AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು

Immunity Booster: ಮನೆಯಲ್ಲಿಯೇ ಅದೆಷ್ಟೋ ಮದ್ದುಗಳಿವೆ. ಸಾಮಾನ್ಯವಾದ ತಲೆನೋವು, ನೆಗಡಿ, ಕಫದಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವ ಗುಣಗಳನ್ನು ಹೊಂದಿದೆ.

Health Tips: ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on: Jun 25, 2021 | 1:42 PM

Share

ದೇಹದಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಅದರಲ್ಲಿಯೂ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನಮ್ಮ ದೇಹ ಸದೃಢವಾಗಿರಬೇಕು. ಈಗಿರುವಾಗ ಪ್ರತಿನಿತ್ಯ ರೋಗ ನಿರೋಧಕ ಶಕ್ತಿ ಇರುವಂತಹ ಆಹಾರವನ್ನು ಸೇವಿಸುವುದು ಉತ್ತಮವಾಗಿದೆ. ಇದು ವೈರಸ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಿರುವಾಗ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದಾದ ಪಾನೀಯಗಳ ಬಗ್ಗೆ ತಿಳಿಯೋಣ.

ತುಳಸಿ ಚಹಾ ತುಳಸಿಯಲ್ಲಿರುವ ರೋಗನಿರೋಧಕ ಶಕ್ತಿ ಸಾಮಾನ್ಯವಾದ ಕಫ, ಶೀತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಓಂ ಕಾಳನ್ನು ಅರ್ಧ ಕಪ್​ ನೀರಿನೊಂದಿಗೆ ಕುದಿಸಿ ಅದಕ್ಕೆ ಒಂದೆರಡು ತುಳಸಿ ಎಲೆಗಳನ್ನು ಸೇರಿಸಿ ಚಿಟಿಕೆ ಕಾಳು ಮೆಣಸಿನ ಪುಡಿ ಮತ್ತು ಜೇನುತುಪ್ಪವನ್ನು ಸೇರಿಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗಿದೆ.

ನಿಂಬೆ ಪಾನಕ ಸುಲಭದಲ್ಲಿ ಮನೆಯಲ್ಲೇ ತಯಾರಿಸಬಹುದಾಗ ಪಾನೀಯ ಇದಾಗಿದೆ. ಒಂದು ಚೂರು ಶುಂಠಿ, ದಾಲ್ಚಿನ್ನಿ, ಮೂರರಿಂದ ನಾಲ್ಕು ಕತ್ತರಿಸಿದ ಬೆಳ್ಳುಳ್ಳಿ ಮತ್ತು ಲವಂಗದ ಚೂರು, ಒಂದು ಚಮಚ ಪುದೀನ ರಸ, ನಿಂಬೆ ರಸದೊಂದಿಗೆ ನಾಲ್ಕುಕಪ್​ ನೀರು ಸೇರಿಸಿ ಚೆನ್ನಾಗಿ ಕುದಿಸಿ. ಕೆಮ್ಮು, ನೆಗಡಿಯಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಮಸಾಲಾ ಚಹ ಶುಂಠಿ, ಲವಂಗ, ಏಲಕ್ಕಿ, ಮೆಣಸಿಕಾಯಿ ಮತ್ತು ತುಳಸಿಯನ್ನು ಸೇರಿಸಿ ಬಿಸಿ ಬಿಸಿ ಮಸಾಲಾ ಚಹ ಮಾಡಿ ಸವಿದರೆ ನಿಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಜತೆಗೆ ಉರಿಯೂತದಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಮನೆಯಲ್ಲಿಯೇ ಅದೆಷ್ಟೋ ಮದ್ದುಗಳಿವೆ. ಸಾಮಾನ್ಯವಾದ ತಲೆನೋವು, ನೆಗಡಿ, ಕಫದಂತಹ ಸಮಸ್ಯೆಗಳನ್ನು ಬಹುಬೇಗ ನಿವಾರಿಸುವ ಗುಣಗಳನ್ನು ಹೊಂದಿದೆ. ಹಾಗಾಗಿ ಆರೋಗ್ಯವನ್ನು ಸುಧಾರಿಸುವ ಮತ್ತು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇಂತಹ ಪಾನೀಯಗಳನ್ನು ಸೇವಿಸಿ.

ಇದನ್ನೂ ಓದಿ:

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?