ಕರ್ನಾಟಕದ 14948 ಅಂಗನವಾಡಿಗಳಲ್ಲಿ ವಿದ್ಯುತ್, 13690ರಲ್ಲಿ ಶೌಚಾಲಯ ಇಲ್ಲ: ಸೌಕರ್ಯ ಕಲ್ಪಿಸಲು ಹೈಕೋರ್ಟ್ ಗಡುವು
2021ರ ಡಿಸೆಂಬರ್ 31ರ ಒಳಗಾಗಿ ಅಂಗನವಾಡಿಗಳಲ್ಲಿ ವಿದ್ಯುತ್, ಫ್ಯಾನ್ ಒದಗಿಸಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಜತೆಗೆ ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಜೂನ್ 30, 2022ರೊಳಗೆ ಶೌಚಾಲಯ ಕಲ್ಪಿಸುವಂತೆಯೂ ಕೋರ್ಟ್ ಗಂಭೀರ ಸೂಚನೆ ನೀಡಿದೆ.
ಬೆಂಗಳೂರು: ರಾಜ್ಯದ ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಸಮಾಧಾನಕರವಾಗಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದ 65,911 ಅಂಗನವಾಡಿಗಳ ಪೈಕಿ 14,948 ಕೇಂದ್ರಗಳಲ್ಲಿ ವಿದ್ಯುತ್ ಇಲ್ಲ. 18,974 ಅಂಗನವಾಡಿಗಳಲ್ಲಿ ಫ್ಯಾನ್ ಇಲ್ಲ. 13,690 ಅಂಗನವಾಡಿಗಳಲ್ಲಿ ಶೌಚಾಲಯವಿಲ್ಲ ಎಂಬ ಮಾಹಿತಿಯನ್ನು ಹೈಕೋರ್ಟ್ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಶೌಚಾಲಯ, ವಿದ್ಯುತ್, ಫ್ಯಾನ್ಗಳಂತಹ ಮೂಲಭೂತ ಅವಶ್ಯಕತೆ ಮತ್ತು ಮೂಲಸೌಕರ್ಯ ಇಲ್ಲದಿದ್ದರೆ ಕಾರ್ಯನಿರ್ವಹಣೆ ಅಸಾಧ್ಯ ಎಂದು ಹೈಕೋರ್ಟ್ ವಿಭಾಗೀಯ ಪೀಠ ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದೆ.
2021ರ ಡಿಸೆಂಬರ್ 31ರ ಒಳಗಾಗಿ ಅಂಗನವಾಡಿಗಳಲ್ಲಿ ವಿದ್ಯುತ್, ಫ್ಯಾನ್ ಒದಗಿಸಲು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. ಜತೆಗೆ ರಾಜ್ಯದ ಎಲ್ಲ ಅಂಗನವಾಡಿಗಳಲ್ಲಿ ಜೂನ್ 30, 2022ರೊಳಗೆ ಶೌಚಾಲಯ ಕಲ್ಪಿಸುವಂತೆಯೂ ಕೋರ್ಟ್ ಗಂಭೀರ ಸೂಚನೆ ನೀಡಿದೆ. ಅಲ್ಲದೇ ಸರ್ಕಾರಿ ಜಾಗದಲ್ಲಿರುವ 3,524 ಅಂಗನವಾಡಿಗಳಿಗೆ ಡಿಸೆಂಬರ್ 31ರೊಳಗೆ ಶೌಚಾಲಯ ಸೌಲಭ್ಯವನ್ನು ಕಲ್ಪಿಸುವಂತೆಯೂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
2nd PU Repeaters Exam 2021: ದ್ವಿತೀಯ ಪಿಯುಸಿ ರಿಪೀಟರ್ಸ್ ಪರೀಕ್ಷೆ ಇಲ್ಲದೇ ಪಾಸ್; ಹೈಕೋರ್ಟ್‌ಗೆ ತಿಳಿಸಿದ ಸರ್ಕಾರ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಎಲ್ಲಾ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗುವುದು ಎಂದು ಹೈಕೋರ್ಟ್‌ಗೆ ತಿಳಿಸಿದೆ. ಶೇ.35ರಷ್ಟು ಅಂಕ ನೀಡಿ ಎಲ್ಲ ರಿಪೀಟರ್ಸ್ ವಿದ್ಯಾರ್ಥಿಗಳನ್ನೂ ತೇರ್ಗಡೆ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶೇ.35 ರ ಜೊತೆ ಶೇ.5 ರಷ್ಟು ಗ್ರೇಸ್ ಮಾರ್ಕ್ಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ದ್ವಿತೀಯ ಪಿಯುಸಿ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಅಗಸ್ಟ್ 31ರೊಳಗೆ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ, ಸೆಪ್ಟೆಂಬರ್ 20ರೊಳಗೆ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಸೂಚನೆ ನೀಡಿದೆ. ಕೊವಿಡ್ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದ್ದು, ಹಿಂದಿನ ವರ್ಷದ ಅಂಕವನ್ನು ತಿರಸ್ಕರಿಸಿದವರಿಗೆ ಆಯ್ಕೆ ನೀಡಲು ತಿಳಿಸಿದೆ. ಖಾಸಗಿ ಪರೀಕ್ಷಾರ್ಥಿಗಳು ಹಿಂದಿನ ಬಾರಿಯ ಅಂಕವನ್ನೇ ಪಡೆಯಬಹುದು. ಅಥವಾ ಪರೀಕ್ಷೆ ನಡೆಸಿದಾಗ ಬರೆಯಬಹುದು ಎಂದು ನಿರ್ದೇಶನ ನೀಡುವ ಕೋರ್ಟ್, ಅಂಕ ಉತ್ತಮಪಡಿಸಿಕೊಳ್ಳ ಬಯಸಿದ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿದೆ.
ಇದನ್ನೂ ಓದಿ: ಏಷ್ಯಾದಲ್ಲಿ ಕೊವಿಡ್-19: ಮೂರನೇ ಅಲೆಯ ಆತಂಕದಲ್ಲಿ ಭಾರತ; ಇತರ ರಾಷ್ಟ್ರಗಳು ಏನೇನು ಸಿದ್ಧತೆ ಮಾಡಿಕೊಂಡಿವೆ?
Co-Winನ್ನು ಇತರ ದೇಶಗಳೊಂದಿಗೆ ಹಂಚಲು ಭಾರತ ಸಿದ್ಧ: ಈ ಪೋರ್ಟಲ್‌ನಲ್ಲಿ ನೀವು ಏನೇನು ಮಾಡಬಹುದು?
(Karnataka 14948 Anganwadis in the state have no electricity 13,690 Anganwadis have no toilet High court gave the deadline to arrange)
Published On - 5:21 pm, Mon, 5 July 21