Covid-19: ಕೊರೊನಾ ರೋಗಿಗಳ ಕಣ್ಣೀರಿನಿಂದಲೂ ಹರಡುತ್ತೆ ಕೊವಿಡ್ ಸೋಂಕು!; ಅಚ್ಚರಿಯ ವಿಷಯ ಬಯಲು

ಅಮೃತಸರದ ಸರ್ಕಾರಿ ಮೆಡಿಕಲ್ ಕಾಲೇಜಿನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿ, ಮಾಹಿತಿ ನೀಡಿದ್ದಾರೆ. ಕಣ್ಣೀರಿನಿಂದಲೂ ಕೊರೊನಾ ರೋಗ ಹರಡುತ್ತದೆ ಎಂಬುದು ಸಂಶೋಧನೆಯಲ್ಲಿ ಸಾಬೀತಾಗಿದೆ.

Covid-19: ಕೊರೊನಾ ರೋಗಿಗಳ ಕಣ್ಣೀರಿನಿಂದಲೂ ಹರಡುತ್ತೆ ಕೊವಿಡ್ ಸೋಂಕು!; ಅಚ್ಚರಿಯ ವಿಷಯ ಬಯಲು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 02, 2021 | 2:18 PM

ಚಂಡೀಗಢ: ಪ್ರಪಂಚದಾದ್ಯಂತ ಕಳೆದ ಒಂದೂವರೆ ವರ್ಷದಿಂದ ಸಾವಿನ ಭೀತಿಯನ್ನು ಹೆಚ್ಚಿಸಿರುವ ಕೊವಿಡ್ ಇದೀಗ 3ನೇ ಅಲೆಯ ಆತಂಕವನ್ನು (COVID 3rd Wave) ಸೃಷ್ಟಿಸಿದೆ. ಇದರ ಜೊತೆಗೆ ರೂಪಾಂತರಿ ಕೊರೊನಾ ವೈರಸ್​ಗಳಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಭಾರತದಲ್ಲಿ ಕೊಂಚ ಕಡಿಮೆಯಾಗಿದ್ದ ಕೊರೊನಾ ಕೇಸುಗಳು ಮತ್ತೆ ಹೆಚ್ಚಾಗತೊಡಗಿವೆ. ಈಗಾಗಲೇ ಕೊವಿಡ್​ಗೆ ಲಸಿಕೆಗಳನ್ನು(Coronavirus Vaccine) ಕಂಡುಹಿಡಿಯಲಾಗಿದ್ದು, ಈ ಕುರಿತ ಸಂಶೋಧನೆಗಳು ಇನ್ನೂ ನಡೆಯುತ್ತಲೇ ಇವೆ. ನಾನಾ ರೀತಿಯಲ್ಲಿ ಕೊರೊನಾ ಸೋಂಕು ತಗುಲುವ ಅಪಾಯವಿರುವುದರಿಂದ ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯಗೊಳಿಸಲಾಗಿತ್ತು. ಇದರ ನಡುವೆ ಕೊವಿಡ್ ರೋಗಿಗಳ ಕಣ್ಣೀರಿನಿಂದಲೂ ಬೇರೆಯವರಿಗೆ ಕೊರೊನಾ ತಗುಲುವ ಸಾಧ್ಯತೆಗಳಿವೆ ಎಂಬ ಹೊಸ ವಿಚಾರವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಅಮೃತಸರದ ಸರ್ಕಾರಿ ಮೆಡಿಕಲ್ ಕಾಲೇಜಿನ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿ, ಮಾಹಿತಿ ನೀಡಿದ್ದಾರೆ. ಯಾವುದೇ ಕೊವಿಡ್ ಲಕ್ಷಣಗಳಿಲ್ಲದ ರೋಗಿಗಳ ಕಣ್ಣೀರಿನ ಮೂಲಕವೂ ಬೇರೆಯವರಿಗೆ ಕೊರೊನಾ ರೋಗ ಹರಡಬಲ್ಲದು ಎಂಬ ಮಾಹಿತಿಯನ್ನು ಬಯಲು ಮಾಡಿದೆ. ರೆಸ್ಪಿರೇಟರಿ ಡ್ರಾಪ್ಲೆಟ್ ಕೊರೊನಾ ಹರಡಲು ಮುಖ್ಯ ಕಾರಣವಾಗಿರುತ್ತದೆ. ಇದು ಕೊರೊನಾ ರೋಗಿ ಸೀನಿದಾಗ, ಕೆಮ್ಮಿದಾಗ, ಶೀತವಾದ ಮೂಗನ್ನು ಮುಟ್ಟಿ ಬೇರೆಡೆ ಮುಟ್ಟುವುದರಿಂದ, ಎಂಜಲಿನಿಂದಲೂ ಉತ್ಪತ್ತಿಯಾಗುತ್ತದೆ. ಇದೇ ಕಾರಣಕ್ಕೆ ಆಗಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಅಥವಾ ಸ್ಯಾನಿಟೈಸರ್ ಬಳಸುವುದು ಅತ್ಯವಶ್ಯಕ. ಇದರ ಹೊರತಾಗಿ ಕಣ್ಣೀರಿನಿಂದಲೂ ಕೊರೊನಾ ರೋಗ ಹರಡುತ್ತದೆ ಎಂಬುದು ಸಂಶೋಧನೆಯಲ್ಲಿ ಸಾಬೀತಾಗಿದೆ.

ಈ ಸಂಶೋಧನೆಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲಾದ 48 ಗಂಟೆಯೊಳಗೆ ಅವರ ಕಣ್ಣೀರಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕೇಸುಗಳು ಹೆಚ್ಚಾಗುತ್ತಿವೆ. ಜುಲೈ ಮೊದಲ ವಾರದಿಂದ ದೇಶದಲ್ಲಿ ಕೊವಿಡ್ ಕೇಸುಗಳು ಹೆಚ್ಚಾಗುತ್ತಿವೆ. ಇಂದು ದೇಶದಲ್ಲಿ 40,134 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ, 422 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಇದುವರೆಗೂ 4.24 ಲಕ್ಷ ಜನರು ಕೊರೊನಾದಿಂದಾಗಿ ಮೃತಪಟ್ಟಿದ್ದಾರೆ. ಭಾರತದ 3.16 ಕೋಟಿ ಜನರಿಗೆ ಈಗಾಗಲೇ ಕೊರೊನಾ ಸೋಂಕು ತಗುಲಿದೆ.

ಇದನ್ನೂ ಓದಿ: Covid 19 Updates: ‘ಕೊರೊನಾ ಮೂರನೇ ಅಲೆ ಈ ತಿಂಗಳಲ್ಲೇ ಶುರುವಾಗಲಿದೆ, ಅಕ್ಟೋಬರ್​ನಲ್ಲಿ ಉತ್ತುಂಗಕ್ಕೇರಲಿದೆ’

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,875 ಕೊರೊನಾ ಕೇಸ್ ಪತ್ತೆ; 25 ಮಂದಿ ಸಾವು

(Covid-19 can be Transmitted from Tears of Coronavirus Positive Patients new Study Reveals)

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ