಟಿ ಶೋಗಳಿಗೆ ಬೈಯ್ಯುವ ಸೋನು ನಿಗಮ್​ ಈ ಒಂದು ಶೋಗೆ ಜಡ್ಜ್​ ಆಗಲು ಒಪ್ಪಿದ್ದೇಕೆ?
ಸೋನು ನಿಗಮ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 01, 2021 | 8:12 AM

ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ಆಗಾಗ ತಮ್ಮ ನೇರ ನಡೆ-ನುಡಿಯ ಕಾರಣದಿಂದ ಸುದ್ದಿ ಆಗುತ್ತಿರುತ್ತಾರೆ. ಸಿನಿಮಾ ಸಂಗೀತಲೋಕದಲ್ಲಿ ದೊಡ್ಡ ಸಾಧನೆ ಮಾಡಿರುವ ಅವರು ಬಹುಬೇಡಿಕೆಯ ಗಾಯಕ. ನೂರಾರು ಸೂಪರ್​ ಹಿಟ್​ ಗೀತೆಗಳಿಗೆ ಅವರು ಧ್ವನಿ ಆಗಿದ್ದಾರೆ. ಕೆಲವೊಮ್ಮೆ ತುಂಬ ನಿಷ್ಠುರವಾದ ಮಾತುಗಳನ್ನು ಆಡುವ ಮೂಲಕ ಅವರು ದೊಡ್ಡ ದೊಡ್ಡ ಮನರಂಜನಾ ವಾಹಿನಿ ಮತ್ತು ಮ್ಯೂಸಿಕ್​ ಕಂಪನಿಗಳ ವಿರೋಧವನ್ನೂ ಕಟ್ಟಿಕೊಂಡ ಉದಾಹರಣೆಗಳಿವೆ. ರಿಯಾಲಿಟಿ ಶೋಗಳ (Reality Show) ನಾಟಕೀಯತೆ ಬಗ್ಗೆಯೂ ಅವರಿಗೆ ಅಸಮಾಧಾನ ಇದೆ. ಆದರೂ ಅವರು ಸೂಪರ್​ ಸಿಂಗರ್​ ಶೋಗೆ ಜಡ್ಜ್​ ಆಗಿರುವುದು ವಿಶೇಷ. 

ಅಷ್ಟಕ್ಕೂ ಬೆಂಗಾಲಿ ಭಾಷೆಯ ‘ಸೂಪರ್​ ಸಿಂಗರ್​’ ಕಾರ್ಯಕ್ರಮಕ್ಕೆ ಸೋನು ನಿಗಮ್​ ಯಾಕೆ ಜಡ್ಜ್​ ಆಗಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ. ‘ಸ್ಟಾರ್​ ಜಲ್ಸಾ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಈ ಸಿಂಗಿಂಗ್ ರಿಯಾಲಿಟಿ ಶೋ ನನಗೆ ಆಸಕ್ತಿಕರವಾಗಿದೆ. ಕುಮಾರ್​ ಸಾನು, ಕೌಶಿಕಿ ಚಕ್ರವರ್ತಿ ಕೂಡ ಜಡ್ಜ್​ ಆಗಿದ್ದಾರೆ. ಒಂದು ಒಳ್ಳೆಯ ವಾತಾವರಣ ಅದರಲ್ಲಿ ಇದೆ. ಈ ಕಾರ್ಯಕ್ರಮದಲ್ಲಿ ನನಗೆ ಕಂಫರ್ಟ್​ ಎನಿಸುತ್ತದೆ. ಒಂದು ವೇಳೆ ಅವರು ಕೂಡ ನನ್ನಿಂದ ಡ್ರಾಮಾ ಮಾಡಿಸಲು ಪ್ರಯತ್ನಿಸಿದರೆ ಆಗ ಅವರನ್ನು ನೋಡಿಕೊಳ್ಳುತ್ತೇನೆ’ ಎಂದು ಸೋನು ನಿಗಮ್​ ಎಚ್ಚರಿಕೆಯನ್ನೂ ನೀಡಿದ್ದಾರೆ.

ಈ ಹಿಂದೆ ಸರಿಗಮಪ, ಇಂಡಿಯನ್ ಐಡಲ್​ ಮುಂತಾದ ಶೋಗಳಿಗೆ ಸೋನು ನಿಗಮ್​ ಜಡ್ಜ್​ ಆಗಿದ್ದರು. ಇತ್ತೀಚಿನ ದಿನಗಳಲ್ಲಿ ಇಂಡಿಯನ್​ ಐಡಲ್​ ಕಾರ್ಯಕ್ರಮದ ಬಗ್ಗೆ ಭಾರಿ ಟೀಕೆ ಕೇಳಿಬರುತ್ತಿದೆ. ಸ್ಪರ್ಧಿಗಳ ನಡುವೆ ಸುಳ್ಳು ಲವ್​ಸ್ಟೋರಿ ಸೃಷ್ಟಿ ಮಾಡಲಾಗುತ್ತಿದೆ. ಸ್ಪರ್ಧಿಗಳನ್ನು ಅನವಶ್ಯಕವಾಗಿ ಹೊಗಳಲಾಗುತ್ತದೆ. ಸುಳ್ಳು ಭಾವುಕತೆಯನ್ನು ವೇದಿಕೆ ಮೇಲೆ ಪ್ರದರ್ಶಿಸಲಾಗುತ್ತದೆ. ಬಡತನವನ್ನು ವೈಭವೀಕರಿಸಲಾಗುತ್ತದೆ ಎಂಬಿತ್ಯಾದಿ ಆರೋಪಗಳು ಕೇಳಿಬಂದಿವೆ. ಅನೇಕ ಸೆಲೆಬ್ರಿಟಿಗಳು ಕೂಡ ಈ ಶೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದುಂಟು.

ಇದನ್ನೂ ಓದಿ:

ಸ್ಪರ್ಧಿಗಳನ್ನು ಪ್ರಶಂಸಿಸಲು ಜಡ್ಜ್​ಗಳು ಅತಿರೇಕಕ್ಕೆ ಹೋಗುತ್ತಾರೆ; ರಿಯಾಲಿಟಿ ಶೋ ಬಗ್ಗೆ ಸೋನು ನಿಗಮ್​ ಬೇಸರ

ಮಗ ಗಾಯಕನಾಗೋದು ಸೋನು ನಿಗಮ್​ಗೆ ಇಷ್ಟ ಇಲ್ವಂತೆ! ಅದರಲ್ಲೂ ಭಾರತದಲ್ಲಿ..

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ