AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಹೆಣ್ಣು ಮಕ್ಕಳು ರಾತ್ರಿ ಹೊರಗೆ ಹೋಗಿದ್ದೇಕೆ ಎಂದು ಕೇಳಿದ ಸಿಎಂ ಪ್ರಮೋದ್ ಸಾವಂತ್

Goa gangrape case: "ಅವರು ಇಡೀ ರಾತ್ರಿ ಬೀಚ್ ನಲ್ಲಿದ್ದರು, ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು" ಹದಿಹರೆಯದವರು, ವಿಶೇಷವಾಗಿ ಅಪ್ರಾಪ್ತ ವಯಸ್ಕರು, ಕಡಲತೀರಗಳಲ್ಲಿ ರಾತ್ರಿ ಕಳೆಯಬಾರದು ಎಂದು ಸಾವಂತ್ ಹೇಳಿದ್ದಾರೆ.

ಗೋವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಹೆಣ್ಣು ಮಕ್ಕಳು ರಾತ್ರಿ ಹೊರಗೆ ಹೋಗಿದ್ದೇಕೆ ಎಂದು ಕೇಳಿದ ಸಿಎಂ ಪ್ರಮೋದ್ ಸಾವಂತ್
ಗೋವಾ ಸಿಎಂ ಪ್ರಮೋದ್ ಸಾವಂತ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 29, 2021 | 2:54 PM

Share

ಪಣಜಿ: ಕಡಲತೀರಗದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಕ್ಕಳು ರಾತ್ರಿಹೊತ್ತು ಕಡಲ ತೀರದಲ್ಲಿ ಏನು ಮಾಡುತ್ತಿದ್ದರು ಎಂಬುದರ ಬಗ್ಗೆ ಅವರ ಪೋಷಕರನ್ನು ಕೇಳಬೇಕು ಎಂದು ಹೇಳಿದ್ದಾರೆ.“14 ವರ್ಷದ ಮಕ್ಕಳು ಇಡೀ ರಾತ್ರಿ ಬೀಚ್‌ನಲ್ಲಿದ್ದಾಗ, ಪೋಷಕರು ಅದರ ಬಗ್ಗೆ ಕೇಳಬೇಕು, ಮಕ್ಕಳು ಪೋಷಕರ ಮಾತು ಕೇಳದೇ ಇರುವುದಕ್ಕೆ ನಾವು ಸರ್ಕಾರ ಮತ್ತು ಪೊಲೀಸರ ಮೇಲೆ ಹೊಣೆ ಹೊರಿಸಲು ಸಾಧ್ಯವಿಲ್ಲ”ಎಂದು ಸಾವಂತ್ ಬುಧವಾರ ಸದನದಲ್ಲಿ ನಡೆದ ಚರ್ಚೆ ವೇಳೆ ಹೇಳಿದ್ದಾರೆ. ಗೃಹ ಖಾತೆಯನ್ನೂ ಸಹ ಹೊಂದಿರುವ ಸಾವಂತ್, ತಮ್ಮ ಮಕ್ಕಳ ಸುರಕ್ಷತೆಯನ್ನು ಖಾತರಿಪಡಿಸುವ ಜವಾಬ್ದಾರಿ ಪೋಷಕರ ಮೇಲಿದೆ ಮತ್ತು ತಮ್ಮ ಮಕ್ಕಳನ್ನು, ವಿಶೇಷವಾಗಿ ಅಪ್ರಾಪ್ತ ವಯಸ್ಕರನ್ನು ರಾತ್ರಿಯಲ್ಲಿ ಹೊರಗೆ ಬಿಡಬಾರದು ಎಂದು ಹೇಳಿದ್ದಾರೆ.

ಕರಾವಳಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ಆಲ್ಟೋನ್ ಡಿ ಕೋಸ್ಟಾ ಗುರುವಾರ ಹೇಳಿದ್ದಾರೆ. “ರಾತ್ರಿಯಲ್ಲಿ ತಿರುಗಾಡುವಾಗ ನಾವು ಯಾಕೆ ಭಯಪಡಬೇಕು? ಅಪರಾಧಿಗಳು ಜೈಲಿನಲ್ಲಿರಬೇಕು ಮತ್ತು ಕಾನೂನು ಪಾಲಿಸುವ ನಾಗರಿಕರು ಮುಕ್ತವಾಗಿ ತಿರುಗಾಡಬೇಕು, ”ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡುತ್ತಿರುವುದು ಅಸಹ್ಯಕರವಾಗಿದೆ ಎಂದು ಗೋವಾ ಫಾರ್ವರ್ಡ್ ಪಕ್ಷದ ಶಾಸಕ ವಿಜಯ್ ಸರ್ದೇಸಾಯಿ ಹೇಳಿದ್ದಾರೆ. “ನಾಗರಿಕರ ಸುರಕ್ಷತೆಯು ಪೊಲೀಸ್ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅವರು ಅದನ್ನು ನಮಗೆ ಒದಗಿಸಲು ಸಾಧ್ಯವಾಗದಿದ್ದರೆ, ಸಿಎಂಗೆ ಹುದ್ದೆಯಲ್ಲಿ ಕುಳಿತುಕೊಳ್ಳಲು ಯಾವುದೇ ಹಕ್ಕಿಲ್ಲ, ”ಎಂದಿದ್ದಾರೆ.

ಇದು ಸುರಕ್ಷಿತವಲ್ಲ ಎಂದು ಹೇಳಿಕೊಂಡು ತಮ್ಮ ಮಕ್ಕಳನ್ನು ರಾತ್ರಿಯಲ್ಲಿ ಹೊರಹೋಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಗೋವಾ ಸಿಎಂ ಪೋಷಕರನ್ನು ದೂಷಿಸುತ್ತಿರುವುದು ಆಘಾತಕಾರಿ. ನಮ್ಮ ಭದ್ರತೆಯನ್ನು ರಾಜ್ಯ ಸರ್ಕಾರ ನಮಗೆ ಭರವಸೆ ನೀಡದಿದ್ದರೆ, ಅದನ್ನು ಯಾರು ನೀಡಬಹುದು? ಗೋವಾ ಮಹಿಳೆಯರಿಗೆ ಸುರಕ್ಷಿತ ರಾಜ್ಯ ಎಂಬ ಇತಿಹಾಸವನ್ನು ಹೊಂದಿದೆ, ಆ ಟ್ಯಾಗ್ ಬಿಜೆಪಿಯ  ಗೋವಾ ನಿಯಮದಲ್ಲಿ ಕಳೆದುಹೋಗುತ್ತಿದೆ  ”ಎಂದು ಪಕ್ಷೇತರ ಶಾಸಕ ರೋಹನ್ ಖೌಂಟೆ ಟ್ವೀಟ್ ಮಾಡಿದ್ದಾರೆ.

“ನಾವು ನೇರವಾಗಿ ಪೊಲೀಸರನ್ನು ದೂಷಿಸುತ್ತೇವೆ, ಆದರೆ ಪಾರ್ಟಿಗಾಗಿ ಬೀಚ್‌ಗೆ ಹೋದ 10 ಯುವಕರಲ್ಲಿ ನಾಲ್ವರು ಇಡೀ ರಾತ್ರಿ ಬೀಚ್‌ನಲ್ಲಿಯೇ ಉಳಿದಿದ್ದರು ಮತ್ತು ಉಳಿದ ಆರು ಮಂದಿ ಮನೆಗೆ ಹೋಗಿದ್ದಾರೆ” ಎಂದು ಸಾವಂತ್ ಸದನದಲ್ಲಿ ಹೇಳಿದ್ದಾರೆ.

“ಅವರು ಇಡೀ ರಾತ್ರಿ ಬೀಚ್ ನಲ್ಲಿದ್ದರು, ಇಬ್ಬರು ಹುಡುಗರು ಮತ್ತು ಇಬ್ಬರು ಹುಡುಗಿಯರು” ಹದಿಹರೆಯದವರು, ವಿಶೇಷವಾಗಿ ಅಪ್ರಾಪ್ತ ವಯಸ್ಕರು, ಕಡಲತೀರಗಳಲ್ಲಿ ರಾತ್ರಿ ಕಳೆಯಬಾರದು ಎಂದು ಸಾವಂತ್ ಹೇಳಿದ್ದಾರೆ.

ಗೋವಾ ರಾಜಧಾನಿಯಿಂದ ದಕ್ಷಿಣಕ್ಕೆ 30 ಕಿ.ಮೀ ದೂರದಲ್ಲಿರುವ ಬೆನೌಲಿಮ್ ಕಡಲತೀರದಲ್ಲಿ ಬಾಲಕಿಯರ ಜೊತೆಗಿದ್ದ ಹುಡುಗರನ್ನು ಥಳಿಸಿದ ನಂತರ ನಾಲ್ವರು ಪುರುಷರು, ಅವರಲ್ಲಿ ಒಬ್ಬ ಸರ್ಕಾರಿ ನೌಕರ (ಕೃಷಿ ಇಲಾಖೆಯ ಚಾಲಕ) ಪೊಲೀಸರು ಎಂದು ಹೇಳಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಾವಂತ್ ವಿಧಾನಸಭೆಗೆ ತಿಳಿಸಿದರು.

ನಿನ್ನೆ ಸದನದಲ್ಲಿ ನಡೆದ ಚರ್ಚೆಯ ವೇಳೆ ಶಾಸಕರೊಬ್ಬರು “ಪ್ರಭಾವಿ ವ್ಯಕ್ತಿ” ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದು ಮತ್ತೊಬ್ಬ ಪ್ರತಿಪಕ್ಷದ ಸದಸ್ಯರು ಸಚಿವರು ಪೊಲೀಸರನ್ನು ಕರೆದು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸ್ಪೀಕರ್ ರಾಜೇಶ್ ಪಟ್ನೆಕರ್ ಅವರು ಈ ಹೇಳಿಕೆಗಳನ್ನು ವಿಚಾರಣೆಯಿಂದ ಹೊರಹಾಕಿದ್ದರು.

ಇದನ್ನೂ ಓದಿ: Goa Floods: ಗೋವಾದಲ್ಲಿ 40 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ; ನೂರಾರು ಜನರ ರಕ್ಷಣೆ, ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಸರ್ವನಾಶ

ಇದನ್ನೂ ಓದಿ: Chhota Rajan: ಭೂಗತ ಪಾತಕಿ ಛೋಟಾ ರಾಜನ್​ ಏಮ್ಸ್​​ಗೆ ದಾಖಲು; ಜಾಮೀನು ನೀಡಬೇಡಿ ಎಂದು ಸಿಬಿಐನಿಂದ ಅರ್ಜಿ

(Goa gangrape case CM Pramod Sawant faces flak for remarking why 14-year-olds stay on the beach the whole night)

ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
ವಿರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
‘ತುಂಬಾ ಸಣ್ಣ ಜೀವನ, ಪಾಸಿಟಿವ್ ಆಗಿರೋಣ’; ರಾಗಿಣಿ ದ್ವಿವೇದಿ ಹೀಗ್ಯಾಕಂದ್ರು?
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ದೇವದತ್ ಪಡಿಕ್ಕಲ್ 4ನೇ ಅರ್ಧಶತಕ: ಹುಬ್ಬಳ್ಳಿ ಟೈಗರ್ಸ್​ಗೆ ಭರ್ಜರಿ ಜಯ
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
ಉಫ್... ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ ಜ್ಯುವೆಲ್
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ