Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ

ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಕಬ್ಬಿಣದಂತಹ ಅಂಶಗಳಿದ್ದು, ಸಿಹಿ ಪೇಸ್ಟ್ರಿ ತಯಾರಿಕೆಯಲ್ಲಿ ಮಾತ್ರ ಈಗ ಬಳಸಲಾಗುತ್ತದೆ. ಬೆಲ್ಲವನ್ನು ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ.

Jaggery Benefits: ಬೆಲ್ಲದ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ, ಸಕ್ಕರೆ ಬದಲು ಸಿಹಿಗಾಗಿ ಇದನ್ನೇ ಬಳಸುತ್ತೀರಿ
ಬೆಲ್ಲ
Follow us
TV9 Web
| Updated By: Skanda

Updated on: Jun 26, 2021 | 9:14 AM

ಭಾರತೀಯ ಪಾಕಪದ್ಧತಿಯಲ್ಲಿ ಬೆಲ್ಲ ಒಂದು ಪ್ರಮುಖ ಅಂಶವಾಗಿದೆ. ಸಕ್ಕರೆಯ ಆಗಮನದ ಮೊದಲು ಬೆಲ್ಲವನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ಕಾಲಾನಂತರದಲ್ಲಿ ಸಕ್ಕರೆ ಬೆಲ್ಲದ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಆದಾಗ್ಯೂ, ಬೆಲ್ಲವನ್ನು ಈಗಲೂ ಕೆಲವರು ಬಳಸುತ್ತಾರೆ. ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಕಬ್ಬಿಣದಂತಹ ಅಂಶಗಳಿದ್ದು, ಸಿಹಿ ಪೇಸ್ಟ್ರಿ ತಯಾರಿಕೆಯಲ್ಲಿ ಮಾತ್ರ ಈಗ ಬಳಸಲಾಗುತ್ತದೆ. ಬೆಲ್ಲವನ್ನು ಆಯುರ್ವೇದದ ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಹಾಗಿದ್ದರೆ ಬೆಲ್ಲದ ಸೇವನೆಯಿಂದ ಯಾವೆಲ್ಲಾ ಆರೋಗ್ಯಯುತ ಪ್ರಯೋಜನಗಳು ಇದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ.

* ಒಣ ಕೆಮ್ಮಿನಿಂದ ಬಳಲುತ್ತಿರುವವರು ಬೆಲ್ಲದ ಮೊರೆ ಹೋಗಬಹುದು. ಒಂದು ಗ್ಲಾಸ್ ಬೆಲ್ಲದಲ್ಲಿ ಸ್ವಲ್ಪ ತುಳಸಿ ಸೇರಿಸಿ, ಹೀಗೆ ಮಾಡಿದ ಕಷಾಯವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳುವುದರಿಂದ ಕೆಮ್ಮು ದೂರವಾಗುತ್ತದೆ.

* ಊಟದ ನಂತರ ಬೆಲ್ಲವನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಗಮಗೊಳ್ಳುತ್ತದೆ. ಇದರಿಂದಾಗಿ ಅಜೀರ್ಣದಂತಹ ಸಮಸ್ಯೆ ದೂರವಾಗುತ್ತದೆ.

* ಬೆಲ್ಲ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ.

* ಬೆಲ್ಲವನ್ನು ಪ್ರತಿದಿನ ಒಂದು ಲೋಟ ಹಾಲು ಅಥವಾ ನೀರಿನ ಜತೆ ಸೇವಿಸುವುದರಿಂದ ಹೊಟ್ಟೆ ತಣ್ಣಗಾಗುತ್ತದೆ ಮತ್ತು ಗ್ಯಾಸ್ಟಿಕ್​ನಿಂದ ಹೊಟ್ಟೆ ಉಬ್ಬರಿಸುವಿಕೆಯನ್ನು ತಡೆಯಬಹುದು.

* ಕಬ್ಬಿಣವು ಬೆಲ್ಲದಲ್ಲಿ ಅಧಿಕ ಪ್ರಮಾಣದಲ್ಲಿರುವ ಖನಿಜವಾಗಿದೆ. ಆದ್ದರಿಂದ, ರಕ್ತಹೀನತೆಯ ರೋಗಿಗಳಿಗೆ ಬೆಲ್ಲ ನೀಡುವುದು ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರು ಬೆಲ್ಲವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

* ಶುಂಠಿಯು ರಕ್ತದಲ್ಲಿನ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತದೆ ಮತ್ತು ಚರ್ಮಕ್ಕೆ ಉತ್ತಮ ಹೊಳಪನ್ನು ನೀಡುತ್ತದೆ, ಮುಖದಲ್ಲಿ ಮೊಡವೆಗಳಾಗುವುದನ್ನು ತಡೆಯುತ್ತದೆ.

* ದೇಹವನ್ದುನು ರ್ಬಲಗೊಳಿಸುವ ಯಾವುದೇ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ಬೆಲ್ಲವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ಶಕ್ತಿಯ ಮಟ್ಟವನ್ನು ತ್ವರಿತವಾಗಿ ಹೆಚ್ಚಾಗಿಸುತ್ತದೆ. ಇದು ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಇಡೀ ದಿನ ಕೆಲಸ ಮಾಡಿದ ನಂತರ ನಿಮಗೆ ದಣಿದಿದ್ದರೆ, ನೀವು ತಕ್ಷಣ ಬೆಲ್ಲ ಸೇವಿಸುವುದು ಉತ್ತಮ. ಹೀಗಾಗಿಯೇ ಈಗಲೂ ಮನೆಗೆ ಬಂದವರಿಗಾಗಿ ಬೆಲ್ಲ ಮತ್ತು ನೀರು ಕೊಡುವ ಅಭ್ಯಾಸ ನಮ್ಮಲ್ಲಿ ಉಳಿದಿದೆ.

* ಬೆಲ್ಲದ ತುಂಡು ಜೊತೆಗೆ ಸ್ವಲ್ಪ ಶುಂಠಿಯನ್ನು ತೆಗೆದುಕೊಂಡರೆ ಮೊಣಕಾಲು ನೋವು ಕಡಿಮೆಯಾಗುತ್ತದೆ.

* ಕಪ್ಪು ಎಳ್ಳಿನ ಜೊತೆಗೆ ಬೆಲ್ಲವನ್ನು ತಿನ್ನುವುದರಿಂದ ಚಳಿಗಾಲದಲ್ಲಿ ಆಸ್ತಮಾ ಉಂಟಾಗುವುದಿಲ್ಲ.

* ತುಪ್ಪದೊಂದಿಗೆ ಬೆಲ್ಲ ತೆಗೆದುಕೊಳ್ಳುವುದರಿಂದ ಕಿವಿ ನೋವು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.

* ಕಾಮಾಲೆಗೆ ಪರಿಹಾರವಾಗಿ ಐದು ಗ್ರಾಂ ಶುಂಠಿ ಮತ್ತು ಹತ್ತು ಗ್ರಾಂ ಬೆಲ್ಲ ಹಾಕಿ ಸೇವಿಸುವುದು ಉತ್ತಮ.

* ಸಾಸಿವೆ ಎಣ್ಣೆಯಲ್ಲಿ ಐದು ಗ್ರಾಂ ಬೆಲ್ಲವನ್ನು ಹಾಕಿ ತೆಗೆದುಕೊಳ್ಳವುದರಿಂದ ಉಸಿರಾಟದ ಕಾಯಿಲೆಗಳನ್ನು ಗುಣಪಡಿಸಬಹುದು.

* ಕಾಕರ ಎಲೆಗಳು, ಬೆಳ್ಳುಳ್ಳಿ, ಲವಂಗ, ಕರಿ ಮೆಣಸು, ಒಂದು ಸಣ್ಣ ತುಂಡು ಬೆಲ್ಲ ಹಾಕಿ ಮಿಶ್ರಣ ಮಾಡಿಕೊಳ್ಳಿ. ವಾರಕ್ಕೆ ಎರಡು ಬಾರಿ ಈ ಮಿಶ್ರಣವನ್ನು ತೆಗೆದುಕೊಳ್ಳುವುದರಿಂದ ಮುಟ್ಟಿನ ಸಮಸ್ಯೆ ದೂರವಾಗುತ್ತದೆ.

* ಮಾನಸಿಕ ಒತ್ತಡ, ಖಿನ್ನತೆಯಂತಹ ಸಮಸ್ಯೆಗಳನ್ನು ತೊಡೆದುಹಾಕಲು ಒಂದು ಲೋಟ ಹಾಲಿನಲ್ಲಿ ಸಕ್ಕರೆಯ ಬದಲು ಬೆಲ್ಲ ಸೇವಿಸಿ.

* ಬೆಲ್ಲ ಮತ್ತು ತುಪ್ಪವನ್ನು ಸಮಾನ ಪ್ರಮಾಣದಲ್ಲಿ ಒಟ್ಟಿಗೆ ಸೇರಿಸಿ ತಿನ್ನುವುದರಿಂದ ಮೈಗ್ರೇನ್ ಅಥವಾ ತಲೆನೋವು 5-6 ದಿನಗಳಲ್ಲಿ ಕಡಿಮೆಯಾಗುತ್ತದೆ.

ಇದನ್ನೂ ಓದಿ:

Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು

ಹಸಿ ಟೊಮೇಟೊ ಸೇವಿಸುವ ಅಭ್ಯಾಸ ಇದೆಯೇ? ಹಾಗಿದ್ದರೆ ಆರೋಗ್ಯದಲ್ಲಾಗುವ ಈ ಬದಲಾವಣೆಗಳ ಬಗ್ಗೆ ತಿಳಿಯಿರಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್