ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಈ ಆಹಾರಗಳು ಮುಖ್ಯ! ಯಾವುವು? ವಿವರ ಇಲ್ಲಿದೆ

Health Tips: ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಆರೋಗ್ಯದ ಸ್ಥಿತಿಯಲ್ಲಿ ಏನೇ ಏರು-ಪೇರು ಉಂಟಾದರೂ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಆರೋಗ್ಯದ ಸ್ಥಿತಿ ಕುರಿತಾಗಿ ಮಾಹಿತಿ ತಿಳಿದುಕೊಳ್ಳಿ.

ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಈ ಆಹಾರಗಳು ಮುಖ್ಯ! ಯಾವುವು? ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Jul 04, 2021 | 10:37 AM

ಆರೋಗ್ಯದ ಬಗ್ಗೆ ಎಷ್ಟು ಗಮನವಹಿಸಿದರೂ ಸಾಕಾಗುವುದಿಲ್ಲ ಎಂಬ ಪರಿಸ್ಥಿತಿ ಕೊರೊನಾ ಸಮಯದಲ್ಲಿ ಎದುರಾದದ್ದಂತೂ ಸತ್ಯ. ವೈರಸ್​ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಹಾಗಿದ್ದರೆ ನಾವು ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವಿಸಬೇಕು. ರೋಗನಿರೋಧಕ ಶಕ್ತಿ ಎಂದರೆ, ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ. ನಮ್ಮ ದೇಹದಲ್ಲಿ ಪೌಷ್ಠಿಕ ಗುಣಗಳನ್ನು ಹೆಚ್ಚಿಸುವ ಜತೆಗೆ ಕೆಟ್ಟ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಯಾವ ಆಹಾರ ನಮ್ಮ ದೇಹಕ್ಕೆ ಸೂಕ್ತ ಎಂಬುದರ ಕುರಿತಾಗಿ ತಿಳಿಯೋಣ.

ರೋಗ ನಿರೋಧಕ ಶಕ್ತಿಯ ವಿಧಗಳು ಮನುಷ್ಯರನ್ನು ದೈಹಿಕವಾಗಿ ರಕ್ಷಿಸುವಂತಹ ಚರ್ಮ, ಕೂದಲುಗಳು ಸಾಮಾನ್ಯ ಹಾನಿಯಿಂದ ರಕ್ಷಿಸುತ್ತವೆ. ಲಾಲಾರಸ, ಗ್ಯಾಸ್ಟ್ರಿಕ್​ ಆಮ್ಲಗಳು ದೇಹದ ಆರೋಗ್ಯದ ದೃಷ್ಟಿಯಿಂದ ರಕ್ಷಣಾ ಕಾರ್ಯ ವಿಧಾನವಾಗಿ ಕೆಲಸ ಮಾಡುತ್ತವೆ.

ನಿಷ್ಕ್ರಿಯ ಪ್ರತಿರಕ್ಷೆ (ರೋಗ ನಿರೋಧಕ) ರೋಗ ನಿರೋಧ ಶಕ್ತಿ ಪ್ರತಿಕಾರಕಗಳನ್ನು ಹೆಚ್ಚಿಸಲು ಇನ್ನೊಬ್ಬರಿಂದ ಪಡೆಯುವ ಶಕ್ತಿ. ಅಂದರೆ ತಾಯಿಯು ಮಗುವಿಗೆ ಹಾಲುಣಿಸುವ ಮೂಲಕ ಶಕ್ತಿ ತುಂಬುತ್ತಾಳೆ. ಇಲ್ಲವೇ ಇಮ್ಯುನೊಗ್ಲಾಬ್ಯುಲಿನ್​ನಂತಹ ಪ್ರತಿಕಾಯಕಗಳನ್ನು ಹೊಂದಿರುವ ರಕ್ತವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸುವುದು. ಪ್ಲಾಸ್ಮಾ ಚಿಕಿತ್ಸೆಗಳೆಲ್ಲ ಈ ವಿಧಗಳಿಗೆ ಸೇರಿಕೊಳ್ಳುತ್ತವೆ.

ಹೊಂದಾಣಿಕೆ ರೋಗನಿರೋಧಕ ಸ್ಮರಣೆಯಿಂದ ಹುಟ್ಟಿಕೊಳ್ಳುವ ಒಂದು ಸಾಮರ್ಥ್ಯ. ಅಂದರೆ ಒಂದು ನಿರ್ದಿಷ್ಟ ಪ್ರತಿಜನಕಕ್ಕೆ ಒಡ್ಡಿಕೊಳ್ಳುತ್ತದೆ. ವೈರಸ್​ ವಿರುದ್ಧ ಹೋರಾಡುತ್ತಿರುವ ವ್ಯಕ್ತಿ ಲಸಿಕೆ ಹಾಕಿದ ತಕ್ಷಣ ದೇಹ ಪ್ರತಿಕ್ರಿಯಿಸುತ್ತದೆ. ಜತೆಗೆ ವೈರಸ್​ ವಿರುದ್ಧ ಹೋರಾಡುತ್ತದೆ. ಈ ಮೂಲಕ ದೇಹ ಹೊಂದಿಕೊಂಡು ಅನಾರೋಗ್ಯಕ್ಕೆ ಒಳಗಾಗದೇ ವೈರಸ್​ ವಿರುದ್ಧ ಹೋರಾಡುತ್ತದೆ.

ಹಾರ್ವರ್ಡ್​ ಸ್ಕೂಲ್​ ವೆನ್​ಸೈಟ್​ ವರದಿಯ ಪ್ರಕಾರ ಕೆಲವು ಅಂಶಗಳು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸಬಹುದು. ಅವು ಯಾವುವು ಎಂಬುದರ ಕುರಿತಾಗಿ ನೋಡೋಣ.

ವಯಸ್ಸು ವಯಸ್ಸಾದಂತೆಯೇ ನಮ್ಮ ದೈಹಿಕ ಶಕ್ತಿ ಕುಂಠಿತಗೊಳ್ಳುತ್ತದೆ. ಆಂತರಿಕ ಅಂಗಗಳ ದಕ್ಷತೆ ಕಡಿಮೆಯಾಗುತ್ತದೆ. ಥೈಮಸ್​ನಂತಹ ರೋಗನಿರೋಧಕ ಕ್ಕೆ ಸಂಬಂಧಪಟ್ಟ ಅಂಗಗಳು ಸೋಂಕುಗಳ ವಿರುದ್ಧ ಹೋರಾಡಲು ಕಡಿಮೆ ರೋಗನಿರೋಧಕ ಕೋಶಗಳನ್ನು ಉತ್ಪಾದಿಸುತ್ತದೆ.

ತೂಕ ಹೆಚ್ಚಳ ದೇಹದ ತೂಕ ಹೆಚ್ಚಳವು ಉರಿಯೂತ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚಿನ ಬೊಜ್ಜಿಗೆ ಕಾರಣವಾಗುವ ಕೊಬ್ಬಿನ ಅಂಗಾಂಶಗಳು ಅಡಿಪೋಸೈಟೀಕಿನ್​ಗಳನ್ನು ಉತ್ಪಾದಿಸುತ್ತದೆ. ಇದು ಉರಿಯೂತ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗಬಹುದು.

ಅಪೌಷ್ಠಿಕ ಆಹಾರ ಅಪೌಷ್ಠಿಕ ಆಹಾರ ಸೇವನೆ ಮತ್ತು ಪೋಷಕಾಂಶಗಳ ಕೊರತೆಯು ದೇಹದ ಪ್ರತಿರಕ್ಷಣಾ ಕೋಶಗಳನ್ನು ಮತ್ತು ಪ್ರತಿಕಾಯಗಳ ಉತ್ಪಾದನೆ ಮತ್ತು ಚಟುವಟಿಕೆಯನ್ನು ದುರ್ಬಲಗೊಳಿಸುತ್ತದೆ.

ನಿದ್ರೆ ಮತ್ತು ವಿಶ್ರಾಂತಿ ಕೊರತೆ ನಿದ್ರೆಯ ಸಮಯದಲ್ಲಿ ವೈರಸ್​ ವಿರುದ್ಧ ಹೋರಾಡುವ ಸೈಟೋನ್​​ ಬಿಡುಗೆಯಾಗುತ್ತದೆ. ಆದರೆ ಕಡಿಮೆ ನಿದ್ರೆಯು ದೆಹದಲ್ಲಿ ರೋಗನಿರೋಧಕ ಕೋಶಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ವೈರಸ್​ ವಿರುದ್ಧ ಹೋರಾಡಲು ನಮ್ಮ ದೇಹ ಹೆಚ್ಚು ಸಾಮರ್ಥ್ಯ ಹೊಂದಿರುವುದಿಲ್ಲ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ಪೌಷ್ಠಿಕಾಂಶಯುಕ್ತ ಆಹಾರ ವಿಟಮಿನ್​ ಸಿ ದೇಹದಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ಅಥವಾ ವೈರಸ್​ ವಿರುದ್ಧ ಹೋರಾಡಲು ವಿಟಮಿನ್​ ಸಿ ಸಹಾಯ ಮಾಡುತ್ತದೆ. ಸಿಟ್ರಸ್​ ಹಣ್ಣುಗಳು, ಪಾಲಾಕ್​, ಸ್ಟ್ರಾಬೆರಿ, ಪಪ್ಪಾಯಿ ಹಣ್ಣುಗಳಲ್ಲಿ ವಿಟಮಿನ್​ ಸಿ ಅಂಶವಿರುತ್ತದೆ. ಇದು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಿಟಮಿನ್​ ಇ ವಿಟಮಿನ್​ ಇ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದು ನಿಮ್ಮ ದೇಹ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬಾದಾಮಿ, ಕಡಲೆಕಾಯಿ, ಸೂರ್ಯಕಾಂತಿ ಬೀಜ, ಸೋಯಾಬೀನ್​ ಎಣ್ಣೆ. ಇವುಗಳು ನಿಮ್ಮ ದೇಹದಲ್ಲಿರುವ ವೈರಸ್​ ವಿರುದ್ಧ ಹೋರಾಡಲು ಸಹಾಯಕವಾಗುವ ಅಂಶಗಳು.

ವಿಟಮಿನ್​ ಎ ಕ್ಯಾರೆಟ್​, ಕುಂಬಳಕಾಯಿ, ಸಿಹಿಆಲೂಗಡ್ಡೆ, ಮೀನು-ಮಾಂಶಗಳಲ್ಲಿ ವಿಟಮಿನ್​ ಎ ಅಂಶವಿರುತ್ತದೆ. ದೇಹದಲ್ಲಿ ವೈರಸ್​ ವಿರುದ್ಧ ಹೋರಾಟ ನಡೆಸಲು ಮತ್ತು ರೋಗ ನಿರೋಧಕ ಗುಣಗಳನ್ನು ಹೆಚ್ಚಿಸಲು ಸಹಾಯಕವಾಗಿದೆ. ಸಿರು ಎಲೆಗಳಲ್ಲಿ ಹೆಚ್ಚಾಗಿ ವಿಟಮಿನ್​ ಎ ಅಂಶಗಳಿರುತ್ತವೆ.

ಕಬ್ಬಿಣ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸಲು ಕಬ್ಬಿಣ ಅಂಶ ಸಹಾಯ ಮಾಡುತ್ತದೆ. ಕೆಂಪು ಮಾಂಸ, ಕೋಳಿ, ಬೀನ್ಸ್​, ಎಲೆಕೋಸು ಇಂತಹ ಆಹಾರ ಪದಾರ್ಥಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದು ನಿಮ್ಮ ದೇಹದಲ್ಲಿ ಎಲುಬು-ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. ಜತೆಗೆ ವೈರಸ್​ ವಿರುದ್ಧ ಹೋರಾಡಲು ನಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕತಿ ಹೆಚ್ಚಿಸಿಕೊಳ್ಳುವ ವ್ಯವಸ್ಥೆಯನ್ನು ಬಲಪಡಿಸುವ ಆಹಾರ ಪದಾರ್ಥಗಳು *ಹಣ್ಣುಗಳು, ತರಕಾರಿಗಳು, ಪ್ರೋಟೀನ್​ಯುಕ್ತ ಆಹಾರ, ಧಾನ್ಯಗಳು ಮತ್ತು ಸಾಕಷ್ಟು ನೀರಿನಿಂದ ಸಮೃದ್ಧಿಯಾದ ಆಹಾರವನ್ನು ಸೇವಿಸಿ

*ಮದ್ಯ ಸೇವನೆ- ಧೂಮಪಾನ ಸೇವನೆಯಿಂದ ದೂರವಿರು. ಇದು ನಿಮ್ಮ ದೇಹವನ್ನು ಹೆಚ್ಚು ಹಾನಿಪಡಿಸುತ್ತದೆ.

*ವ್ಯಾಯಾಮ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುವುದು ಜತೆಗೆ ಯೋಗಾಸನವನ್ನು ಮಾಡುವುದು ನಿಮ್ಮ ಆರೋಗ್ಯವನ್ನು ಬಲಪಡಿಸುತ್ತದೆ

*ಪ್ರತಿನಿತ್ಯವು ಒಂದೇ ಸಮಯದಲ್ಲಿ ಮಲಗುವುದು ಮತ್ತು ಬೆಳಿಗ್ಗೆ ಎಚ್ಚರಗೊಳ್ಳುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರುವಂತೆ ನೋಡಿಕೊಳ್ಳುತ್ತದೆ.

*ನಿಮ್ಮ ಮಾನಸಿಕ ಒತ್ತಡದಿಂದ ಹೊರಬರಲು ಯಾವ ಕೆಲಸಗಳು ಸೂಕ್ತ ಎಂಬುದನ್ನು ನಿರ್ಧರಿಸಿ. ಅಂದರೆ ಪ್ರತಿನಿತ್ಯ ವ್ಯಾಯಾಮದಲ್ಲಿ ತೊಡಗುವುದು, ಸಂಗೀತ, ಮನೋರಂಜನೆಯಲ್ಲಿ ತೊಡಗಿ. ಜತೆಗೆ ಉಸಿರಾಟಕ್ಕೆ ಸಂಬಂಧಿಸಿದ ಹೆಚ್ಚಿನ ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಮಾನಸಿಕ ಒತ್ತಡ ಸಮಸ್ಯೆಯಿಂದ ಸಹ ಪರಿಹಾರ ಕಂಡುಕೊಳ್ಳಬಹುದು.

ಕೈಕಾಲು ಮುಖ ತೊಳೆಯಿರಿ ಹೊರಗೆ ಸುತ್ತಾಡಲು ಹೋಗಿರುತ್ತೀರಿ ಅಥವಾ ಕೆಲಸದ ನಿಮಿತ್ತ ಹೋಗಿರಬಹುದು. ಮನೆಗೆಬಂದ ತಕ್ಷಣವೇ ಕೈಕಾಲು ಮುಖ ತೊಳೆಯುವ ಅಭ್ಯಾಸವಿರಲಿ. ಅದರಲ್ಲಿಯೂ ಮುಖ್ಯವಾಗಿ ಆಹಾರ ಸೇವಿಸುವ ಮೊದಲು ಕೈ ತೊಳೆಯಲೇಬೇಕು.

ಸೂಚನೆ: ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಆರೋಗ್ಯದ ಸ್ಥಿತಿಯಲ್ಲಿ ಏನೇ ಏರು-ಪೇರು ಉಂಟಾದರೂ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಮತ್ತು ನಿಮ್ಮ ಆರೋಗ್ಯದ ಸ್ಥಿತಿ ಕುರಿತಾಗಿ ಮಾಹಿತಿ ತಿಳಿದುಕೊಳ್ಳಿ.

ಇದನ್ನೂ ಓದಿ:

Ragi Health Benefits: ರಾಗಿ ಸೇವಿಸುವುದರಿಂದಾಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದರೆ ಪ್ರತಿನಿತ್ಯ ಇದನ್ನು ಸೇವಿಸುತ್ತೀರಿ

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು