‘ನಾನು ತೋರಿಸಿದ ಆ ಸನ್ನೆಗೂ ಸಂಚಾರಿ ವಿಜಯ್​ ಚಿತ್ರಕ್ಕೂ ಸಂಬಂಧ ಇದೆ’; ಚಕ್ರವರ್ತಿ ಚಂದ್ರಚೂಡ್

ಬಿಗ್​ ಬಾಸ್​ ಮನೆಯೊಳಗೆ ಚಕ್ರವರ್ತಿ ಚಂದ್ರಚೂಡ್​ ಅವರು ಮಧ್ಯ ಬೆರಳು ತೋರಿಸಿ ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದ್ದರು. ಆ ವಿವಾದದ ಬಗ್ಗೆ ಅವರೀಗ ಸ್ಪಷ್ಟನೆ ನೀಡಿದ್ದಾರೆ.

TV9kannada Web Team

| Edited By: Madan Kumar

Aug 02, 2021 | 6:01 PM

ಬಿಗ್​ ಬಾಸ್​ ಕನ್ನಡ (Bigg Boss Kannada) ಸೀಸನ್​ 8ರಲ್ಲಿ ಭಿನ್ನ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡವರು ಚಕ್ರವರ್ತಿ ಚಂದ್ರಡೂಡ್​ (Chakravarthy Chandrachud). ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದ ಅವರು ಕಳೆದ ವಾರ ಮಿಡ್​ ವೀಕ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಬರಬೇಕಾಯಿತು. ಇದ್ದಷ್ಟು ದಿನವೂ ಅವರು ಒಂದಿಲ್ಲೊಂದು ವಿವಾದ ಮಾಡಿಕೊಳ್ಳುತ್ತಲೇ ಇದ್ದರು. ಆದರೆ ಹೆಚ್ಚು ಚರ್ಚೆ ಆಗಿದ್ದು ಮಾತ್ರ ಅವರು ತೋರಿಸಿದ ಒಂದು ಅಸಭ್ಯ ಸನ್ನೆ. ಪ್ರಿಯಾಂಕಾ ತಿಮ್ಮೇಶ್ (Priyanka Thimmesh)​ ಅವರು ಎಲಿಮಿನೇಟ್​ ಆದಾಗ ಚಕ್ರವರ್ತಿಯನ್ನು ನೇರವಾಗಿ ನಾಮಿನೇಟ್​ ಮಾಡಿದ್ದರು. ಅದರಿಂದ ಅಸಮಾಧಾನಗೊಂಡ ಅವರು ಮಧ್ಯ ಬೆರಳು ತೋರಿಸಿ ತಪ್ಪು ಮಾಡಿದರು. ಆದರೆ ತಾವು ತೋರಿಸಿದ ಆ ಸನ್ನೆಗೂ ಸಂಚಾರಿ ವಿಜಯ್​ ಸಿನಿಮಾಗೂ ಸಂಬಂಧ ಇದೆ ಎಂಬುದು ಚಕ್ರವರ್ತಿ ಚಂದ್ರಚೂಡ್​ ವಾದ!

ಸಂಚಾರಿ ವಿಜಯ್​ ನಟಿಸಿದ ‘ಮೇಲೊಬ್ಬ ಮಾಯಾವಿ’ ಸಿನಿಮಾದಲ್ಲಿ ಚಂದ್ರಚೂಡ್​ ಕೂಡ ಬಣ್ಣ ಹಚ್ಚಿದ್ದಾರೆ. ಆ ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ಬೇರೊಂದು ಕಾರಣಕ್ಕೆ ಈ ಸನ್ನೆ ಬಳಕೆ ಆಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಆ ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಆದರೆ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್​ ಪ್ರಶ್ನೆ ಕೇಳಿದ್ದಾಗ ಚಕ್ರವರ್ತಿ ಕೊಟ್ಟ ಉತ್ತರವೇ ಬೇರೆ ಆಗಿತ್ತು.

ಇದನ್ನೂ ಓದಿ:

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ಸ್ತ್ರೀ ದೋಷ ನನಗೆ ವರವಾಗಿದೆ ಎಂದ ಚಕ್ರವರ್ತಿ ಚಂದ್ರಚೂಡ್​

Follow us on

Click on your DTH Provider to Add TV9 Kannada