Neem Leaves: ಕಹಿ ಬೇವಿನ ಸೇವನೆ ಕಷ್ಟವಾದರೂ, ಆರೋಗ್ಯಕರ ಗುಣಗಳ ದೃಷ್ಟಿಯಿಂದ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

ಕಹಿ ಬೇವನ್ನು ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕಹಿ ಬೇವಿನ ಎಲೆಗಳು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿವೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದರ ಜತೆಗೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಕಹಿ ಬೇವಿನ ಎಲೆಯ ಪ್ರಯೋಜನಗಳು ಈ ಕೆಳಗಿನಂತಿದೆ.

Neem Leaves: ಕಹಿ ಬೇವಿನ ಸೇವನೆ ಕಷ್ಟವಾದರೂ, ಆರೋಗ್ಯಕರ ಗುಣಗಳ ದೃಷ್ಟಿಯಿಂದ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
ಕಹಿ ಬೇವು
Follow us
TV9 Web
| Updated By: Skanda

Updated on: Jun 26, 2021 | 9:30 AM

ಪ್ರಸ್ತುತ ಕೊರೊನಾ ಕಾಲಘಟ್ಟದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಇತರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುವುದು ಸಹ ಮುಖ್ಯವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಹೆಚ್ಚು ಹೆಸರು ಮಾಡಿರುವ, ಪ್ರಾಚೀನ ಕಾಲದಿಂದಲೂ ಮಹತ್ವ ಪಡೆದಿರುವ ಕಹಿ ಬೇವು ಮರದಲ್ಲಿ ಸಾಕಷ್ಟು ಔಷಧೀಯ ಗುಣಗಳಿದ್ದು ಅದನ್ನು ಈ ಸಂದರ್ಭದಲ್ಲಿ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಆದರೆ ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಹಿ ಬೇವು ಬಗ್ಗೆ ಯುಗಾದಿಯ ಸಮಯದಲ್ಲಿ ಬೇವು ಬೆಲ್ಲ ಮಾಡುವಾಗ ನೆನಪಿಸಿಕೊಳ್ಳುವುದು ಬಿಟ್ಟರೆ, ಬೇರೆ ಸಂದರ್ಭದಲ್ಲಿ ಬಳಕೆ ಕಡಿಮೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಹಿ ಬೇವಿನ ಬಗ್ಗೆ ತಿಳಿಯುವುದು ಸೂಕ್ತ. ಕಹಿ ಬೇವನ್ನು ಆಯುರ್ವೇದದಲ್ಲಿ ಅನೇಕ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕಹಿ ಬೇವಿನ ಎಲೆಗಳು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿವೆ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುವುದರ ಜತೆಗೆ ಕೂದಲಿನ ಬೆಳವಣಿಗೆಗೆ ಸಹಾಯಕವಾಗಿದೆ. ಕಹಿ ಬೇವಿನ ಎಲೆಯ ಪ್ರಯೋಜನಗಳು ಈ ಕೆಳಗಿನಂತಿವೆ.

1. ಕಹಿ ಬೇವಿನ ಎಲೆಗಳು ಕಹಿಯಾಗಿರುವುದರಿಂದ ಸಾಮಾನ್ಯವಾಗಿ ಯಾರು ಇಷ್ಟಪಡುವುದಿಲ್ಲ. ಆದರೆ ಈ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದಲ್ಲದೆ ಕಹಿ ಬೇವು ರಕ್ತವನ್ನು ಸಹ ಶುದ್ಧೀಕರಿಸುತ್ತದೆ. ಇದು ಅನೇಕ ರೀತಿಯ ದೈಹಿಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

2. ಕಹಿ ಬೇವಿನ ಎಲೆಗಳು ಮುಖದಲ್ಲಿನ ಮೊಡವೆಗಳನ್ನು ದೂರ ಮಾಡುತ್ತದೆ. ಅಲ್ಲದೆ ಗಾಯಗಳನ್ನು ಬೇಗ ಗುಣಪಡಿಸುತ್ತದೆ. ಮೊಡವೆ ಮತ್ತು ಗಾಯಗಳಿಗೆ ಕಹಿ ಬೇವಿನ ಎಲೆ ಪೇಸ್ಟ್ ಹಚ್ಚುವುದರಿಂದ ನೋವಿನಿಂದ ಪರಿಹಾರ ಸಿಗುತ್ತದೆ.

3. ತುರಿಕೆ ಅಥವಾ ಇನ್ನಿತರ ಚರ್ಮದ ಕಾಯಿಲೆಗೆ ಕಹಿ ಬೇವು ರಾಮಬಾಣವಾಗಿದೆ. ಚರ್ಮದ ತೊಂದರೆ ಇರುವವರು ಪ್ರತಿದಿನ ಕಹಿ ಬೇವಿನ ಎಲೆಗಳನ್ನು ಸೇವಿಸಬೇಕು. ಎಲೆಯ ಪೇಸ್ಟ್ ಅನ್ನು ಸಣ್ಣ ಮಾತ್ರೆಗಳಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿ ಸೇವಿಸಬಹುದು ಅಥವಾ ಅವುಗಳನ್ನು ಪ್ರತಿದಿನ ಸಂಜೆ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

4. ಕಹಿ ಬೇವಿನ ಎಲೆಗಳನ್ನು ಕುದಿಸಿ, ಆ ನೀರನ್ನು ಪ್ರತಿದಿನ ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಹುಳುಗಳು ನಾಶವಾಗುತ್ತದೆ. ಜ್ವರ ಮತ್ತು ಇತರ ಕಾಯಿಲೆಗಳನ್ನು ಕೂಡ ಕಹಿ ಬೇವು ಗುಣಪಡಿಸುತ್ತದೆ. ಗರ್ಭಿಣಿಯರು ಕಹಿ ಬೇವಿನ ನೀರನ್ನು ಕುಡಿಯುತ್ತಿದ್ದರೆ, ಹೆರಿಗೆಯ ಸಮಯದಲ್ಲಿ ನೋವು ಕಡಿಮೆ ಇರುತ್ತದೆ. ಆದರೆ ವೈದ್ಯರನ್ನು ಸಂಪರ್ಕಿಸಿದ ನಂತರವೇ ಇದನ್ನು ತೆಗೆದುಕೊಳ್ಳುವುದು ಸೂಕ್ತ.

5. ಕಹಿ ಬೇವಿನ ಮರದ ಕಡ್ಡಿಗಳಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಬಾಯಿ ವಾಸನೆಯ ಸಮಸ್ಯೆ ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುತ್ತದೆ. ಅಲ್ಲದೇ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

6. ಮೂತ್ರಪಿಂಡದಲ್ಲಿ ಕಲ್ಲುಗಳನ್ನು ಹೊಂದಿರುವವರು ಕಹಿ ಬೇವಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಅವುಗಳನ್ನು ಪ್ರತಿ ದಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆ ದೂರವಾಗುತ್ತದೆ.

7. ಕಹಿ ಬೇವಿನ ಎಲೆಗಳು ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಅನೇಕ ಪ್ರಯೋಜನಗಳನ್ನು ಹೊಂದಿವೆ. ಕಹಿ ಬೇವಿನ ಎಲೆಗಳನ್ನು ಪ್ರತಿದಿನ ತೆಗೆದುಕೊಳ್ಳುವುದರಿಂದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಹಿ ಬೇವಿನ ಎಲೆಯ ರಸವನ್ನು ಸಹ ತೆಗೆದುಕೊಳ್ಳಬಹುದು.

8. ಕಹಿ ಬೇವಿನ ಎಲೆಗಳು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತವೆ. ಕಹಿ ಬೇವಿನ ಎಲೆಯ ಪೇಸ್ಟ್ ಅನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತದೆ. ತಲೆಹೊಟ್ಟು ಸಮಸ್ಯೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:

Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು

Gourd Juice Side Effects: ಸೋರೆಕಾಯಿ ಜ್ಯೂಸ್​ ಸೇವಿಸುವ ಮೊದಲು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ