ಕೊಪ್ಪಳದಲ್ಲಿ ಕೊರೊನಾ ಮೂರನೇ ಅಲೆಯ ಮುನ್ಸೂಚನೆ; ಆರು ಮಕ್ಕಳಲ್ಲಿ ಕೊರೊನಾ ಸೋಂಕು ಧೃಡ
ಆರು ಜನ ಮಕ್ಕಳಲ್ಲಿ ಒಂದು ಮಗು 5 ತಿಂಗಳಿದ್ದಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗಡಿ, ಕೆಮ್ಮು, ಜ್ವರ ಬಂದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಆರು ಮಕ್ಕಳಿಗೆ ಪಾಸಿಟಿವ್ ಬಂದಿದೆ ಎಂದು ಟಿವಿ9 ಡಿಜಿಟಲ್ಗೆ ಕೊಪ್ಪಳದ ಡಿಹೆಚ್ಓ ಡಾ. ಲಿಂಗರಾಜು ಟಿ ಮಾಹಿತಿ ನೀಡಿದ್ದಾರೆ.
ಕೊಪ್ಪಳ: ಕೊರೊನಾ ಮೂರನೇ ಅಲೆಯ ಭೀತಿ ಹೆಚ್ಚುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲೆಡೆ ಕಟ್ಟುನಿಟ್ಟಾದ ಕ್ರಮಗಳನ್ನು ಮತ್ತೆ ಜಾರಿಗೊಳಿಸಬೇಕಾದ ಅನಿವಾರ್ಯತೆ ಕಾಣಿಸುತ್ತಿದೆ. ಅನ್ಲಾಕ್ ನಂತರ ಜನ ಸಂಪೂರ್ಣ ಮೈಮರೆತು ಮೋಜು ಮಸ್ತಿಯಲ್ಲಿ ತೊಡಗಿರುವುದರಿಂದ ಮೂರನೇ ಅಲೆ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಹೀಗಿರುವಾಗಲೇ ಕೊಪ್ಪಳದಲ್ಲಿ ಆರು ಮಕ್ಕಳಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ.
ಕೊಪ್ಪಳದ ಅಮೂಲ್ಯ ದತ್ತು ಕೇಂದ್ರದಲ್ಲಿನ ಆರು ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ದತ್ತು ಕೇಂದ್ರದ ಒಬ್ಬ ಮಹಿಳಾ ಸಿಬ್ಬಂದಿಗೂ ಕೂಡ ಕೊವಿಡ್ ಸೋಂಕು ಧೃಡಪಟ್ಟಿದೆ. ಆರು ಜನ ಮಕ್ಕಳಲ್ಲಿ ಒಂದು ಮಗು 5 ತಿಂಗಳಿದ್ದಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೆಗಡಿ, ಕೆಮ್ಮು, ಜ್ವರ ಬಂದ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಆರು ಮಕ್ಕಳಿಗೆ ಪಾಸಿಟಿವ್ ಬಂದಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೂ ವಿಷಯ ತರಲಾಗಿದೆ ಎಂದು ಟಿವಿ9 ಡಿಜಿಟಲ್ಗೆ ಕೊಪ್ಪಳದ ಡಿಹೆಚ್ಓ ಡಾ. ಲಿಂಗರಾಜು ಟಿ ಮಾಹಿತಿ ನೀಡಿದ್ದಾರೆ.
ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದ ಬಳಿ ಇರುವ ದತ್ತು ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ, ದತ್ತು ಕೇಂದ್ರದಲ್ಲಿದ್ದ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ಮತ್ತು ಸಿಬ್ಬಂದಿಗಳಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ. ಇನ್ನುಳಿದ ಸಿಬ್ಬಂದಿ ಹಾಗೂ ಹತ್ತಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ನೆಗೆಟಿವ್ ಬಂದಿದೆ. ಅಲ್ಲದೇ ಈಗಾಗಲೇ ಪಾಸಿಟಿವ್ ಬಂದ ಸಿಬ್ಬಂದಿ ಮನೆ ಹಾಗೂ ದತ್ತು ಕೇಂದ್ರಕ್ಕೆ ಸ್ಯಾನಿಟೈಸರ್ ಮಾಡಲು ಸೂಚನೆ ನೀಡಲಾಗಿದೆ ಎಂದು ಕೊಪ್ಪಳದ ಡಿಹೆಚ್ಓ ಡಾ. ಲಿಂಗರಾಜು ಟಿ ತಿಳಿಸಿದ್ದಾರೆ.
ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 1606 ಮಂದಿಗೆ ಕೊರೊನಾ ಸೋಂಕು, 31 ಮಂದಿ ಸಾವು
ಕೊರೊನಾ ವೈರಾಣು ಚಿಕಿತ್ಸೆಗೆ ಬಳಸುವ ಔಷಧಗಳ ಪ್ರಭಾವ ತಗ್ಗಿಸುವ ಪ್ರೊಟೀನ್ ಘಟಕ ಪತ್ತೆ
Published On - 2:57 pm, Tue, 27 July 21