Lucknow Girl Video: ಪೊಲೀಸ್ ಎದುರಲ್ಲೇ ಟ್ರಾಫಿಕ್​ ಮಧ್ಯೆ ಕ್ಯಾಬ್​ ಚಾಲಕನಿಗೆ ಥಳಿಸಿದ ಯುವತಿ; ಶಾಕಿಂಗ್ ವಿಡಿಯೋ ವೈರಲ್

Lucknow Girl Video: ಪೊಲೀಸ್ ಎದುರಲ್ಲೇ ಟ್ರಾಫಿಕ್​ ಮಧ್ಯೆ ಕ್ಯಾಬ್​ ಚಾಲಕನಿಗೆ ಥಳಿಸಿದ ಯುವತಿ; ಶಾಕಿಂಗ್ ವಿಡಿಯೋ ವೈರಲ್
ಕ್ಯಾಬ್​ ಚಾಲಕನಿಗೆ ಥಳಿಸುತ್ತಿರುವ ಲಕ್ನೋದ ಯುವತಿ

Viral Video: ಸಿಸಿಟಿವಿ ದೃಶ್ಯದಲ್ಲಿ ಕೂಡ ಇಡೀ ಘಟನೆ ರೆಕಾರ್ಡ್ ಆಗಿದ್ದು, ಸಿಗ್ನಲ್​ನಲ್ಲಿ ಯುವತಿಯಿಂದ ತುಸು ದೂರದಲ್ಲೇ ಬ್ರೇಕ್ ಹಾಕಿ ಕ್ಯಾಬ್ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಅಷ್ಟರಲ್ಲೇ ಕಿಟಿಕಿ ಬಳಿ ಬಂದ ಆಕೆ ಆತನನ್ನು ಕೆಳಗಿಳಿಸಿ ಎಲ್ಲರೆದುರು ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ.

TV9kannada Web Team

| Edited By: Sushma Chakre

Aug 02, 2021 | 1:25 PM

ಲಕ್ನೋ: ರಸ್ತೆ ದಾಟುವಾಗ ನಡುರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಯುವತಿಯೊಬ್ಬಳು ಮನಬಂದಂತೆ ಕೆನ್ನೆಗೆ ಬಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಆ ಜಾಗದಲ್ಲಿ ಟ್ರಾಫಿಕ್ ಪೊಲೀಸ್ ಇದ್ದರೂ ಆತ ಅಸಹಾಯಕನಾಗಿ ನಿಂತಿರುವ ವಿಡಿಯೋ ವೈರಲ್ ಆಗಿದೆ. ಲಕ್ನೋದಲ್ಲಿ ಈ ಘಟನೆ ನಡೆದಿದ್ದು, #ArrestLucknowGirl (ಲಕ್ನೋ ಯುವತಿಯನ್ನು ಬಂಧಿಸಿ) ಎಂದು ಟ್ವಿಟ್ಟರ್​ನಲ್ಲಿ ಅಭಿಯಾನ ಶುರುವಾಗಿದೆ.

ಲಕ್ನೋದ ಅವಾಧ್​ನಲ್ಲಿ ಯುವತಿ ರಸ್ತೆ ದಾಟುವಾಗ ಈ ಘಟನೆ ನಡೆದಿದೆ. ವಿಚಿತ್ರವಾಗಿ ವರ್ತಿಸುತ್ತಿದ್ದ ಯುವತಿ ಯಾಕೆ ಕ್ಯಾಬ್ ಚಾಲಕನಿಗೆ ಹೊಡೆದಳು ಎಂಬುದು ಗೊತ್ತಾಗಿಲ್ಲ. ಸಿಗ್ನಲ್ ಬಿದ್ದಿದ್ದರೂ ಈ ಕ್ಯಾಬ್​ನವನು ನಾನು ರಸ್ತೆ ದಾಟುವಾಗ ನನ್ನ ಕಾಲಿಗೆ ಕಾರಿನಿಂದ ಗುದ್ದಿದ್ದಾನೆ ಎಂದು ಯುವತಿ ಜಗಳವಾಡಿದ್ದಾಳೆ. ಆ ಚಾಲಕ ಮಾತ್ರ ನಾನೇನೂ ಮಾಡಿಲ್ಲ ಎಂದು ಹೇಳಿದ್ದಾನೆ. ಸಿಸಿಟಿವಿ ದೃಶ್ಯದಲ್ಲಿ ಕೂಡ ಇಡೀ ಘಟನೆ ರೆಕಾರ್ಡ್ ಆಗಿದ್ದು, ಆಕೆಯಿಂದ ತುಸು ದೂರದಲ್ಲೇ ಬ್ರೇಕ್ ಹಾಕಿ ಕ್ಯಾಬ್ ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಅಷ್ಟರಲ್ಲೇ ಕಿಟಿಕಿ ಬಳಿ ಬಂದ ಆಕೆ ಆತನನ್ನು ಕೆಳಗಿಳಿಯುವಂತೆ ಗದರಿಸಿ ಎಲ್ಲರೆದುರು ಕೆನ್ನೆಗೆ ಬಾರಿಸಿದ್ದಾಳೆ. ಹೀಗಾಗಿ, ಟ್ವಿಟ್ಟಿಗರು ಆಕೆಯನ್ನು ಅರೆಸ್ಟ್ ಮಾಡಿ ಎಂದು ಅಭಿಯಾನ ನಡೆಸುತ್ತಿದ್ದಾರೆ.

ಟ್ರಾಫಿಕ್​ನ ಸಿಗ್ನಲ್​ನಲ್ಲಿ ಈ ಘಟನೆ ನಡೆದಿದ್ದು, ನಡುರಸ್ತೆಯಲ್ಲಿ ಕ್ಯಾಬ್ ಅನ್ನು ನಿಲ್ಲಿಸಿ ಯುವತಿ ಜಗಳವಾಡಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆ ಕ್ಯಾಬ್ ಚಆಲಕನ ಹಿಂದೆ ಹೋಗಿ ಮತ್ತೆ ಮತ್ತೆ ಹೊಡೆದಿರುವ ಯುವತಿಗೆ ಬುದ್ಧಿ ಹೇಳಲು ಬಂದ ಬೇರೆ ಕಾರಿನ ಚಾಲಕನಿಗೂ ಆಕೆ ಥಳಿಸಿದ್ದಾಳೆ ಎನ್ನಲಾಗಿದೆ. ಇದೆಲ್ಲ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದರೂ ಪೊಲೀಸರು ಆಕೆಯನ್ನು ಇನ್ನೂ ಯಾಕೆ ಬಂಧಿಸಿಲ್ಲ? ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಜೀನ್ಸ್- ಟಿ ಶರ್ಟ್ ತೊಟ್ಟಿದ್ದ ಯುವತಿ ಕ್ಯಾಬ್ ಚಾಲಕನಿಗೆ ಹೊಡೆಯುವಾಗ ಟ್ರಾಫಿಕ್ ಪೊಲೀಸ್ ಬಂದು ಏನಾಯಿತೆಂದು ಕೇಳಿದ್ದಾರೆ. ಆಗ ಅವರ ಮೇಲೂ ರೇಗಾಡಿದ ಯುವತಿ ಕ್ಯಾಬ್ ಡ್ರೈವರ್​ಗೆ ಹೊಡೆಯಲಾರಂಭಿಸಿದ್ದಾಳೆ. ಈ ವಿಡಿಯೋವನ್ನು ಅಲ್ಲಿದ್ದವರಾರೋ ರೆಕಾರ್ಡ್ ಮಾಡಿದ್ದು, ಸಿಸಿಟಿವಿಯಲ್ಲೂ ಈ ದೃಶ್ಯಾವಳಿ ರೆಕಾರ್ಡ್ ಆಗಿದೆ. ಕಾಲರ್ ಹಿಡಿದು ಕ್ಯಾಬ್ ಚಾಲಕನಿಗೆ ಹೊಡೆಯುತ್ತಿದ್ದರೂ ಬೇರೆಯವರೆಲ್ಲ ಸುಮ್ಮನೆ ನೋಡುತ್ತ ನಿಂತಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಡೆತ ತಿನ್ನುತ್ತಿದ್ದ ಕ್ಯಾಬ್ ಚಾಲಕ ಅಲ್ಲಿ ಸೇರಿದ್ದ ಜನರ ಬಳಿ ಹೋಗಿ ಜೋರಾಗಿ ‘ಯಾರಾದರೂ ಮಹಿಳಾ ಪೊಲೀಸರಿಗೆ ಫೋನ್ ಮಾಡಿ’ ಎಂದು ಹೇಳುತ್ತಿರುವುದು ಕೂಡ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.

ಇದನ್ನೂ ಓದಿ: Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

Crime News: ಆನ್​ಲೈನ್​ ಗೇಮ್​ನಲ್ಲಿ 40,000 ರೂ. ಕಳೆದುಕೊಂಡ 13 ವರ್ಷದ ಬಾಲಕ; ಅಮ್ಮ ಬೈದಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆ

(Lucknow Girl beats Cab driver in the presence of police in Middle of the Road Video goes Viral on Twitter)

Follow us on

Related Stories

Most Read Stories

Click on your DTH Provider to Add TV9 Kannada