CBSE Class 10, 12 Board Exam 2022: 2022ನೇ ಸಾಲಿನಲ್ಲಿ ಸಿಬಿಎಸ್​ಇ ಬೋರ್ಡ್ 10 ಮತ್ತು 12ನೇ ತರಗತಿ 2 ಭಾಗಗಳಾಗಿ ವಿಂಗಡಣೆ

ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆ 2022: ಸಿಬಿಎಸ್​ಇ 12 ನೇ ತರಗತಿ ಪರೀಕ್ಷೆಗಳನ್ನು ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ.

CBSE Class 10, 12 Board Exam 2022: 2022ನೇ ಸಾಲಿನಲ್ಲಿ ಸಿಬಿಎಸ್​ಇ ಬೋರ್ಡ್ 10 ಮತ್ತು 12ನೇ ತರಗತಿ 2 ಭಾಗಗಳಾಗಿ ವಿಂಗಡಣೆ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on:Jul 05, 2021 | 8:41 PM

ದೆಹಲಿ: ಸಿಬಿಎಸ್​ಇ 12 ನೇ ತರಗತಿ ಪರೀಕ್ಷೆಗಳನ್ನು ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಘೋಷಣೆ ಮಾಡಿದೆ. 2022ನೇ ಸಾಲಿನಲ್ಲಿ ಸಿಬಿಎಸ್​ಇ ಬೋರ್ಡ್ 10 ಮತ್ತು 12ನೇ ತರಗತಿಯ ಪರೀಕ್ಷಾ ಯೋಜನೆಗಳನ್ನು ಎರಡು ಭಾಗಗಳಾಗಿ ಬೋರ್ಡ್ ವಿಭಜಿಸಿದೆ. ಈ ಕುರಿತು ಈಗಷ್ಟೇ ಮಹತ್ವದ ಘೋಷಣೆ ಮಾಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. 

ಒಟ್ಟಾರೆ ಸಿಲೇಬಸ್​ನ್ನು ಪ್ರತಿ ಭಾಗಕ್ಕೂ ಶೇಕಡಾ 50ರಂತೆ ವಿಂಗಡಿಸಿ ಹಂಚಲಾಗುವುದು. ಜುಲೈ 2021 ರಲ್ಲಿ ಅಧಿಸೂಚಿಸಬೇಕಾದ ಕೊನೆಯ ಶೈಕ್ಷಣಿಕ ವರ್ಷದಂತೆಯೇ 2021-22 ಅನ್ನು ನಿರ್ವಹಿಸಲಾಗುವುದು ಎಂದು ಸಿಬಿಎಸ್​ಇ ಬೋರ್ಡ್ ತಿಳಿಸಿದೆ.

ಈ ಹಿಂದೆ ಸಿಬಿಎಸ್​ಇ, ಐಎಸ್​ಸಿಇ 12ನೇ ತರಗತಿ ಪರೀಕ್ಷೆ ರದ್ದತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡಿದ್ದ ಸುಪ್ರೀಂಕೋರ್ಟ್ ಕೊವಿಡ್ 2ನೇ ಅಲೆ ವ್ಯಾಪಿಸಿರುವ ಹಿನ್ನೆಲೆಯಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸುವ ಕುರಿತು ಸೆಂಟ್ರಲ್ ಬೋರ್ಡ್ ಅಫ್ ಸೆಕಂಡರಿ ಎಜ್ಯುಕೇಶನ್ (Central Board of Secondary Education – CBSE) ಮತ್ತು ಸಿಐಸಿಎಸ್​ಇ (Council for the Indian School Certificate Examinations – CISCE) ಸಂಸ್ಥೆಗಳು ತೆಗೆದುಕೊಂಡಿದ್ದ ಪರೀಕ್ಷೆ ರದ್ದು ನಿರ್ಧಾರವನ್ನು ​ಕೋರ್ಟ್ ಎತ್ತಿಹಿಡಿದಿತ್ತು. ಪರೀಕ್ಷೆ ರದ್ದತಿಯನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​  ವಜಾಗೊಳಿಸಿತ್ತು.

ಮೌಲ್ಯಮಾಪನಕ್ಕಾಗಿ ಎರಡೂ ಸಂಸ್ಥೆಗಳು ರೂಪಿಸಿದ್ದ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿಗಳನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತ್ತು. ಸಿಬಿಎಸ್​ಇ ಮತ್ತು ಐಸಿಎಸ್​ಇ ರೂಪಿಸಿರುವ ಕ್ರಮಗಳಲ್ಲಿ ನಾವು ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ ಎನಿಸುತ್ತಿಲ್ಲ. ಎಲ್ಲ ವಿದ್ಯಾರ್ಥಿಗಳ ಹಿತವನ್ನು ನಾವು ಗಮನದಲ್ಲಿರಿಸಿಕೊಂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್​ವಿಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಅವರಿದ್ದ ಪೀಠವು ಹೇಳಿತ್ತು.

ಪರೀಕ್ಷೆಗಳನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ವಜಾಗೊಳಿಸಿರುವ ಕುರಿತು ಪ್ರತಿಕ್ರಿಯಿಸಿದ ನ್ಯಾಯಪೀಠವು, ಈ ಕುರಿತು ನಾವು ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಂಡಿದ್ದೇವೆ. ಸಾರ್ವಜನಿಕ ಹಿತವನ್ನು ಗಮನದಲ್ಲಿರಿಸಿಕೊಂಡು ಯೋಚಿಸಬೇಕಾಗಿದೆ. ಈ ವಿಚಾರದಲ್ಲಿ ಅರ್ಜಿದಾರರ ಪರ ತೀರ್ಪುಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು

ಐಐಟಿ, ಜೆಇಇ ಅಥವಾ ಕ್ಲಾಟ್ (IIT-JEE or CLAT) ಪರೀಕ್ಷೆಗಳು ನಡೆಯಬಹುದಾದರೆ 12ನೇ ತರಗತಿಯ ಪರೀಕ್ಷೆಗಳು ಏಕೆ ರದ್ದಾಗಬೇಕು ಎಂದು ಅನ್ಷುಲ್ ಗುಪ್ತಾ ಎಂಬುವವರು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ನ್ಯಾಯಪೀಠವು, ಈ ಕುರಿತು ಆಯಾ ಮಂಡಳಿಗಳು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಮಧ್ಯಪ್ರವೇಶಿಸಲು ಆಗುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ:

 ಕರ್ನಾಟಕದ 14948 ಅಂಗನವಾಡಿಗಳಲ್ಲಿ ವಿದ್ಯುತ್, 13690ರಲ್ಲಿ ಶೌಚಾಲಯ ಇಲ್ಲ: ಸೌಕರ್ಯ ಕಲ್ಪಿಸಲು ಹೈಕೋರ್ಟ್​ ಗಡುವು

2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್​ಗೆ ತಿಳಿಸಿದ ಸರ್ಕಾರ

(CBSE announces Class 10 12 board exam schemes for 2022 academic session to be divided into 2 terms)

Published On - 8:21 pm, Mon, 5 July 21

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ