Rape Case: ಸಂತ್ರಸ್ತೆಯೇ ಮುಂದೆ ಬಂದರೂ ಅತ್ಯಾಚಾರಿ ಜೊತೆ ಮದುವೆಗೆ ಒಪ್ಪಿಗೆ ನೀಡದ ಸುಪ್ರೀಂ ಕೋರ್ಟ್

ಕೇರಳದ ಕೊಟ್ಟಿಯೂರ್​ನ ಅಪ್ರಾಪ್ತೆಯ ಮೇಲೆ 2017ರಲ್ಲಿ ಚರ್ಚ್​ನ ಫಾದರ್ ಅತ್ಯಾಚಾರವೆಸಗಿದ್ದರು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಇದೀಗ ಆಕೆ ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದು, ಪ್ರಕರಣವನ್ನು ವಜಾ ಮಾಡಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು.

Rape Case: ಸಂತ್ರಸ್ತೆಯೇ ಮುಂದೆ ಬಂದರೂ ಅತ್ಯಾಚಾರಿ ಜೊತೆ ಮದುವೆಗೆ ಒಪ್ಪಿಗೆ ನೀಡದ ಸುಪ್ರೀಂ ಕೋರ್ಟ್
ಕೇರಳದ ಅತ್ಯಾಚಾರ ಆರೋಪಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 02, 2021 | 3:31 PM

ನವದೆಹಲಿ: ತನ್ನ ಮೇಲೆ ಅತ್ಯಾಚಾರವೆಸಗಿದ್ದ ಕ್ಯಾಥೋಲಿಕ್ ಚರ್ಚ್ ಫಾದರ್​​ನನ್ನು (Priest) ಮದುವೆಯಾಗಲು ಅನುಮತಿ ನೀಡುವಂತೆ ಸಂತ್ರಸ್ತೆಯೇ ಮನವಿ ಮಾಡಿದ್ದರೂ ಆಕೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆರೋಪಿಗೆ ಈಗಾಗಲೇ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆಯನ್ನು ಘೋಷಿಸಲಾಗಿದ್ದು, ಆತನನ್ನು ಬಿಡುಗಡೆ ಮಾಡಿ, ಸಂತ್ರಸ್ತೆಯೊಂದಿಗೆ ಮದುವೆಯಾಗಲು ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಕೇರಳದ ಕೊಟ್ಟಿಯೂರ್​ನ ಅಪ್ರಾಪ್ತೆಯ ಮೇಲೆ ಚರ್ಚ್​ನ ಫಾದರ್ ಅತ್ಯಾಚಾರವೆಸಗಿದ್ದರು. ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣದಲ್ಲಿ ಈಗಾಗಲೇ ಆರೋಪಿಗೆ ಹೈಕೋರ್ಟ್​ನಿಂದ 20 ವರ್ಷಗಳ ಶಿಕ್ಷೆ ನೀಡಲಾಗಿದೆ. ಆದರೆ, ಆ ಶಿಕ್ಷೆಯನ್ನು ವಜಾಗೊಳಿಸಿ ಆತನನ್ನು ಬಿಡುಗಡೆ ಮಾಡಿದರೆ ನಾವಿಬ್ಬರೂ ಮದುವೆಯಾಗಲು ಬಯಸಿರುವುದಾಗಿ ಸಂತ್ರಸ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಳು.

ಈ ಹಿನ್ನೆಲೆಯಲ್ಲಿ ತನಗೆ ಜಾಮೀನು ನೀಡಬೇಕೆಂದು ಕ್ಯಾಥೋಲಿಕ್ ಚರ್ಚ್ ಮಾಜಿ ಫಾದರ್ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಕೂಡ ತಿರಸ್ಕರಿಸಿರುವ ನ್ಯಾಯಮೂರ್ತಿ ವಿನೀತ್ ಶರಣ್ ಮತ್ತು ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರ ನ್ಯಾಯಪೀಠ ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ಎಲ್ಲವನ್ನೂ ಗಮನಿಸಿ ಹೈಕೋರ್ಟ್​ ಆರೋಪಿಗೆ 20 ವರ್ಷಗಳ ಶಿಕ್ಷೆ ಘೋಷಿಸಿದೆ. ಹೀಗಾಗಿ, ಈ ಪ್ರಕರಣದಲ್ಲಿ ನಾವು ಮಧ್ಯ ಪ್ರವೇಶಿಸಲು ಬಯಸುವುದಿಲ್ಲ. ಹೈಕೋರ್ಟ್ ನೀಡಿರುವ ತೀರ್ಪು ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಅತ್ಯಾಚಾರವೆಸಗಿದ್ದ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಇದೀಗ 53 ವರ್ಷವಾಗಿರುವ ಆರೋಪಿ 21 ವರ್ಷದ ಸಂತ್ರಸ್ತೆ ಅಪ್ರಾಪ್ತೆಯಾಗಿರುವಾಗಲೇ ಅತ್ಯಾಚಾರವೆಸಗಿದ್ದರು. ಇದರಿಂದ ಆಕೆ ಗರ್ಭಿಣಿಯಾಗಿದ್ದಳು. ಇದೀಗ ಆಕೆಯೇ ತನ್ನ ಮೇಲೆ ಅತ್ಯಾಚಾರವೆಸಗಿದವನನ್ನು ಬಿಡುಗಡೆಗೊಳಿಸಿ ಎಂದು ಹೇಳಿದರೂ ಆತನ ಶಿಕ್ಷೆ ಮುಗಿಯುವವರೆಗೂ ಅದು ಅಸಾಧ್ಯ ಎಂದು ಸಂತ್ರಸ್ತೆಯ ಮನವಿಯನ್ನು ಕೂಡ ತಿರಸ್ಕರಿಸಿದೆ. ಆ ಸಂತ್ರಸ್ತೆ ಟ್ರಯಲ್ ಕೋರ್ಟ್​ಗೆ ಅರ್ಜಿ ಸಲ್ಲಿಸಿ, ಆರೋಪಿಯನ್ನು ಮದುವೆಯಾಗಲು ಅನುಮತಿ ನೀಡುವಂತೆ ಮನವಿ ಮಾಡಬಹುದು ಎಂದು ಸಲಹೆ ನೀಡಿದೆ.

2017ರಲ್ಲಿ ಕೇರಳದಲ್ಲಿ ಈ ಅತ್ಯಾಚಾರ ಪ್ರಕರಣ ನಡೆದಿತ್ತು. ಆಗ ಸಂತ್ರಸ್ತೆಗೆ 18 ವರ್ಷ ತುಂಬಿರಲಿಲ್ಲ. ಆಕೆಯ ಮೇಲೆ ಕ್ಯಾಥೋಲಿಕ್ ಚರ್ಚ್ ಫಾದರ್ ಆಗಿದ್ದ ರಾಬಿನ್ ವಡಕ್ಕಾಂಚೇರಿ ಅತ್ಯಾಚಾರ ನಡೆಸಿದ್ದರು. ಆಗ ಆತನಿಗೆ 20 ವರ್ಷ ಜೈಲು ಶಿಕ್ಷೆ ಘೋಷಣೆಯಾಗಿತ್ತು. ಆದರೆ, ಯುವತಿ ಮಗುವಿಗೆ ಜನ್ಮ ನೀಡಿದ ಬಳಿಕ ಆ ಫಾದರ್​ನನ್ನು ಮದುವೆಯಾಗಲು ನಿರ್ಧರಿಸಿದ್ದಳು. ಇದಕ್ಕೆ ಆತನೂ ಒಪ್ಪಿಗೆ ನೀಡಿದ್ದ. ಹೀಗಾಗಿ, ಈ ಪ್ರಕರಣವನ್ನು ಖುಲಾಸೆ ಮಾಡಿ, ಆರೋಪಿಯನ್ನು ಬಿಡುಗಡೆ ಮಾಡಬೇಕೆಂದು ಆಕೆ ಕೇರಳ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಅಲ್ಲಿ ಆಕೆಯ ಅರ್ಜಿ ತಿರಸ್ಕೃತಗೊಂಡಿದ್ದರಿಂದ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಳು. ಅಲ್ಲಿ ಕೂಡ ಆಕೆಯ ಅರ್ಜಿ ತಿರಸ್ಕೃತಗೊಂಡಿದೆ.

ಇದನ್ನೂ ಓದಿ: ಮದುವೆಗೆ ಒಪ್ಪದೆ ಅತ್ಯಾಚಾರಿ ಪರಾರಿ; ಪೊಲೀಸ್ ಠಾಣೆಯಲ್ಲೇ ಮಗುವಿಗೆ ಜನ್ಮ ಕೊಟ್ಟ 14 ವರ್ಷದ ಬಾಲಕಿ!

ಗೋವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಹೆಣ್ಣು ಮಕ್ಕಳು ರಾತ್ರಿ ಹೊರಗೆ ಹೋಗಿದ್ದೇಕೆ ಎಂದು ಕೇಳಿದ ಸಿಎಂ ಪ್ರಮೋದ್ ಸಾವಂತ್

(Supreme Court Dismisses Pleas Of Kerala Rape Survivor To Marry Her Assaulter Ex Catholic Priest)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್