Beauty Tips: ಸೋರೆಕಾಯಿ ರಸ ಎಂದಾದರೂ ಸೇವಿಸಿದ್ದೀರಾ? ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಿಂಪಲ್​ ಟಿಪ್ಸ್​

ಸೋರೇಕಾಯಿ ಜ್ಯೂಸ್: ಮುಖದಲ್ಲಿ ಏಳುವ ಗುಳ್ಳೆಗಳು ಮತ್ತು ಮೊಡವೆಗಳ ನಿವಾರಣೆಗೆ ಸೋರೆಕಾಯಿ ಉತ್ತಮ ಔಷಧ. ಜತೆಗೆ ಎಣ್ಣೆಯುಕ್ತ ಮುಖದ ಚರ್ಮ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

Beauty Tips: ಸೋರೆಕಾಯಿ ರಸ ಎಂದಾದರೂ ಸೇವಿಸಿದ್ದೀರಾ? ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಿಂಪಲ್​ ಟಿಪ್ಸ್​
ಸೋರೆಕಾಯಿ ಜ್ಯೂಸ್
Follow us
TV9 Web
| Updated By: Skanda

Updated on: Jun 26, 2021 | 7:55 AM

ಸೋರೆಕಾಯಿ ಕೇವಲ ಆರೋಗ್ಯ ಸುರಕ್ಷತೆಗೆ ಒಂದೇ ಅಲ್ಲದೇ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೌಷ್ಠಿಕ ಗುಣಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಧೂಳು, ಮಾಲಿನ್ಯದಿಂದ ಉಂಟಾಗುವ ತೊಂದರೆಗಳಿಂದ ದೂರವಿರಲು ಸಹಾಯ ಮಾಡುತ್ತದೆ. ಹಾಗಾಗಿ ಸೋರೆಕಾಯಿ ರಸ ಅಥವಾ ಜ್ಯೂಸ್​ ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಮಿತವಾಗಿ ಸೇವಿಸಿ ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ.

ಸೋರೆಕಾಯಿಯಲ್ಲಿ ವಿಟಮಿನ್​ ಸಿ ಯುಕ್ತ ಪೋಷಕಾಂಶಗಳಿರುತ್ತದೆ. ಇದು ಮುಖದ ಮೇಲೆ ಕಾಣಿಸುತ್ತಿರುವ ಸುಕ್ಕುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್​, ಖನಿಜ ಮತ್ತು ಜೀವಸತ್ವಗಳು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಸೋರೆಕಾಯಿ ರಸವನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ದೃಷ್ಟಿ ದೋಷವನ್ನು ನಿವಾರಿಸುವ ಗುಣ ಇದರಲ್ಲಿದೆ. ಜತೆಗೆ ಕಣ್ಣುರಿ, ಕಣ್ಣು ಬಿಸಿಯಾಗುವಂತಹ ಸಮಸ್ಯೆ ಇದ್ದರೆ, ಸೋರೆಕಾಯಿ ಚೂರನ್ನು ಕಣ್ಣಿನ ಮೇಲೆ ಇಟ್ಟುಕೊಂಡು 5 ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ. ಹೀಗೆ ಮಾಡುವುದರಿಂದ ಕಣ್ಣಿನ ಉರಿಯೂತ ಸಮಸ್ಯೆ ಹೋಗಲಾಡಿಸಿಕೊಳ್ಳಬಹುದು ಜತೆಗೆ ಕಣ್ಣಿನ ಕೆಳ ಭಾಗದಲ್ಲಿ ಡಾರ್ಕ್​ ಸರ್ಕಲ್ ​ಅನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ಮುಖದಲ್ಲಿ ಏಳುವ ಗುಳ್ಳೆಗಳು ಮತ್ತು ಮೊಡವೆಗಳ ನಿವಾರಣೆಗೆ ಸೋರೆಕಾಯಿ ಉತ್ತಮ ಔಷಧ. ಜತೆಗೆ ಎಣ್ಣೆಯುಕ್ತ ಮುಖದ ಚರ್ಮ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಬಿಳಿ ಕೂದಲು ಹುಟ್ಟಿಕೊಳ್ಳುವ ಸಮಸ್ಯೆಯಿಂದ ಪರಿಹಾರ ಕಂಡು ಕೊಳ್ಳಬಹುದು. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲು ಕಾಣಲು ಪ್ರಾರಂಭಿಸುತ್ತದೆ. ಹೀಗಿರುವಾಗ ಸೋರೆಕಾಯಿ ರಸವನ್ನು ಕುಡಿಯುವುದರ ಮೂಲಕ ಕೂದಲು ಹೆಚ್ಚು ಕಪ್ಪಾಗಿರುತ್ತದೆ. ಜತೆಗೆ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಸಹಾಯಕವಾಗಿದೆ.

ಇದನ್ನೂ ಓದಿ:

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Gourd Juice Side Effects: ಸೋರೆಕಾಯಿ ಜ್ಯೂಸ್​ ಸೇವಿಸುವ ಮೊದಲು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ