ರಾಷ್ಟ್ರೀಯ ಹೆದ್ದಾರಿ 275 ಯೋಜನೆ ತನ್ನದು ಅಂತ ಸಂಸದ ಪ್ರತಾಪ್ ಸಿಂಹ ಸಾಬೀತು ಮಾಡಿದರೆ ಅವರು ಹೇಳಿದಂತೆ ಕೇಳುತ್ತೇನೆ: ಲಕ್ಷ್ಮಣ, ಕೆಪಿಸಿಸಿ ವಕ್ತಾರ
ಈ ಹೆದ್ದಾರಿ ನಿರ್ಮಾಣಗೊಳ್ಳಲು ತಾನು ಕಾರಣ ಎಂದು ಎಲ್ಲೆಡೆ ಸುಖಾಸುಮ್ಮನೆ ಕೊಚ್ಚಿಕೊಳ್ಳುತ್ತಿರುವ ಪ್ರತಾಪ್ ಸಿಂಹ ಅವರು ತಮ್ಮ ಮಾತನ್ನು ಪ್ರೂವ್ ಮಾಡಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ ಲಕ್ಷ್ಮಣ್, ಅವರು ಸಾಬೀತು ಮಾಡಲು ವಿಫಲರಾದರೆ, ಪ್ರತಿ ಸಭೆಯಲ್ಲಿ ಅವರನ್ನು ಸುಳ್ಳುಗಾರ ಪ್ರತಾಪ್ ಸಿಂಹ ಅಂತ ಸಂಬೋಧಿಸುವುದಾಗಿ ಹೇಳಿದರು.
ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರ ಎಮ್ ಲಕ್ಷ್ಮಣ್ ಅವರು ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಬೆಂಗಳೂರು-ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ನಂಬರ್ 275 ಯೋಜನೆಯನ್ನು ತಾನು ಕರ್ನಾಟಕಕ್ಕೆ ತಂದಿರೋದು ಅಂತ ಸಂಸದ ಪ್ರತಾಪ್ ಸಿಂಹ ಹೇಳುತ್ತಿದ್ದು ತಮ್ಮ ಮಾತನ್ನು ಸಾಬೀತು ಮಾಡುವಂತೆ ಸವಾಲೆಸೆದರು.
ಸದರಿ ಪ್ರಾಜೆಕ್ಟ್ ಅನ್ನು ಕೇಂದ್ರದಿಂದ ಅನುಮೋದನೆ ಪಡೆದು ಅನುದಾನವನ್ನು ಮಂಜೂರು ಮಾಡಿಕೊಂಡ ಬಂದ ಶ್ರೇಯಸ್ಸು ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್ ಸಿ ಮಹದೇವಪ್ಪನವರಿಗೆ ಸಲ್ಲುತ್ತದೆ ಎಂದು ಲಕ್ಷ್ಮಣ್ ಹೇಳಿದರು. 2013 ರಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಮತ್ತು ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಂಗ್ ಅವರ ಸಂಪುಟದಲ್ಲಿ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರೊಂದಿಗೆ ಸೆಣಸಾಡಿ ಈ ಪ್ರಾಜೆಕ್ಟ್ ಮತ್ತು ರೂ 3,000 ಕೋಟಿಗಳ ಅನುದಾನವನ್ನು ಪಡೆದುಕೊಳ್ಳಲಾಯಿತು. ಈ ವಿಷಯ ಕ್ಯಾಬಿನೆಟ್ ಅಪ್ರೂವಲ್ ಪ್ರೊಸೀಡಿಂಗ್ಸ್ನಲ್ಲಿ ದಾಖಲಾಗಿದೆ ಎಂದು ಲಕ್ಷ್ಮಣ್ ಹೇಳಿದರು.
ಈ ಹೆದ್ದಾರಿ ನಿರ್ಮಾಣಗೊಳ್ಳಲು ತಾನು ಕಾರಣ ಎಂದು ಎಲ್ಲೆಡೆ ಸುಖಾಸುಮ್ಮನೆ ಕೊಚ್ಚಿಕೊಳ್ಳುತ್ತಿರುವ ಪ್ರತಾಪ್ ಸಿಂಹ ಅವರು ತಮ್ಮ ಮಾತನ್ನು ಪ್ರೂವ್ ಮಾಡಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ ಲಕ್ಷ್ಮಣ್, ಅವರು ಸಾಬೀತು ಮಾಡಲು ವಿಫಲರಾದರೆ, ಪ್ರತಿ ಸಭೆಯಲ್ಲಿ ಅವರನ್ನು ಸುಳ್ಳುಗಾರ ಪ್ರತಾಪ್ ಸಿಂಹ ಅಂತ ಸಂಬೋಧಿಸುವುದಾಗಿ ಹೇಳಿದರು.
ಇದನ್ನೂ ಓದಿ: Lucknow Girl Video: ಪೊಲೀಸ್ ಎದುರಲ್ಲೇ ಟ್ರಾಫಿಕ್ ಮಧ್ಯೆ ಕ್ಯಾಬ್ ಚಾಲಕನಿಗೆ ಥಳಿಸಿದ ಯುವತಿ; ಶಾಕಿಂಗ್ ವಿಡಿಯೋ ವೈರಲ್