ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಆತಂಕ; ಚೆಕ್‌ಪೋಸ್ಟ್ ನಿರ್ಮಾಣ, ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ

ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ಆತಂಕ; ಚೆಕ್‌ಪೋಸ್ಟ್ ನಿರ್ಮಾಣ, ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ
ಪ್ರಾತಿನಿಧಿಕ ಚಿತ್ರ

ಆಳಂದ ತಾಲೂಕಿನ ಖಜೂರಿ, ಹಿರೋಳಿಯಲ್ಲಿ 6 ಕಡೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತೆ. ಪೊಲೀಸರು ಆರ್ಟಿಪಿಸಿಆರ್ ನೆಗಟಿವ್ ವರದಿ ನೋಡಿ ಗಡಿಯೊಳಗೆ ಬಿಡ್ತಿದ್ದಾರೆ.

TV9kannada Web Team

| Edited By: Ayesha Banu

Aug 01, 2021 | 7:50 AM

ಕಲಬುರಗಿ: ಮಹಾಮಾರಿ ಕೊರೊನಾ ವೈರಸ್ನ 2ನೇ ಅಲೆ ಏಪ್ರಿಲ್ನಲ್ಲಿ ರಾಜ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿತ್ತು. ಇನ್ನೇನು ಕೊರೊನಾ ಸೋಂಕು ಕಡಿಮೆಯಾಯ್ತು ಅಂತಾ ಅಂದುಕೊಳ್ಳುತ್ತಿರೋವಾಗ್ಲೆ. ಮತ್ತೆ ತನ್ನ ರೌದ್ರಾವತರಾ ಮೆರೆಯಲು ಸಜ್ಜಾಗಿ ನಿಂತಿದೆ. ಕೊರೊನಾ 3ನೇ ಅಲೆ ಆತಂಕ ರಾಜ್ಯಕ್ಕೆ ಕಾಡುತ್ತಿದೆ. ಹೀಗಾಗಿ ಕೊವಿಡ್ 3ನೇ ಅಲೆ ತಡೆಗೆ ಕಲಬುರಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಆಳಂದ ತಾಲೂಕಿನ ಖಜೂರಿ, ಹಿರೋಳಿಯಲ್ಲಿ 6 ಕಡೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತೆ. ಪೊಲೀಸರು ಆರ್ಟಿಪಿಸಿಆರ್ ನೆಗಟಿವ್ ವರದಿ ನೋಡಿ ಗಡಿಯೊಳಗೆ ಬಿಡ್ತಿದ್ದಾರೆ. ಕಟ್ಟುನಿಟ್ಟಿನ ತಪಾಸಣೆ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಉಲ್ಬಣವಿಲ್ಲಾ. ಆದ್ರು ಸರ್ಕಾರದ ಸೂಚನೆ ಮೇರೆಗೆ ಕಟ್ಟುನಿಟ್ಟಿನ ತಪಾಸಣೆ ಪ್ರಾರಂಭವಾಗಿದೆ.

ಇನ್ನು ಮಂಗಳೂರು-ಕಾಸರಗೋಡು ನಡುವೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇಂದಿನಿಂದ 1 ವಾರ ಕಾಸರಗೋಡಿಗೆ ಬಸ್ ಸಂಚಾರ ಬಂದ್ ಆಗಲಿದೆ. ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ವಿದ್ಯಾರ್ಥಿಗಳು ಕೊವಿಡ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ 1 ವಾರ ವಿದ್ಯಾರ್ಥಿನಿಲಯಗಳಲ್ಲಿಯೇ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ. ಮಂಗಳೂರು-ಕೇರಳ ಗಡಿಪ್ರದೇಶ ತಲಪಾಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 18 ಕಡೆ ಪೊಲೀಸರಿಂದ ಹೈಅಲರ್ಟ್. 2 ಡೋಸ್ ಲಸಿಕೆ ಪಡೆದಿದ್ರೂ ರಾಜ್ಯಕ್ಕೆ ಬರಲು ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ.

3ನೇ ಅಲೆಯಲ್ಲಿ ಕರುನಾಡನ್ನ ಕಾಡಲು ಕೊರೊನಾ ರೆಡಿ 3ನೇ ಅಲೆ ಬರುತ್ತಿದೆ.. ಅದಕ್ಕೆ ರೆಡಿಯಾಗಿ ಅಂತಾ ತಜ್ಞ ವೈದ್ಯರು ಹಿಂದಿನಿಂದಲೂ ಎಚ್ಚರಿಕೆ ನೀಡುತ್ತಲೇ ಬಂದಿದ್ರು. ಆಗಸ್ಟ್ನಲ್ಲಿ ಮೂರನೇ ಅಲೆ ಹೊಡೆತ ನೀಡಲಿದೆ ಅಂತಾ ಸರ್ಕಾರಕ್ಕೆ ಮೊದಲೇ ಎಚ್ಚರಿಕೆ ನೀಡಿದ್ರು. ಆದ್ರೂ ಸಹ ಸರ್ಕಾರ ಕರುನಾಡಿಗೆ ಹಾಕಿದ್ದ ಬೀಗವನ್ನ ಹಂತ ಹಂತವಾಗಿ ಓಪನ್ ಮಾಡಿತ್ತು. ಹೀಗೆ ಓಪನ್ ಮಾಡಿದ್ದೇ ತಡ ಜನ ಕೊರೊನಾ ಹೊರಟೇ ಹೋಯ್ತು ಅನ್ನೋ ರೇಂಜ್ನಲ್ಲಿ ತಿರುಗಾಡಲು ಶುರು ಮಾಡಿದ್ರು. ಮನೆಯಿಂದ ಅವಶ್ಯವಿದ್ರೆ ಮಾತ್ರ ಹೊರ ಬನ್ನಿ ಅನ್ನೋ ಮಾತನ್ನ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.

ಪಕ್ಕದ ಕೇರಳದಲ್ಲಿ ಕಳೆದ ನಾಲ್ಕು ದಿನಗಳಿಂದ 20 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗ್ತಿದ್ರೂ.. ಜನ ರಿವೇಂಜ್ ಟೂರಿಸಂ ನೆಪದಲ್ಲಿ ಪ್ರವಾಸಿ ತಾಣಗಳಿಗೆ ಮುಗಿ ಬೀಳಲು ಶುರು ಮಾಡಿದ್ದಾರೆ. ಇದ್ರ ಪರಿಣಾಮ ರಾಜ್ಯದಲ್ಲೂ ಸಹ ಕಳೆದ ಕೆಲವು ದಿನಗಳಲ್ಲಿ ಹೊಸ ಸೋಂಕಿತರ ಸಂಖ್ಯೆ 2 ಸಾವಿರದ ಗಡಿ ಮುಟ್ಟುತ್ತಿದೆ.

ಟಿವಿ9 ವರದಿ ಬಳಿಕ ಅಲರ್ಟ್ ಆದ ಅಧಿಕಾರಿಗಳು ರಾಜ್ಯದ ಗಡಿ ಜಿಲ್ಲೆಗಳು.. ಅದ್ರಲ್ಲೂ ಕೇರಳಕ್ಕೆ ಹೊಂದಿಕೊಂಡಿರೋ ಗಡಿಗಳಲ್ಲಿ ವ್ಯಾಕ್ಸಿನ್ ಪಡೆದವರು, ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಎಂಟ್ರಿ ಅಂತಾ ಅಧಿಕಾರಿಗಳು ಬೋರ್ಡ್ ಹಾಕಿಕೊಂಡು ಕೂತಿದ್ರು. ಟಿವಿ9 ರಿಯಾಲಿಟಿ ಚೆಕ್ನಲ್ಲಿ ಇದು ಹೆಸರಿಗಷ್ಟೇ ಹಾಕಿರೋ ಬೋರ್ಡ್ ಅನ್ನೋದು ಕನ್ಫರ್ಮ್ ಆಯ್ತು ಯಾವಾಗ ಟಿವಿ9 ಬೋರ್ಡ್ ಅಸಲಿಯತ್ತನ್ನ ತೋರಿಸಿತೋ.. ಇದಾದ ಬಳಿಕ ಅಲರ್ಟ್ ಆದ ಅಧಿಕಾರಿಗಳು, ಈ ಸೂಚನೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದಾರೆ. ಅಲ್ದೆ, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಗಡಿಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಖಡಕ್ ಆದೇಶ ನೀಡಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗ್ತಿರೋ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದ್ರೆ, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಮೈಸೂರು, ಉಡುಪಿ, ಕೊಡಗು ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ. ರಾಜ್ಯದ 11 ಜಿಲ್ಲೆಗಳಲ್ಲಿ ಈಗಲೂ ಪರಿಸ್ಥಿತಿ ಕಂಟ್ರೋಲ್ನಲ್ಲಿದ್ದು, ಬೀದರ್ನಲ್ಲಿ ನಿನ್ನೆ ಹೊಸ ಸೋಂಕಿತರು ಪತ್ತೆಯಾಗಿಲ್ಲ. ಉಳಿದ 10 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಯಲ್ಲಿದೆ. ಹೀಗಾಗಿ ಸರ್ಕಾರ ಈಗಲೇ ಎಚ್ಚೆತ್ತರೆ ಕೊರೊನಾ 3ನೇ ಅಲೆಯಿಂದ ರಾಜ್ಯವನ್ನ ಕಾಪಾಡಬಹುದು ಅನ್ನೋದು ನಮ್ಮ ಆಶಯ.

ಇದನ್ನೂ ಓದಿ: ಕೊಪ್ಪಳದಲ್ಲಿ ಕೊರೊನಾ ಮೂರನೇ ಅಲೆಯ ಮುನ್ಸೂಚನೆ; ಆರು ಮಕ್ಕಳಲ್ಲಿ ಕೊರೊನಾ ಸೋಂಕು ಧೃಡ

Follow us on

Related Stories

Most Read Stories

Click on your DTH Provider to Add TV9 Kannada