AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ

ಬಿಗ್​ ಬಾಸ್​ ಮನೆಯಲ್ಲಿ ಇರುವಾಗಲೇ ದಿವ್ಯಾ ಉರುಡುಗ ಹಳೆಯ ಫೋಟೋ ಒಂದು ವೈರಲ್​ ಆಗಿತ್ತು. ಸಾಕಷ್ಟು ಟ್ರೋಲ್​ ಪೇಜ್​ಗಳು ಈ ಫೋಟೋಗಳನ್ನು ಇಟ್ಟುಕೊಂಡು ಟ್ರೋಲ್​ ಮಾಡಿದ್ದವು.

ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ
ದಿವ್ಯಾ ಉರುಡುಗ
TV9 Web
| Edited By: |

Updated on: Jul 31, 2021 | 5:16 PM

Share

ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿ ಮಿಂಚುತ್ತಿದ್ದಾರೆ. ಅವರು ಫಿನಾಲೆ ತಲುಪುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಅವರು ಬಿಗ್​ ಬಾಸ್​ ಮನೆಯಲ್ಲಿ ಇರುವಾಗಲೇ ಅವರ ಹಳೆಯ ಫೋಟೋ ಒಂದು ವೈರಲ್​ ಆಗಿತ್ತು. ಸಾಕಷ್ಟು ಟ್ರೋಲ್​ ಪೇಜ್​ಗಳು ಈ ಫೋಟೋಗಳನ್ನು ಇಟ್ಟುಕೊಂಡು ಟ್ರೋಲ್​ ಮಾಡಿದ್ದವು. ಈಗ ಈ ವಿಚಾರಕ್ಕೆ ಸಂಬಂಧಿಸಿ ದಿವ್ಯಾ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಮಾನಹಾನಿಕರ ಸುದ್ದಿ ಪ್ರಸಾರ‌ ಮಾಡದಂತೆ ನಿರ್ಬಂಧ ಕೋರಿ ದಿವ್ಯಾ ಪರ ವಕೀಲರು ಬೆಂಗಳೂರು ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಂದೊಮ್ಮೆ ಕೋರ್ಟ್​ನಿಂದ ಈ ಬಗ್ಗೆ ಆದೇಶ ಬಂದರೆ, ಅವರ ವಿರುದ್ಧ ಮಾನಹಾನಿ ಆಗುವಂಥ ಸುದ್ದಿ ಪ್ರಸಾರ ಮಾಡುವಂತಿಲ್ಲ. ಒಂದೊಮ್ಮೆ ಆದೇಶ ಮೀರಿದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬಹುದು.

ಫಿನಾಲೆಗೆ ಬೆರಳೆಣಿಕೆ ದಿನ:

ಬಿಗ್​ ಬಾಸ್​ ಫಿನಾಲೆ ವಾರದಲ್ಲಿ ಐವರು ಉಳಿದುಕೊಳ್ಳುತ್ತಾರೆ. ಇದು ಬಿಗ್​ ಬಾಸ್​ ಸಂಪ್ರದಾಯ. ಅಂದರೆ, ಫಿನಾಲೆ ಬರುವುದರೊಳಗೆ ಬಿಗ್​ ಬಾಸ್​ ಮನೆಯಿಂದ ಮೂವರು ಎಲಿಮಿನೇಷನ್​ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಆ ಮೂವರು ಸ್ಪರ್ಧಿಗಳು ಯಾರು ಅನ್ನೋದು ಸದ್ಯದ ಕುತೂಹಲ.

ಮಂಜು ಪಾವಗಡ, ಅರವಿಂದ್​ ಕೆ.ಪಿ. ಹಾಗೂ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಸ್ಟ್ರಾಂಗ್​ ಕಂಟೆಸ್ಟೆಂಟ್ಸ್​​ ಎನಿಸಿಕೊಂಡಿದ್ದಾರೆ. ಇವರು ಫಿನಾಲೆ ವೀಕ್​ನಲ್ಲಿ ಉಳಿಯೋದು ಬಹುತೇಕ ಖಚಿತ. ಟಾಸ್ಕ್​ ವಿಚಾರಕ್ಕಿರಲಿ ಅಥವಾ ಮನೆಯಲ್ಲಿ ಹೊಂದಿಕೊಂಡು ಹೋಗುವ ವಿಚಾರದಲ್ಲಿರಲಿ ಈ ಮೂವರು ಮುಂದಿರುತ್ತಾರೆ.

ಇನ್ನು ದಿವ್ಯಾ ಉರುಡುಗ ಕೂಡ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಇವರು ಕೂಡ ಸ್ಟ್ರಾಂಗ್​ ಎನಿಸಿಕೊಂಡಿದ್ದಾರೆ. ಅರವಿಂದ್​ ಹಾಗೂ ದಿವ್ಯಾ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಗಿದೆ. ಈ ಕಾರಣಕ್ಕೆ ದಿವ್ಯಾ ಪ್ರಮುಖ ಎನಿಸಿಕೊಂಡಿದ್ದಾರೆ. ಈ ವಾರ ಕ್ಯಾಪ್ಟನ್​ ಕೂಡ ಆಗಿರುವುದರಿಂದ ಟಾಪ್​ 5ನಲ್ಲಿ ದಿವ್ಯಾ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.

ಇನ್ನು ಐದನೇ ಸ್ಥಾನಕ್ಕೆ ಯಾರು ಅನ್ನೋದು ಸದ್ಯದ ಕುತೂಹಲ. ಶುಭಾ, ಪ್ರಶಾಂತ್​, ಶಮಂತ್​ ಹಾಗೂ ದಿವ್ಯಾ ಸುರೇಶ್ ಈ ನಾಲ್ವರ ನಡುವೆ ಟಫ್​ ಕಾಂಪಿಟೇಷನ್​ ಇದೆ. ಫಿನಾಲೆಗೂ ಮೊದಲು ಈ ನಾಲ್ವರಲ್ಲಿ ಮೂವರು ಹೊರಹೋಗಬಹುದು ಎಂಬುದು ವೀಕ್ಷಕರ ಲೆಕ್ಕಾಚಾರ.

ಇದನ್ನೂ ಓದಿ: ಸೀರೆಯಲ್ಲಿ ಕಾಣಿಸಿಕೊಂಡ ದಿವ್ಯಾ ಉರುಡುಗ; ನಾಚಿ ನೀರಾದ ಅರವಿಂದ್

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್