Chhota Rajan: ಭೂಗತ ಪಾತಕಿ ಛೋಟಾ ರಾಜನ್​ ಏಮ್ಸ್​​ಗೆ ದಾಖಲು; ಜಾಮೀನು ನೀಡಬೇಡಿ ಎಂದು ಸಿಬಿಐನಿಂದ ಅರ್ಜಿ

ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್​ ಅಲ್ಲ. ಅವನ ಕೇಸ್​ಗಳನ್ನು ಉಳಿದವರ ಕೇಸ್​ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್​ಗೆ ಬುಧವಾರ ಅರ್ಜಿ ಸಲ್ಲಿಸಿದೆ.

Chhota Rajan: ಭೂಗತ ಪಾತಕಿ ಛೋಟಾ ರಾಜನ್​ ಏಮ್ಸ್​​ಗೆ ದಾಖಲು; ಜಾಮೀನು ನೀಡಬೇಡಿ ಎಂದು ಸಿಬಿಐನಿಂದ ಅರ್ಜಿ
ಛೋಟಾ ರಾಜನ್​
Follow us
TV9 Web
| Updated By: Lakshmi Hegde

Updated on: Jul 29, 2021 | 1:40 PM

ಭೂಗತ ಪಾತಕಿ ರಾಜೇಂದ್ರ ನಿಖಾಲ್ಜೆ ಅಲಿಯಾಸ್​ ಛೋಟಾ ರಾಜನ್ (Chhota Rajan) ದೆಹಲಿಯ ಏಮ್ಸ್​ (AIIMS) ಆಸ್ಪತ್ರೆಗೆ ದಾಖಲಾಗಿದ್ದಾರೆ. ಜು.27ರಂದೇ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ ಎಂದು ತಿಹಾರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 61ವರ್ಷದ ಅವರಿಗೆ ಸದ್ಯ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಏಮ್ಸ್​ಗೆ ದಾಖಲಿಸಲಾಗಿದೆ. ಈ ಮೊದಲು ಕೊವಿಡ್​ 19 ಪಾಸಿಟಿವ್​ ಆಗಿ ಅಡ್ಮಿಟ್ ಆಗಿದ್ದರು. ಭೂಗತ ಪಾತಕಿ ಛೋಟಾ ರಾಜನ್ ಇಂಡೋನೇಷಿಯಾದ ಬಾಲಿಯಲ್ಲಿ 2015ರಲ್ಲಿ ಬಂಧಿಸಲಾಗಿತ್ತು. ಅದಾದ ಬಳಿಕ ಭಾರತಕ್ಕೆ ವಾಪಸ್ ಕರೆತಂದು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. 2011ರಲ್ಲಿ ನಡೆದಿದ್ದ ಪತ್ರಕರ್ತ ಜೆ.ಡೇ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2018ರಲ್ಲಿ ಛೋಟಾ ರಾಜನ್​ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇನ್ನು ಛೋಟಾ ರಾಜನ್ ಸಾಮಾನ್ಯ ಕ್ರಿಮಿನಲ್​ ಅಲ್ಲ. ಅವನ ಕೇಸ್​ಗಳನ್ನು ಉಳಿದವರ ಕೇಸ್​ಗಳಂತೆ ಪರಿಗಣಿಸಬಾರದು ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸಿಬಿಐ (CBI) ಬಾಂಬೆ ಹೈಕೋರ್ಟ್​ಗೆ ಬುಧವಾರ ಅರ್ಜಿ ಸಲ್ಲಿಸಿದೆ. ಛೋಟಾ ರಾಜನ್​ ವಿರುದ್ಧ ವಿಚಾರಣೆ ಮಾಡಬೇಕಾದ ಹಲವು ಪ್ರಕರಣಗಳು ಬಾಕಿ ಇವೆ. ಅವನು ರಾಷ್ಟ್ರದ ಪಾಲಿಗೆ ಝಡ್ ಪ್ಲಸ್​ ಸೆಕ್ಯೂರಿಟಿ ಬೆದರಿಕೆ ಎಂದು ವಿಶೇಷ ಸಾರ್ವಜನಿಕ ಪ್ರಾಸಿಕ್ಯೂಟರ್ ಪರ್ದೀಪ್​ ಘಾರಟ್​, ಬಾಂಬೆ ಹೈಕೋರ್ಟ್​ನ ಅನುಜಾ ಪ್ರಭುದೇಸಾಯ್​ ನೇತೃತ್ವದ ಪೀಠಕ್ಕೆ ತಿಳಿಸಿದ್ದಾರೆ. ಒಟ್ಟು ಮೂರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಜಾಮೀನು ನೀಡುವಂತೆ ಛೋಟಾ ರಾಜನ್​ ಬಾಂಬೆ ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Viral Video: ಯಮಹಾ ಬೈಕ್​ ಓಡಿಸಿ ಕ್ಯಾಮರಾಕ್ಕೆ ಪೋಸ್​ ಕೊಟ್ಟ ವೃದ್ದೆ! ಯುವಕರೆಲ್ಲಾ ಬೆರಗಾಗುವ ವಿಡಿಯೋವಿದು​

Underworld don Chhota Rajan Suffering from stomach ache and admitted to Delhi AIIMS