ಬಿಗ್​ ಬಾಸ್​ ಎಲಿಮಿನೇಷನ್​ನಲ್ಲಿ ಟ್ವಿಸ್ಟ್​; ಶನಿವಾರವೇ ಹೊರ ಬಿದ್ದ ಶುಭಾ ಪೂಂಜಾ

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದರಿಂದ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ.

ಬಿಗ್​ ಬಾಸ್​ ಎಲಿಮಿನೇಷನ್​ನಲ್ಲಿ ಟ್ವಿಸ್ಟ್​; ಶನಿವಾರವೇ ಹೊರ ಬಿದ್ದ ಶುಭಾ ಪೂಂಜಾ
ಶುಭಾ ಪೂಂಜಾ
TV9kannada Web Team

| Edited By: Rajesh Duggumane

Jul 31, 2021 | 9:59 PM

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದೆ. ಮುಂದಿನ ವಾರ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಶನಿವಾರವೇ ಒಂದು ಎಲಿಮಿನೇಷನ್​ ನಡೆದಿದೆ. ಶುಭಾ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ. ಇದು ಕೆಲವರಿಗೆ ಅಚ್ಚರಿ ಎನಿಸಿದರೆ, ಇನ್ನೂ ಕೆಲವರಿಗೆ ಇದು ನಿರೀಕ್ಷಿತವಾಗಿತ್ತು. ಆದರೆ, ಶನಿವಾರವೇ ಎಲಿಮಿನೇಷನ್​ ನಡೆದಿದೆ ಅನ್ನೋದು ಶಾಕಿಂಗ್​ ಆಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದರು. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದರಿಂದ ನಾಮಿನೇಷನ್​ನಿಂದ ಬಚಾವ್​ ಆಗಿದ್ದರು. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದರು.

ಬಿಗ್​ ಬಾಸ್​ ಫಿನಾಲೆ ವಾರದಲ್ಲಿ ಐವರು ಉಳಿದುಕೊಳ್ಳುತ್ತಾರೆ. ಇದು ಬಿಗ್​ ಬಾಸ್​ ಸಂಪ್ರದಾಯ. ಅಂದರೆ, ಫಿನಾಲೆ ಬರುವುದರೊಳಗೆ ಬಿಗ್​ ಬಾಸ್​ ಮನೆಯಿಂದ ಮೂವರು ಎಲಿಮಿನೇಷನ್​ ಆಗಲಿದ್ದಾರೆ. ಆ ಮೂವರು ಸ್ಪರ್ಧಿಗಳು ಯಾರು ಅನ್ನೋದು ಸದ್ಯದ ಕುತೂಹಲವಾಗಿತ್ತು. ಅದರಲ್ಲಿ ಈಗ ಒಬ್ಬರು ಶುಭಾ ಆಗಿದ್ದಾರೆ.

ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ನಲ್ಲಿ ಅಷ್ಟಾಗಿ ಆ್ಯಕ್ಟಿವ್​ ಆಗಿರಲಿಲ್ಲ. ಇನ್ನು, ಉಳಿದ ಕಂಟೆಸ್ಟೆಂಟ್​ಗಳಿಗೆ ಹೋಲಿಸಿದರೆ, ಶುಭಾ ವೀಕ್​ ಆಗಿದ್ದರು. ಈ ಕಾರಣಕ್ಕೆ ಅವರು ಎಲಿಮಿನೇಟ್​ ಆಗಿದ್ದಾರೆ. ಅವರು ಚಿಕ್ಕಮಕ್ಕಳಂತೆ ಆಡೋದು ಕಿರಿಕಿರಿ ತರುತ್ತಿದೆ ಎಂದು ಕೆಲವರು ಹೇಳಿದ್ದರು.

ಮಂಜು ಪಾವಗಡ, ಅರವಿಂದ್​ ಕೆ.ಪಿ. ಹಾಗೂ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಸ್ಟ್ರಾಂಗ್​ ಕಂಟೆಸ್ಟೆಂಟ್ಸ್​​ ಎನಿಸಿಕೊಂಡಿದ್ದಾರೆ. ಇವರು ಫಿನಾಲೆ ವೀಕ್​ನಲ್ಲಿ ಉಳಿಯೋದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಟಾಸ್ಕ್​ ವಿಚಾರಕ್ಕಿರಲಿ ಅಥವಾ ಮನೆಯಲ್ಲಿ ಹೊಂದಿಕೊಂಡು ಹೋಗುವ ವಿಚಾರದಲ್ಲಿರಲಿ ಈ ಮೂವರು ಮುಂದಿರುತ್ತಾರೆ.

ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​  ಡೇಂಜರ್​ಜೋನ್​ನಲ್ಲಿ ಮುಂದುವರಿದಿದ್ದಾರೆ. ಇವರಲ್ಲಿ ಒಬ್ಬರು ನಾಳೆ ಎಲಿಮಿನೇಟ್​ ಆಗಲಿದ್ದಾರೆ. ಮಂಗಳವಾರ ಮತ್ತೊಬ್ಬರು ಔಟ್​ ಆಗಲಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಲ್ಲಿ ಅರವಿಂದ್ ಮಧ್ಯ ಬೆರಳು ತೋರಿಸಿದ ವಿಡಿಯೋ ವೈರಲ್​; ಬಿಗ್​ ಬಾಸ್ ತಂಡದಿಂದ ಸ್ಪಷ್ಟನೆ

ಹಳೆಯ ಫೋಟೋ ವೈರಲ್​ ಪ್ರಕರಣ; ಕೋರ್ಟ್​ ಮೊರೆ ಹೋದ ಬಿಗ್​ ಬಾಸ್​ ಸ್ಪರ್ಧಿ ದಿವ್ಯಾ ಉರುಡುಗ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada