Cracked Heels: ಹಿಮ್ಮಡಿ ಬಿರುಕು ನಿವಾರಣೆಗೆ ಇಲ್ಲಿದೆ ಮನೆಮದ್ದು

ಕಾಲು ಬಿರುಕು ಕಂಡು ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ.

Cracked Heels: ಹಿಮ್ಮಡಿ ಬಿರುಕು ನಿವಾರಣೆಗೆ ಇಲ್ಲಿದೆ ಮನೆಮದ್ದು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 26, 2021 | 7:10 AM

ದೈಹಿಕ ಸೌಂದರ್ಯ ವ್ಯಕ್ತಿಯನ್ನು ಅಳೆಯುವ ಮಾಪನವಲ್ಲ. ಆದರೂ, ನಾವು ಇದ್ದಿದ್ದರಲ್ಲೇ ಚೆನ್ನಾಗಿ ಕಾಣಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ. ಹೀಗಾಗಿಯೇ ಹೆಚ್ಚಿನವರು ತಮ್ಮ ದೇಹದ ಬಗ್ಗೆ ತುಸು ಹೆಚ್ಚೇ ಗಮನ ನೀಡುತ್ತಾರೆ. ಹಾಗಂತ ಮುಖವೊಂದೇ ಚೆನ್ನಾಗಿ ಕಂಡರೆ ಸಾಕಾಗುವುದಿಲ್ಲ. ಅಡಿಯಿಂದ ಮುಡಿಯ ತನಕವೂ ಚೆನ್ನಾಗಿರಬೇಕೆಂಬ ಆಸೆ ಇದ್ದೇ ಇರುತ್ತದೆ. ನಮ್ಮ ದೇಹದ ಭಾರವನ್ನೆಲ್ಲಾ ಹೊತ್ತು ನಿಲ್ಲುವ ಪಾದಗಳೂ ಸುಂದರವಾಗಿ ಹೊಳೆಯಬೇಕು ಎಂಬ ಆಸೆ ಇರುತ್ತದೆ. ಆದರೆ ಮಳೆಗಾಲದ ಸಮಯದಲ್ಲಿ ಕಾಲಿನ ಪಾದಗಳಲ್ಲಿ ಒಡಕು ಅಥವಾ ಬಿರುಕು ಬೀಳಲು ಪ್ರಾರಂಭವಾಗುದರೆ ಅದನ್ನು ಅಂದವಾಗಿ ಕಾಪಾಡಿಕೊಳ್ಳುವುದೇ ಕಷ್ಟ. ಕೆಲವರಿಗೆ ಇದು ಯಾವ ಮಟ್ಟಿಗೆ ಕಾಡುತ್ತದೆ ಎಂದರೆ ಪಾದಗಳನ್ನು ತೋರಿಸಲು ನಾಚಿಕೆ ಅನಿಸಬಹುದು. ಇನ್ನು ಕೆಲವರಿಗೆ ನೋವು ಕಾಡಬಹುದು. ಹೀಗಿರುವಾಗ ಕಾಲು ಬಿರುಕಿಗೆ ಮನೆಯಲ್ಲಿಯೇ ಮದ್ದು ತಯಾರಿಸಿ ಸಮಸ್ಯೆಗಳಿಂದ ಹೊರ ಬರಲು ದಾರಿ ಕಂಡುಕೊಳ್ಳುವುದು ಸರಳ ಉಪಾಯ.

ಬಿರುಕು ಕಂಡು ಬಂದರೆ ಕಾಲುಗಳು ಸುಂದರವಾಗಿ ಕಾಣಿಸುವುದಿಲ್ಲ. ಕಾಲಿನ ಪಾದದ ನೋವು ಕಾಡುತ್ತದೆ. ಅದರಲ್ಲಿಯೂ ಮಣ್ಣಿನ ಕೆಸರು ಒಡಕುಗಳಲ್ಲಿ ಸಿಲುಕಿಕೊಂಡು ಹೆಚ್ಚು ಸಮಸ್ಯೆಯನ್ನು ತಂದೊಡ್ಡುತ್ತದೆ. ಇದಕ್ಕೆ ಪರಿಹಾರವಾಗಿ ಕಲ್ಲು ಉಪ್ಪನ್ನು ಪುದೀನ ಅಥವಾ ನೀಲಗಿರಿ ಎಣ್ಣೆಯಲ್ಲಿ ಸೇರಿಸಿ. ಆ ಮಿಶ್ರಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕಾಲುಗಳನ್ನು 20 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಪಾದಗಳ ಒಡಕು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ನಿಂಬೆ ರಸ ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಪಾದಗಳ ಒಡಕಿರುವ ಜಾಗಕ್ಕೆ ಹಚ್ಚಿಕೊಳ್ಳಿ. ನಂತರ ಕಾಲುಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿನಿತ್ಯ 5 ನಿಮಿಷಗಳ ಕಾಲ ಹೀಗೆ ಮಾಡುವುದರ ಮೂಲಕ ಬಹುಬೇಗ ಪಾದದ ಒಡಕು ಸಮಸ್ಯೆ ನಿವಾರಣೆಯಾಗುತ್ತದೆ.

ಬಾದಾಮಿ ಎಣ್ಣೆ, ಸಮುದ್ರದ ಉಪ್ಪು, ಜೇನುತುಪ್ಪ, ಅಕ್ಕಿ ಪುಡಿ, ಪುದೀನಾ ಎಣ್ಣೆಯನ್ನು ಬೆರೆಸಿ. ಇದರ ಮೂಲಕ ಪಾದಗಳನ್ನು ಸ್ಕ್ರಬ್​ ಮಾಡಿ. ಪಾದಗಳಲ್ಲಿ ಅಂಟಿಕೊಂಡಿರುವ ಕೆಸರನ್ನು ತೆಗದು ಹಾಕಲು ಇದು ಸಹಾಯ ಮಾಡುತ್ತದೆ. ಒಣಗಿದ ಚರ್ಮವನ್ನು ಕಿತ್ತುಹಾಕಿ, ಹೊಸ ಚರ್ಮ ಹುಟ್ಟಿಕೊಳ್ಳಲು ಸಹಾಯಕವಾಗಿದೆ. ಜತೆಗೆ ಚರ್ಮವನ್ನು ಮೃದುಗೊಳಿಸುತ್ತದೆ.

ಅಲೋವೆರಾ ಜೆಲ್​ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅನೇಕರು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಕಾಲಿನ ಪಾದಗಳಲ್ಲಿ ಬಿರುಕು ಬಿಟ್ಟ ಜಾಗದಲ್ಲಿ ಸರಿಯಾಗಿ ನೈಸರ್ಗಿಕ ಅಲೋವೆರಾವನ್ನು ಹಚ್ಚಿದರೆ ಪಾದಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ಪಾದಗಳು ಮೃದುವಾಗಿರುತ್ತವೆ ಮತ್ತು ಬಿರುಕು ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

ತಜ್ಞರ ಬರಹ: ಸಂತಾನದ ಕನಸಿಗೆ ಧಕ್ಕೆಯಾಗುವ ಪುರುಷರ ಬಂಜೆತನಕ್ಕೆ ಇದೆ ಪರಿಹಾರ

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ