ಬಿಗ್​ ಬಾಸ್​ ಮಂಜುಗೆ ಇಂಡಿಯನ್ ಆರ್ಮಿ ಕಡೆಯಿಂದ ಆಲ್​ ದಿ ಬೆಸ್ಟ್​; ವಿಡಿಯೋ ವೈರಲ್​

ಇಂಡಿಯನ್​ ಆರ್ಮಿ ಸಮವಸ್ತ್ರ ಧರಿಸಿರುವ ಕರ್ನಾಟಕ ಮೂಲದ ಯೋಧರೊಬ್ಬರು ಮಂಜು ಪರವಾಗಿ ವಿಡಿಯೋ ಮಾಡಿದ್ದಾರೆ. ಮಂಜು ಪಾವಗಡ ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಬಿಗ್​ ಬಾಸ್​ ಮಂಜುಗೆ ಇಂಡಿಯನ್ ಆರ್ಮಿ ಕಡೆಯಿಂದ ಆಲ್​ ದಿ ಬೆಸ್ಟ್​; ವಿಡಿಯೋ ವೈರಲ್​
ಬಿಗ್​ ಬಾಸ್​ ಮಂಜುಗೆ ಇಂಡಿಯನ್ ಆರ್ಮಿ ಕಡೆಯಿಂದ ಆಲ್​ ದಿ ಬೆಸ್ಟ್​; ವಿಡಿಯೋ ವೈರಲ್​
TV9kannada Web Team

| Edited By: Madan Kumar

Jul 29, 2021 | 1:00 PM

ಬಿಗ್​ ಬಾಸ್​ ಕನ್ನಡ ಸೀಸನ್​ 8ರ (Bigg Boss Kannada) ಆರಂಭದಿಂದಲೇ ಮಂಜು ಪಾವಗಡ (Manju Pavagada) ಮಿಂಚಲು ಆರಂಭಿಸಿದರು. ಫಿನಾಲೆಗೆ (Bigg Boss Finale) ಸ್ಪರ್ಧಿಸಲು ಅವರು ಸಮರ್ಥ ಕ್ಯಾಂಡಿಡೇಟ್​ ಎಂದು ಎಲ್ಲರೂ ಹೇಳುತ್ತ ಬಂದಿದ್ದಾರೆ. ಟಾಸ್ಕ್​ನಲ್ಲಿ ಅವರು ಹಿಂದೇಟು ಹಾಕಿದವರೇ ಅಲ್ಲ. ವೀಕ್ಷಕರನ್ನು ನಗಿಸುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ. ದಿವ್ಯಾ ಸುರೇಶ್​ ಜೊತೆ ಕಾಲ ಕಳೆಯುತ್ತ ಕೆಲವು ದಿನ ಅವರು ಡಲ್​ ಆಗಿದ್ದರು ಎಂಬುದು ಬಿಟ್ಟರೆ ಮಂಜು ಬಗ್ಗೆ ಬೇರೆ ಯಾವುದೇ ತಕರಾರು ಇಲ್ಲ. ಹಾಗಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಅಚ್ಚರಿ ಎಂದರೆ ಇಂಡಿಯನ್​ ಆರ್ಮಿ (Indian Army) ಕಡೆಯಿಂದಲೂ ಮಂಜುಗೆ ಶುಭ ಹಾರೈಕೆಗಳು ಬಂದಿವೆ.

ಕನ್ನಡ ಬಿಗ್​ ಬಾಸ್​ ಫಿನಾಲೆ ಸಮೀಪಿಸುತ್ತಿದೆ. ಹಾಗಾಗಿ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಯಾರು ಹೆಚ್ಚು ವೋಟ್​ ಪಡೆಯುತ್ತಾರೆ ಎಂಬುದರ ಆಧಾರದ ಮೇಲೆ ಫಿನಾಲೆಗೆ ಎಂಟ್ರಿ ಪಡೆಯುವವರ ಹಣೆಬರಹ ನಿರ್ಧಾರ ಆಗಲಿದೆ. ಆದ್ದರಿಂದ ಎಲ್ಲ ಸ್ಪರ್ಧಿಗಳ ಪರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ವಿಶೇಷ ಏನೆಂದರೆ, ಮಂಜುಗೆ ಭಾರತೀಯ ಸೇನೆಯ ಯೋಧರೊಬ್ಬರು ಬೆಂಬಲ ಸೂಚಿಸಿದ್ದಾರೆ.

ಇಂಡಿಯನ್​ ಆರ್ಮಿ ಸಮವಸ್ತ್ರ ಧರಿಸಿರುವ ಕರ್ನಾಟಕ ಮೂಲದ ಸೈನಿಕರೊಬ್ಬರು ಮಂಜು ಪರವಾಗಿ ವಿಡಿಯೋ ಮಾಡಿದ್ದಾರೆ. ‘ಸಮಸ್ತ ಕರ್ನಾಟಕ ಜನತೆಗೆ ನಮಸ್ತೆ. ಮಂಜು ಪಾವಗಡ ಅವರು ಬಿಗ್​ ಬಾಸ್​ ಮನೆಯಲ್ಲಿ ತುಂಬ ಚೆನ್ನಾಗಿ ಆಟ ಆಡುತ್ತಿದ್ದಾರೆ. ಅವರು ಫೈನಲ್​ನಲ್ಲಿ ಗೆದ್ದು ಬರಬೇಕು ಎಂದು ಇಂಡಿಯನ್​ ಆರ್ಮಿ ಕಡೆಯಿಂದ ಶುಭಕೋರುತ್ತಿದ್ದೇವೆ’ ಎಂದು ಆ ವಿಡಿಯೋದಲ್ಲಿ ಹೇಳಲಾಗಿದೆ. ಮಂಜು ಪಾವಗಡ ಅವರ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್​, ಅರವಿಂದ್​ ಕೆಪಿ, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಶಮಂತ್​ ಬ್ರೋ ಗೌಡ, ವೈಷ್ಣವಿ ಗೌಡ ನಡುವೆ ಪೈಪೋಟಿ ಮುಂದುವರಿದಿದೆ. ಆ.7 ಮತ್ತು 8ರಂದು ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್​ ಯಾರನ್ನು ವಿನ್ನರ್​ ಅಂತ ಘೋಷಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:

ಅರವಿಂದ್​ಗೆ ಗೆಲುವಿನ ಮಾಲೆ, ಮಂಜು ರನ್ನರ್​ ಅಪ್​; ಇದು ಬಿಗ್​ ಬಾಸ್​ ಮನೆ ಭವಿಷ್ಯ

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada