CBSE Class 10 Board Result 2021: ಶೀಘ್ರದಲ್ಲೇ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ

ಸಿಬಿಎಸ್​ಇ 10 ಬೋರ್ಡ್​ ರಿಸಲ್ಟ್​ 2021: ಸಿಬಿಎಸ್​ಇ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಲು cbseresults.nic.in ವೆಬ್​ಸೈಟ್​ಗೆ ಭೇಟಿ ನೀಡಬಹುದು. cbse.gov.in ಮತ್ತು cbse.nic.in ವೆಬ್​ಸೈಟ್​ನಲ್ಲಿ ಕೂಡ ಫಲಿತಾಂಶ ತಿಳಿಯಬಹುದು.

CBSE Class 10 Board Result 2021: ಶೀಘ್ರದಲ್ಲೇ ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Jul 29, 2021 | 3:27 PM

ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗಲಿದೆ. ಇನ್ನೆರಡು ದಿನಗಳೊಳಗೆ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಆದರೆ, ನಿಖರವಾದ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಸದ್ಯದಲ್ಲೇ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶವನ್ನು ವೀಕ್ಷಿಸಲು ಹೀಗೆ ಮಾಡಿ…

ಸಿಬಿಎಸ್​ಇ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಲು cbseresults.nic.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಹಾಗೇ, cbse.gov.in ಮತ್ತು cbse.nic.in ವೆಬ್​ಸೈಟ್​ನಲ್ಲಿ ಕೂಡ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯಬಹುದು. ಜುಲೈ 31ರೊಳಗೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದ್ದು, ದಿನಾಂಕ ಹಾಗೂ ಸಮಯವನ್ನು ಇನ್ನೂ ಖಚಿತಗೊಳಿಸಿಲ್ಲ.

ಈ ಮೊದಲಿನ ವರ್ಷಗಳಲ್ಲಿ ಮೊದಲು ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಅದಾದ ಒಂದೆರಡು ದಿನಗಳ ನಂತರ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಆದರೆ, ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಿಬಿಎಸ್​ಇ 10ನೇ ತರಗತಿಗೆ ಯಾವುದೇ ಪರೀಕ್ಷೆಗಳನ್ನೂ ನಡೆಸಿಲ್ಲ. ಪರೀಕ್ಷೆ ನಡೆಸದೆ ಫಲಿತಾಂಶ ನೀಡುವುದರಿಂದ 10ನೇ ತರಗತಿ ಪರೀಕ್ಷೆಯ ಫಲಿತಾಂಶವೇ ಮೊದಲು ಪ್ರಕಟವಾದರೂ ಅಚ್ಚರಿಯಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಮೇಲೆ ನಮೂದಿಸಲ್ಪಟ್ಟ ವೆಬ್​ಸೈಟ್​ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

ಸಿಬಿಎಸ್​ಇ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಆನ್​​ಲೈನ್​ನಲ್ಲಿ ಬಿಡುಗಡೆ ಮಾಡುವ ಜೊತೆಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ (Mark Sheet)ಯನ್ನು ಡಿಜಿಲಾಕರ್​ (Digilocker)ನಲ್ಲೂ ಪ್ರಕಟಿಸಲಿದೆ. ಇಲ್ಲಿ ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ರೋಲ್ ​ನಂಬರ್​ ಅಗತ್ಯವಿರುವುದಿಲ್ಲ. ಆಧಾರ್​ ಕಾರ್ಡ್​ ನಂಬರ್​ ಮತ್ತು ಫೋನ್​ ನಂಬರ್​ ನಮೂದಿಸಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಹಾಗೇ, ಎಸ್​ಎಂಎಸ್ ಮೂಲಕವೂ ಪರೀಕ್ಷಾ ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: CBSE Class 12 result 2021: ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ಫಲಿತಾಂಶದ ದಿನಾಂಕ ಮುಂದೂಡಿಕೆ; ಇಲ್ಲಿದೆ ಪೂರ್ತಿ ಮಾಹಿತಿ

CBSE Class 10, 12 Board Exam 2022: 2022ನೇ ಸಾಲಿನಲ್ಲಿ ಸಿಬಿಎಸ್​ಇ ಬೋರ್ಡ್ 10 ಮತ್ತು 12ನೇ ತರಗತಿ 2 ಭಾಗಗಳಾಗಿ ವಿಂಗಡಣೆ

(CBSE Class 10 Board Exam 2021 results to be declared Soon here is Where and How to Check the Result)

Published On - 3:23 pm, Thu, 29 July 21