AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

Divya Uruduga - Aravind KP: ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಕ್ಲೋಸ್​ ಆಗಿದ್ದಾರೆ. ದೊಡ್ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಅವರು ಒಟ್ಟಿಗೆ ಇರುತ್ತಾರೆ. ಈ ಮಧ್ಯೆ ಅರವಿಂದ್-ದಿವ್ಯಾ ಒಡನಾಟ ಉಳಿದವರಿಗೆ ಕಿರಿಕಿರಿ ತಂದಿಡುತ್ತಿದೆ. ಇದನ್ನು ಶುಭಾ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ
ದಿವ್ಯಾ ಉರುಡುಗ
TV9 Web
| Updated By: Digi Tech Desk|

Updated on:Jul 29, 2021 | 9:18 AM

Share

ಕನ್ನಡ ಬಿಗ್​ ಬಾಸ್ ಸೀಸನ್​ 8 ಆರಂಭವಾದ ಕೆಲವೇ ವಾರಗಳಲ್ಲಿ ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಕ್ಲೋಸ್ ಆಗಿದ್ದರು. ಅವರ ನಡುವೆ ಪ್ರೀತಿ ಇರೋದು ಸ್ಪಷ್ಟವಾಗಿದೆ. ಈ ಮಧ್ಯೆ ಅವರ ಒಡನಾಟದಿಂದ ಮನೆಯವರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಇದನ್ನು ಶುಭಾ ಪೂಂಜಾ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಕ್ಲೋಸ್​ ಆಗಿದ್ದಾರೆ. ದೊಡ್ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಅವರು ಒಟ್ಟಿಗೆ ಇರುತ್ತಾರೆ. ಅರವಿಂದ್ ಮಾತನ್ನು ದಿವ್ಯಾ ಹೆಚ್ಚು ಕೇಳುತ್ತಾರೆ. ಅವರನ್ನು ಕಂಡರೆ ದಿವ್ಯಾಗೆ ಭಯ ಎನ್ನುವ ಮಾತು ಬಿಗ್​ ಬಾಸ್​ ಮನೆಯಲ್ಲಿ ಚಾಲ್ತಿಯಲ್ಲಿದೆ. ಈ ಮಧ್ಯೆ ಅರವಿಂದ್-ದಿವ್ಯಾ ಒಡನಾಟ ಉಳಿದವರಿಗೆ ಕಿರಿಕಿರಿ ತಂದಿಡುತ್ತಿದೆ. ಇದನ್ನು ಶುಭಾ ಹೇಳಿಕೊಂಡಿದ್ದಾರೆ.

ರಾತ್ರಿ ಲೈಟ್​ ಆಫ್​ ಆದ ನಂತರದಲ್ಲಿ ಎಲ್ಲರೂ ನಿದ್ರಿಸಬೇಕು. ಆದರೆ, ದಿವ್ಯಾ ಉರುಡುಗ  ಆ ರೀತಿ ಮಾಡುತ್ತಿಲ್ಲ. ಅರವಿಂದ್ ಬಳಿ ತೆರಳುವ ಅವರು ಸಣ್ಣ ಧ್ವನಿಯಲ್ಲಿ ಮಾತನಾಡುತ್ತಾರೆ. ಮನೆಯಲ್ಲಿ ಶಾಂತತೆ ಇರುವುದರಿಂದ ಅದು ದೊಡ್ಡದಾಗಿ ಕೇಳುತ್ತದೆ. ಇದು ಶುಭಾ ಹಾಗೂ ಪ್ರಶಾಂತ್​ ಸಂಬರಗಿಗೆ ಕಿರಿಕಿರಿ ತಂದಿದೆ. ಈ ಬಗ್ಗೆ ಅವರು ಓಪನ್​ ಆಗಿಯೇ ದೂರಿದ್ದಾರೆ.

‘ಅರವಿಂದ್​ ಗೊರಕೆ ಹೊಡೆಯುತ್ತಿರುತ್ತಾರೆ. ಆಗ ದಿವ್ಯಾ ಬಂದು ಅವರನ್ನು ಕರೆದು ಕರೆದು ಎಬ್ಬಿಸುತ್ತಾರೆ’ ಎಂದು ಪ್ರಶಾಂತ್​ ದೂರಿದರು. ಇದಕ್ಕೆ ಶುಭಾ ಧ್ವನಿಗೂಡಿಸಿದರು. ‘ಅರವಿಂದ್ ಸಣ್ಣದಾಗಿ ಮಾತನಾಡುತ್ತಾನೆ. ಅದು ಅಷ್ಟಾಗಿ ಕೇಳೋದಿಲ್ಲ. ಆದರೆ, ನೀನು ಪಿಸುಗುಡೋದು ದೊಡ್ಡದಾಗಿ ಕೇಳುತ್ತದೆ’ ಎಂದು ದಿವ್ಯಾಗೆ ಹೇಳಿದರು ಶುಭಾ.

‘ರಾತ್ರಿ ನಿದ್ದೆ ಬರೋ ಟೈಮ್​ನಲ್ಲಿ ಆ ರೀತಿ ಮಾತನಾಡಿದರೆ ನಿಜವಾಗಿಯೂ ಹಿಂಸೆ ಎನಿಸುತ್ತದೆ. ನಿತ್ಯ ಅಷ್ಟೊತ್ತು ಮಾತನಾಡಿರುತ್ತೀರಿ. ಹಾಗಿದ್ರೂ ರಾತ್ರಿ ಮತ್ತೇಕೆ ಮಾತನಾಡಬೇಕು?’ ಎಂದು ಶುಭಾ ಪ್ರಶ್ನೆ ಮಾಡಿದರು. ದಿವ್ಯಾ ಇನ್ನು ಆ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಒಂದೇ ವಾರದಲ್ಲಿ ಎಲಿಮಿನೇಟ್​ ಆಗಲಿದ್ದಾರೆ ಮೂರು ಸ್ಪರ್ಧಿಗಳು?

ಬಿಗ್​ ಬಾಸ್​ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್​ವೀಕ್​ ಟ್ವಿಸ್ಟ್​

Published On - 7:24 am, Thu, 29 July 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ