Silver Anklets: ಅಂದಕ್ಕಷ್ಟೇ ಬೆಳ್ಳಿ ಗೆಜ್ಜೆ ಸೀಮಿತವಾಗಿಲ್ಲ, ಮಹಿಳೆಯರ ಆರೋಗ್ಯ ಕಾಪಾಡುವ ಗುಣಗಳು ಕಾಲ್ಗೆಜ್ಜೆಯಲ್ಲಿ ಅಡಗಿವೆ
ವಿಶೇಷವಾಗಿ, ಕೈ ಮತ್ತು ಕಾಲುಗಳಿಗೆ ಬೆಳ್ಳಿ ಕಡಗ ಅಥವಾ ಗೆಜ್ಜೆ ಹಾಕುವುದನ್ನು ಸೌಂದರ್ಯ ಹೆಚ್ಚಿಸುವ ವಸ್ತುಗಳು ಎಂದು ಭಾವಿಸಲಾಗಿದೆ. ಆದರೆ ಇವುಗಳು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತವಾಗಿದೆ. ಹಾಗಿದ್ದರೆ ಗೆಜ್ಜೆ ಧರಿಸುವುದರಿಂದ ಯಾವೆಲ್ಲಾ ಆರೋಗ್ಯ ಗುಣಗಳಿವೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ನಮ್ಮ ಪೂರ್ವಜರು ನಿಗದಿಪಡಿಸಿದ ಕೆಲವೊಂದಿಷ್ಟು ನಿಯಮಗಳನ್ನು ನಾವು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದೇವೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗಾಗಿಯೇ ಮೀಸಲಾದ ಕೆಲವು ಆಚರಣೆಗಳಿಗೆ ಇಂದಿಗೂ ಮನ್ನಣೆ ಇದೆ. ಅದರಲ್ಲಿ ಕಣ್ಣಿಗೆ ಕಾಡಿಗೆ ಹಚ್ಚುವುದು, ಕಾಲಿಗೆ ಗೆಜ್ಜೆ ಧರಿಸುವುದು ಮುಖ್ಯವಾಗಿದ್ದು, ಇದನ್ನು ನಮ್ಮ ಸಂಪ್ರದಾಯ ಎಂದು ನಂಬಿಕೆ ಇಟ್ಟು ಜನ ಅನುಸರಿಸುತ್ತಿದ್ದಾರೆ. ಆದರೆ ಈ ಆಚರಣೆಗಳು ಮಹಿಳೆಯರ ಅಂದವನ್ನಷ್ಟೇ ಅಲ್ಲ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನುವುದರ ಬಗ್ಗೆ ಎಷ್ಟು ಜನರಿಗೆ ಗೊತ್ತು? ವಿಶೇಷವಾಗಿ, ಕೈ ಮತ್ತು ಕಾಲುಗಳಿಗೆ ಬೆಳ್ಳಿ ಕಡಗ ಅಥವಾ ಗೆಜ್ಜೆ ಹಾಕುವುದನ್ನು ಸೌಂದರ್ಯ ಹೆಚ್ಚಿಸುವ ವಸ್ತುಗಳು ಎಂದು ಭಾವಿಸಲಾಗಿದೆ. ಆದರೆ ಇವುಗಳು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಸೂಕ್ತವಾಗಿದೆ. ಹಾಗಿದ್ದರೆ ಗೆಜ್ಜೆ ಧರಿಸುವುದರಿಂದ ಯಾವೆಲ್ಲಾ ಆರೋಗ್ಯ ಗುಣಗಳಿವೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ಕಾಲಿಗೆ ಬೆಳ್ಳಿ ಗೆಜ್ಜೆಯನ್ನು ಹಾಕುವುದರಿಂದ ನರಗಳು ರಕ್ತಚಲನೆಯನ್ನು ಸರಿಯಾಗಿ ಮಾಡುತ್ತವೆ. ಗೆಜ್ಜೆ ಆಗಾಗೆ ನರಗಳನ್ನು ಸ್ಪರ್ಶಿಸುತ್ತಿರುವುದೇ ಇದಕ್ಕೆ ಕಾರಣ. ಆ ಮೂಲಕ ಅಕ್ಯುಪಂಕ್ಚರ್ ತಂತ್ರದ ಮೂಲಕ ರಕ್ತ ಪರಿಚಲನೆ ಸರಿಯಾದ ಹಾದಿಯಲ್ಲಿರುತ್ತದೆ.
ರಕ್ತ ಪರಿಚಲನೆ ಸುಧಾರಿಸಲು ಯಾವಾಗಲೂ ಕಾಲಿಗೆ ಗೆಜ್ಜೆ ಧರಿಸಿ. ಇದರಿಂದ ಪಾದಗಳ ಅಥವಾ ಕಾಲಿನ ನೋವಿನ ಸಮಸ್ಯೆ ಕಡಿಮೆಯಾಗುತ್ತದೆ. ಒಂದೇ ಕಡೆ ನಿಂತು ಅಥವಾ ಕುಳಿತು ಕೆಲಸ ಮಾಡುವಾಗಲೂ ಸ್ವಲ್ಪ ಆಯಾಸ ಕಂಡುಬಂದು ಕಾಲು ನೋವಿನ ಸಮಸ್ಯೆ ಉಂಟಾಗುತ್ತದೆ. ಅಂತಹವರು ನಿಯಮಿತವಾಗಿ ಬೆಳ್ಳಿ ಗೆಜ್ಜೆಗಳನ್ನು ಧರಿಸುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಬೆಳ್ಳಿ ಗೆಜ್ಜೆ ಕಾಲಿನ ಮೂಳೆಗಳನ್ನು ಸದೃಢವಾಗಿರಿಸುತ್ತವೆ ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಹಿಳೆಯರ ಹಾರ್ಮೋನ್ಗಳ ತೊಂದರೆ, ಮುಟ್ಟಿನ ತೊಂದರೆ ಮತ್ತು ಗರ್ಭಧಾರಣೆಯ ಸಂದರ್ಭದಲ್ಲಿನ ತೊಂದರೆಗಳ ನಿವಾರಣೆಗೆ ಸಹಾಯ ಮಾಡುತ್ತವೆ.
ಮಹಿಳೆಯರು ಸಾಮಾನ್ಯವಾಗಿ ಹಾರ್ಮೋನ್ಗಳ ಅಸಮತೋಲನವನ್ನು ಅನುಭವಿಸುತ್ತಾರೆ. ಇದು ಅನಿಯಮಿತ ಮುಟ್ಟಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಆದಾಗ್ಯೂ, ಬೆಳ್ಳಿಯ ಗೆಜ್ಜೆಯನ್ನು ಧರಿಸುವುದರಿಂದ ಮುಟ್ಟಿನ ತೊಂದರೆಗಳನ್ನು ತಡೆಯಬಹುದು. ಗರ್ಭಿಣಿಯರು ಕಡ್ಡಾಯವಾಗಿ ಬೆಳ್ಳಿ ಕಡಗಗಳನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ, ಹೆರಿಗೆಯ ಸಮಯದಲ್ಲಿ ನೋವು ಕಡಿಮೆಯಾಗುತ್ತದೆ.
ಶಕ್ತಿ ಯಾವಾಗಲೂ ನಮ್ಮ ಕೈ ಕಾಲುಗಳಿಂದ ಬಿಡುಗಡೆಯಾಗುತ್ತದೆ. ಈ ಶಕ್ತಿಯು ನಮಗೆ ಸಕಾರಾತ್ಮಕ ಕಂಪನಗಳನ್ನು ತರುತ್ತದೆ. ನಾವು ಚಪ್ಪಲಿ ಇಲ್ಲದೆ ನೆಲದ ಮೇಲೆ ನಿಂತಾಗ ಸ್ವಲ್ಪ ಶಕ್ತಿಯು ನೆಲದಿಂದ ನಮಗೆ ಬರುತ್ತದೆ. ಅಂತೆಯೇ ದೇಹದಲ್ಲಿ ಬೆಳ್ಳಿಯನ್ನು ಧರಿಸುವುದರಿಂದ ಈ ಶಕ್ತಿಯನ್ನು ಸಕಾರಾತ್ಮಕವಾಗಿಸುತ್ತದೆ. ಮನೆಯಲ್ಲಿ ಬರಿಗಾಲಿನಲ್ಲಿ ನಡೆಯುವ ಮಹಿಳೆಯರು ಬೆಳ್ಳಿ ಗೆಜ್ಜೆ ಧರಿಸುವುದು ಸೂಕ್ತ.
ಗೆಜ್ಜೆಯೂ ಸಾಮಾನ್ಯವಾಗಿ ನಡೆಯುವಾಗ ಸದ್ದು ಮಾಡುತ್ತದೆ. ಹಾಗೆಯೇ ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಹ ಪ್ರತಿರಕ್ಷೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಮನೆಯ ಮಹಿಳೆಯರು ಗೆಜ್ಜೆ ಧರಿಸಿ ಓಡಾಡುವುದರಿಂದ ಮನೆಗೆ ಒಂದು ಲಕ್ಷಣ ಎಂದು ಕೂಡ ಪುರಾತನ ಕಾಲದ ನಂಬಿಕೆ ಇದೆ.
ಇದನ್ನೂ ಓದಿ:
ಹಸಿ ಟೊಮೇಟೊ ಸೇವಿಸುವ ಅಭ್ಯಾಸ ಇದೆಯೇ? ಹಾಗಿದ್ದರೆ ಆರೋಗ್ಯದಲ್ಲಾಗುವ ಈ ಬದಲಾವಣೆಗಳ ಬಗ್ಗೆ ತಿಳಿಯಿರಿ
Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು