ಏಷ್ಯಾದಲ್ಲಿ ಕೊವಿಡ್-19: ಮೂರನೇ ಅಲೆಯ ಆತಂಕದಲ್ಲಿ ಭಾರತ; ಇತರ ರಾಷ್ಟ್ರಗಳು ಏನೇನು ಸಿದ್ಧತೆ ಮಾಡಿಕೊಂಡಿವೆ?
Covid-19 in Asia: ಡೆಲ್ಟಾ ರೂಪಾಂತರದ ಶೀಘ್ರ ಪ್ರಸರಣದಿಂದ ಜಗತ್ತು ಬಹಳ “ಅಪಾಯಕಾರಿ ಅವಧಿಯನ್ನು” ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸುಸ್ ಎಚ್ಚರಿಸಿದ್ದಾರೆ. ಕನಿಷ್ಠ 98 ದೇಶಗಳಲ್ಲಿ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಮತ್ತು ಅವುಗಳಲ್ಲಿ ಹಲವು ಪ್ರಬಲವಾಗುತ್ತಿದೆ
ಭಾರತ ಸೇರಿದಂತೆ ಏಷ್ಯಾದ ಹಲವಾರು ದೇಶಗಳು ಕೊವಿಡ್ ಕಾಯಿಲೆಯ ವಿರುದ್ಧ ಹೋರಾಡುತ್ತಿವೆ, ಡೆಲ್ಟಾ ರೂಪಾಂತರದ ಬೆದರಿಕೆ ಖಂಡದಾದ್ಯಂತ ಮತ್ತು ಇಡೀ ಪ್ರಪಂಚದಾದ್ಯಂತ ದೊಡ್ಡದಾಗಿದೆ. ಡೆಲ್ಟಾದಿಂದ ಸೋಂಕಿನ ಮೊದಲ ಪ್ರಕರಣವನ್ನು ಭಾರತದಲ್ಲಿ ಗುರುತಿಸಲಾಗಿದೆ ಮತ್ತು ಈಗ ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವು ಏಷ್ಯಾದಾದ್ಯಂತ ಎಚ್ಚರಿಕೆಯ ಗಂಟೆಗಳನ್ನು ಮೊಳಗಿಸುತ್ತಿದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಕ್ರಮಗಳಲ್ಲಿ ವ್ಯಾಕ್ಸಿನೇಷನ್ ಕೂಡಾ ಒಂದು ಎಂದು ತಜ್ಞರು ಹೇಳಿದ್ದು, ಕೊವಿಡ್ -19 ವ್ಯಾಕ್ಸಿನೇಷನ್ ವೇಗವು ಇಡೀ ಏಷ್ಯಾದಲ್ಲಿ ನಿಧಾನವಾಗಿದೆ. ಇದರೊಂದಿಗೆ ಭಾರತ ಸೇರಿದಂತೆ ಇಡೀ ಖಂಡದಲ್ಲಿ ಡೆಲ್ಟಾ ರೂಪಾಂತರದ ಅಪಾಯ ಹೆಚ್ಚುತ್ತಿದೆ.
ಡೆಲ್ಟಾ ರೂಪಾಂತರದ ಶೀಘ್ರ ಪ್ರಸರಣದಿಂದ ಜಗತ್ತು ಬಹಳ “ಅಪಾಯಕಾರಿ ಅವಧಿಯನ್ನು” ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸುಸ್ ಎಚ್ಚರಿಸಿದ್ದಾರೆ. ಕನಿಷ್ಠ 98 ದೇಶಗಳಲ್ಲಿ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಮತ್ತು ಅವುಗಳಲ್ಲಿ ಹಲವು ಪ್ರಬಲವಾಗುತ್ತಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ. “ಡೆಲ್ಟಾ ಹೆಚ್ಚು ಹರಡುವ ರೂಪಾಂತರಗಳನ್ನು ಒಳಗೊಂಡಿದೆ. ಇದು ಅನೇಕ ದೇಶಗಳಲ್ಲಿ ಶೀಘ್ರವಾಗಿ ಪ್ರಬಲವಾಗುತ್ತಿದೆ, ನಾವು ಈ ಸಾಂಕ್ರಾಮಿಕ ರೋಗದ ಅತ್ಯಂತ ಅಪಾಯಕಾರಿ ಅವಧಿಯಲ್ಲಿದ್ದೇವೆ” ಎಂದು ಗೆಬ್ರೆಯೆಸುಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೊರೊನಾವೈರಸ್ ಸಾಂಕ್ರಾಮಿಕದ ತೀವ್ರ ಹೊಡೆತಕ್ಕೊಳಗಾದ ಏಳು ಏಷ್ಯಾದ ದೇಶಗಳು ಇಲ್ಲಿವೆ:
1. ಭಾರತ: ಕೊವಿಡ್ -19 ಪ್ರಕರಣಗಳ ವಿಷಯದಲ್ಲಿ, ಭಾರತವು ಏಷ್ಯಾದಲ್ಲಿ ಅತಿ ಹೆಚ್ಚು ಸೋಂಕುಗಳನ್ನು ಹೊಂದಿದೆ ಮತ್ತು ವಿಶ್ವದ ಎರಡನೇ ಅತಿ ಹೆಚ್ಚು ಸೋಂಕುಗಳನ್ನು ಹೊಂದಿದೆ. ಇಲ್ಲಿಯವರೆಗೆ ಒಟ್ಟು 3.05 ಕೋಟಿ ಜನರಿಗೆ ಕೊವಿಡ್ -19 ರೋಗ ತಗುಲಿದೆ ಮತ್ತು 400,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ 4,85,350 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 2.96 ಕೋಟಿ ಜನರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ 96.97% ಕ್ಕೆ ಏರಿದೆ. ಸಾಪ್ತಾಹಿಕ ಸಕಾರಾತ್ಮಕ ದರವು ಶೇಕಡಾ 5 ಕ್ಕಿಂತ ಕಡಿಮೆಯಿದೆ. ಕೊವಿಡ್ -19 ವಿರುದ್ಧದ ವ್ಯಾಕ್ಸಿನೇಷನ್ ವಿಷಯದಲ್ಲಿ, ಇದುವರೆಗೆ ದೇಶದಲ್ಲಿ 35 ಕೋಟಿಗಿಂತಲೂ ಹೆಚ್ಚಿನ ಡೋಸ್ ನೀಡಲಾಗಿದೆ. ಜೂನ್ 11 ರಂದು ಭಾರತದಲ್ಲಿ ಡೆಲ್ಟಾ ಪ್ಲಸ್‌ನ ಮೊದಲ ಪ್ರಕರಣ ಪತ್ತೆಯಾಗಿದ್ದು, ಈವರೆಗೆ ದೇಶದಲ್ಲಿ 50 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
2. ಟರ್ಕಿ: ಏಷ್ಯಾದಲ್ಲಿ ಭಾರತದ ನಂತರ ಕೊವಿಡ್ ನಿಂದ ಹೆಚ್ಚು ಹೊಡೆತಕ್ಕೊಳಗಾದ ಎರಡನೇ ದೇಶವಾಗಿದೆ ಟರ್ಕಿ. ಈವರೆಗೆ ದೇಶದಲ್ಲಿ 54.3 ಕೋಟಿಗಿಂತಲೂ ಹೆಚ್ಚು ಕೊವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು 49,829 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ, 80,146 ಸಕ್ರಿಯ ಪ್ರಕರಣಗಳಿವೆ ಮತ್ತು 53 ಕೋಟಿ ಜನರು ಕೊವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಟರ್ಕಿಯಲ್ಲಿ 5.12 ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡಲಾಗಿದೆ. ಡೆಲ್ಟಾ ರೂಪಾಂತರದ ಅಪಾಯದ ದೃಷ್ಟಿಯಿಂದ ಟರ್ಕಿ ಇತ್ತೀಚೆಗೆ ಬಾಂಗ್ಲಾದೇಶ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ, ನೇಪಾಳ ಮತ್ತು ಶ್ರೀಲಂಕಾದಿಂದ ವಿಮಾನಗಳು ಮತ್ತು ಎಲ್ಲಾ ನೇರ ಪ್ರಯಾಣವನ್ನು ನಿಷೇಧಿಸಿತು.
3. ಇರಾನ್: ಇರಾನ್ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿದ್ದು ಮತ್ತೊಂದು ಸೋಂಕಿನ ಅಲೆಯ ಬಗ್ಗೆ ಎಚ್ಚರಿಸಿದೆ.”ನಾವು ದೇಶಾದ್ಯಂತ ಐದನೇ ಅಲೆಯ ಹಾದಿಯಲ್ಲಿದ್ದೇವೆ ಎಂಬ ಆತಂಕವಿದೆ” ಎಂದು ಅಧ್ಯಕ್ಷ ಹಸನ್ ರೂಹಾನಿ ಇರಾನ್‌ನ ವೈರಸ್ ವಿರೋಧಿ ಕಾರ್ಯಪಡೆಯ ಸಭೆಯಲ್ಲಿ ಹೇಳಿದರು. ದಕ್ಷಿಣ ಪ್ರಾಂತ್ಯಗಳಲ್ಲಿ “ಡೆಲ್ಟಾ ರೂಪಾಂತರವು ಹರಡಿದೆ” ಜನರು ಜಾಗರೂಕರಾಗಿರಿ ಎಂದು ಅವರು ಎಚ್ಚರಿಸಿದರು. ಕೊವಿಡ್ -19 ಪ್ರಕರಣಗಳಲ್ಲಿ 3.2 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಮತ್ತು 84,516 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಕೋವಿಡ್ -19 ನ 246,000 ಸಕ್ರಿಯ ಪ್ರಕರಣಗಳಿವೆ ಮತ್ತು 29 ಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 57.2 ಲಕ್ಷ ಡೋಸ್ ಲಸಿಕೆಗಳನ್ನು ಇರಾನ್‌ನಲ್ಲಿ ನೀಡಲಾಗಿದೆ.
4. ಇಂಡೋನೇಷ್ಯಾ: ಕೊರೊನಾವೈರಸ್‌ನ ಡೆಲ್ಟಾ ರೂಪಾಂತರವು ಇಂಡೋನೇಷ್ಯಾದಲ್ಲಿ ವೇಗವಾಗಿ ಹರಡುತ್ತಿದೆ ಮತ್ತು ಜುಲೈ 20 ರವರೆಗೆ ಸರ್ಕಾರವು ದೇಶದ ಅನೇಕ ಭಾಗಗಳಲ್ಲಿ ಲಾಕ್‌ಡೌನ್ ವಿಧಿಸಿದೆ. ಕೊರೊನಾವೈರಸ್ ಪ್ರಕರಣಗಳು ಹೆಚ್ಚು ಕಂಡು ಬಂದಿರುವ ಏಷ್ಯಾ ಖಂಡದ ನಾಲ್ಕನೇ ದೇಶವಾಗಿದೆ ಇಂಡೋನೇಷ್ಯಾ. ಇಲ್ಲಿಯವರೆಗೆ ಇಂಡೋನೇಷ್ಯಾಲ್ಲಿ 22.5 ಲಕ್ಷ ಪ್ರಕರಣಗಳು ಮತ್ತು 60,027 ಸಾವುಗಳು ವರದಿ ಆಗಿದೆ. ಇದು ಏಷ್ಯಾದ ಅತಿ ಹೆಚ್ಚು ಹಾನಿಗೊಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದ ಶೇಕಡಾ ಐದು ಜನರಿಗೆ ಮಾತ್ರ ಈವರೆಗೆ ಲಸಿಕೆಯ ಎರಡು ಡೋಸ್ ನೀಡಲಾಗಿದೆ.
5. ಫಿಲಿಪೈನ್ಸ್: ದೇಶದಲ್ಲಿ ಡೆಲ್ಟಾ ರೂಪಾಂತರದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಫಿಲಿಪೈನ್ಸ್ ಸರ್ಕಾರ ಹೇಳಿದೆ. ಫಿಲಿಪೈನ್ಸ್‌ನಲ್ಲಿ ಕೊವಿಡ್ -19 ರೋಗಕ್ಕೊಳಗಾಗಿರುವ 14.2 ಕೋಟಿ ಜನರಿದ್ದು, 24,973 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ 55,000 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಮತ್ತು 13.44 ಕೋಟಿ ಜನರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಕೊವಿಡ್ -19 ಲಸಿಕೆಯ 1.07 ಕೋಟಿ ಡೋಸ್‌ಗಳನ್ನು ದೇಶದಲ್ಲಿ ನೀಡಲಾಗಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಿಂದ ಬರುವ ಎಲ್ಲ ಜನರಿಗೆ ಸರ್ಕಾರವು ಜುಲೈ 15 ರವರೆಗೆ ಪ್ರಯಾಣ ನಿರ್ಬಂಧವನ್ನು ವಿಸ್ತರಿಸಿದೆ.
6. ಇರಾಕ್: ಕೊವಿಡ್ -19 ವಿರುದ್ಧದ ವ್ಯಾಕ್ಸಿನೇಷನ್ ವೇಗವು ದೇಶದ ಸಮಸ್ಯೆಗಳನ್ನು ಹೆಚ್ಚಿಸಿದೆ, ಇದರಲ್ಲಿ 13,40,000 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಈ ಪೈಕಿ 17,256 ಜನರು ಸಾವನ್ನಪ್ಪಿದ್ದಾರೆ. ಇರಾಕ್‌ನಲ್ಲಿ ಪ್ರಸ್ತುತ 87,377 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 1,255,203 ಜನರನ್ನು ಗುಣಪಡಿಸಲಾಗಿದೆ. ಇರಾಕ್‌ನಲ್ಲಿ ಕೇವಲ 805,000 ಡೋಸ್ ಲಸಿಕೆಗಳನ್ನು ಮಾತ್ರ ನೀಡಲಾಗಿದೆ, ಇದು ಅದರ ಜನಸಂಖ್ಯೆಯ 40 ದಶಲಕ್ಷದಲ್ಲಿ 2.5% ಕ್ಕಿಂತ ಕಡಿಮೆಯಿದೆ. ಇರಾಕ್‌ನಲ್ಲಿ ಡೆಲ್ಟಾ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿವೆ.
7. ಪಾಕಿಸ್ತಾನ: ಏಷ್ಯಾದಲ್ಲಿ ಕೊವಿಡ್ -19 ಪ್ರಕರಣಗಳ ವಿಷಯದಲ್ಲಿ ಪಾಕಿಸ್ತಾನ 7 ನೇ ಸ್ಥಾನದಲ್ಲಿದೆ ಮತ್ತು 9,61,085 ಜನರು ಸೋಂಕಿಗೆ ಒಳಗಾಗಿದ್ದಾರೆ ಮತ್ತು 22,379 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ 32,319 ಸಕ್ರಿಯ ಪ್ರಕರಣಗಳಿವೆ ಮತ್ತು 9,06,000 ಜನರು ಕೊವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಪಾಕಿಸ್ತಾನವು 1.63 ಕೋಟಿ ಲಸಿಕೆ ಪ್ರಮಾಣವನ್ನು ನೀಡಿದೆ. ಡೆಲ್ಟಾ ರೂಪಾಂತರವನ್ನು ಗಮನದಲ್ಲಿಟ್ಟುಕೊಂಡು ನಾಲ್ಕನೇ ತರಂಗದ ಸಾಧ್ಯತೆಯ ಬಗ್ಗೆ ಪಾಕಿಸ್ತಾನ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ. ಡೆಲ್ಟಾ ರೂಪಾಂತರದ ಮೊದಲ ಪ್ರಕರಣವು ಮೇ 28 ರಂದು ಪಾಕಿಸ್ತಾನದಲ್ಲಿ ವರದಿಯಾಗಿದೆ ಮತ್ತು ಮುಂದಿನ ವಾರದಲ್ಲಿ ಯುಎಇಯಿಂದ ಬರುವ ಪ್ರಯಾಣಿಕರಲ್ಲಿ ಹೆಚ್ಚಿನ ಸೋಂಕನ್ನು ಕಂಡಿತ್ತು. ಇತ್ತೀಚೆಗೆ, ಇತರ ಗಲ್ಫ್ ದೇಶಗಳಿಂದ ಹಿಂದಿರುಗಿದ ಜನರಲ್ಲಿ ಈ ರೂಪಾಂತರವು ಕಂಡುಬಂದಿದೆ.
ಇದನ್ನೂ ಓದಿ: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಈ ಆಹಾರಗಳು ಮುಖ್ಯ! ಯಾವುವು? ವಿವರ ಇಲ್ಲಿದೆ
(Covid-19 Delta Plus variant of coronavirus is ringing alarm bells how other Asian Countries are doing)