ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್

ಡೇಂಜರ್ ​ಜೋನ್​ನಲ್ಲಿದ್ದವರನ್ನು ಸೇವ್​ ಮಾಡೋಕೆ ಅಭಿಮಾನಿಗಳು ವೋಟ್​ ಮಾಡಬೇಕು. ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದನ್ನು ವಾಹಿನಿ ಬಹಿರಂಗ ಮಾಡುವುದಿಲ್ಲ. ಆದರೆ, ಹೆಚ್ಚು ವೋಟ್​ ಬಿದ್ದವರು ಮೊದಲು ಸೇವ್​ ಆಗುತ್ತಾರೆ.

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್
ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ವೋಟ್​ ಪಡೆದವರಲ್ಲಿ ವೈಷ್ಣವಿ ಟಾಪ್​; ಮೂರನೇ ಸ್ಥಾನಕ್ಕೆ ಕುಸಿದ ಅರವಿಂದ್
Follow us
| Updated By: ರಾಜೇಶ್ ದುಗ್ಗುಮನೆ

Updated on: Aug 02, 2021 | 2:38 PM

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆ ವೀಕ್​ ಆರಂಭವಾಗಿದೆ. ಮನೆಯಲ್ಲಿ ಆರು ಸ್ಪರ್ಧಿಗಳಿದ್ದು, ಇವರಲ್ಲಿ ಓರ್ವ ಸ್ಪರ್ಧಿ ಈ ವಾರ ಹೊರ ಹೋಗಲಿದ್ದಾರೆ. ಈ ಮೂಲಕ ಫಿನಾಲೆ ವೀಕ್​ ಮತ್ತಷ್ಟು ಕಠಿಣವಾಗಲಿದೆ. ಈ ಮಧ್ಯೆ ಯಾರು ಗೆಲ್ಲಲಿದ್ದಾರೆ ಅನ್ನೋ ಕುತೂಹಲ ಸದ್ಯ ಮನೆ ಮಾಡಿದೆ. ಇದಕ್ಕೆ ಉತ್ತರ ಆಗಸ್ಟ್​ 8ರಂದು ಸಿಗಲಿದೆ.

ಡೇಂಜರ್ ​ಜೋನ್​ನಲ್ಲಿದ್ದವರನ್ನು ಸೇವ್​ ಮಾಡೋಕೆ ಅಭಿಮಾನಿಗಳು ವೋಟ್​ ಮಾಡಬೇಕು. ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದನ್ನು ವಾಹಿನಿ ಬಹಿರಂಗ ಮಾಡುವುದಿಲ್ಲ. ಆದರೆ, ಹೆಚ್ಚು ವೋಟ್​ ಬಿದ್ದವರು ಮೊದಲು ಸೇವ್​ ಆಗುತ್ತಾರೆ. ಈ ಮೂಲಕ ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕಳೆದ ವಾರದಲ್ಲಿ ದಿವ್ಯಾ ಉರುಡುಗ ಹೊರತು ಪಡಿಸಿ ಉಳಿದ ಏಳು ಸ್ಪರ್ಧಿಗಳು ನಾಮಿನೇಷನ್​ ಲೀಸ್ಟ್​ನಲ್ಲಿದ್ದರು. ಈ ಪೈಕಿ ಶುಭಾ ಪೂಂಜಾ ಹಾಗೂ ಶಮಂತ್​ ಕಡಿಮೆ ವೋಟ್​ ಪಡೆದು ಎಲಿಮಿನೇಟ್​ ಆದರು. ಫಿನಾಲೆಗೂ ಹಿಂದಿನ ವಾರದಲ್ಲಿ ಅತಿ ಹೆಚ್ಚು ವೋಟ್​ ಬಿದ್ದಿದ್ದು ವೈಷ್ಣವಿಗೆ ಅನ್ನೋದು ವಿಶೇಷ.

ವೈಷ್ಣವಿ ಅವರು ಎಲಿಮಿನೇಷನ್​ನಿಂದ ಮೊದಲು ಬಚಾವ್​ ಆಗಿದ್ದಾರೆ ಎಂದು ಸುದೀಪ್​ ಘೋಷಣೆ ಮಾಡಿದರು. ಈ ಮೂಲಕ ಅತಿ ಹೆಚ್ಚು ಮತಗಳು​ ಬಿದ್ದಿದ್ದು ವೈಷ್ಣವಿಗೆ ಎಂಬುದು ವೀಕ್ಷಕರಿಗೆ ಸ್ಪಷ್ಟವಾಗಿದೆ. ಮಂಜು ಪಾವಗಡ ಎರಡನೇ ಸ್ಥಾನದಲ್ಲಿ ನಿಂತಿದ್ದಾರೆ. ಅರವಿಂದ್​ ಕೆ.ಪಿ ಅವರು ಈ ಬಾರಿ ಗೆಲ್ಲಲಿದ್ದಾರೆ ಎಂದೇ ಊಹಿಸಲಾಗಿತ್ತು. ಆದರೆ, ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವಾರ ಯಾರಿಗೆ ಹೆಚ್ಚು ವೋಟ್ ಬೀಳುತ್ತದೆಯೋ ಅವರು ಗೆದ್ದಂತೆ. ಹೀಗಾಗಿ, ಈ ವಾರ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ.

ಇನ್ನು, ಈ ವಾರ ಎಲ್ಲರೂ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ. ಮಿಡ್​ ವೀಕ್​ ಎಲಿಮಿನೇಷನ್​ ನಡೆಯಲಿದ್ದು, ಇದರಲ್ಲಿ ಓರ್ವ ಸ್ಪರ್ಧಿ ಹೊರ ಹೋಗಲಿದ್ದಾರೆ. ದಿವ್ಯಾ ಸುರೇಶ್​ ಮತ್ತು ಪ್ರಶಾಂತ್​ ಸಂಬರಗಿ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾನುವಾರ ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವ ಸ್ಪರ್ಧಿ ಇವರೇನಾ?

ಸೆಪ್ಟೆಂಬರ್​ನಿಂದ ಬಿಗ್​ ಬಾಸ್ ಹೊಸ ಸೀಸನ್?​; ಪ್ರೋಮೋ ರಿಲೀಸ್​ ಮಾಡಿದ ವಾಹಿನಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ