Gourd Juice Side Effects: ಸೋರೆಕಾಯಿ ಜ್ಯೂಸ್ ಸೇವಿಸುವ ಮೊದಲು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ
ಸೋರೆಕಾಯಿ ಜ್ಯೂಸ್ ಅನ್ನು ಸೇವಿಸಿದರೆ ಹೊಟ್ಟೆಗೆ ಹಾನಿ ಉಂಟುಮಾಡುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಜತೆಗೆ ವಾಂತಿ, ಅತಿಸಾರ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಸೋರೆಕಾಯಿಯನ್ನು ಹೆಚ್ಚಾಗಿ ಬೇಸಿಗೆಯಲ್ಲಿ ಸೇವಿಸಲಾಗುತ್ತದೆ. ಏಕೆಂದರೆ ಅದು ದೇಹವನ್ನು ತಂಪಾಗಿರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಸೋರೆಕಾಯಿ ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಇದರಲ್ಲಿ ಖನಿಜಗಳು, ವಿಟಮಿನ್ ಎ, ಸಿ, ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟ್ಯಾಸಿಯಮ್ ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಅಲ್ಲದೆ ಹೊಟ್ಟೆಯಲ್ಲಿ ಉಂಟಾಗುವ ಅನೇಕ ಸಮಸ್ಯೆಗಳಿಗೆ ಸೋರೆಕಾಯಿ ರಾಮಬಾಣವಾಗಿದೆ. ಇದು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಸೋರೆಕಾಯಿ ಅಥವಾ ಇದರ ಜ್ಯೂಸ್ ಅನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯದ ಮೇಲೆ ಅನೇಕ ಅಡ್ಡಪರಿಣಾಮಗಳಾಗುತ್ತದೆ. ಹೆಚ್ಚು ಸೋರೆಕಾಯಿ ಜ್ಯೂಸ್ ಅನ್ನು ಸೇವಿಸಿದರೆ ಹೊಟ್ಟೆಗೆ ಹಾನಿ ಉಂಟುಮಾಡುತ್ತದೆ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಜತೆಗೆ ವಾಂತಿ, ಅತಿಸಾರ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.
1. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಮಿತ ಪ್ರಮಾಣದಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯಬೇಕು. ಆದರೆ ಹೆಚ್ಚು ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಇದು ತಲೆತಿರುಗುವಿಕೆ, ಅಪಸ್ಮಾರ ಮತ್ತು ಕಣ್ಣು ಕತ್ತಲೆ ಉಂಟಾಗುವಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
2. ಅಲರ್ಜಿಯನ್ನು ಉಂಟುಮಾಡಬಹುದು ಸೋರೆಕಾಯಿ ಜ್ಯೂಸ್ ಕಹಿಯಾಗಿರುತ್ತದೆ. ಹೆಚ್ಚಿನ ಜನರಿಗೆ ಕಹಿಯಿಂದ ಅಲರ್ಜಿ ಇರುತ್ತದೆ. ಇದನ್ನು ಕುಡಿಯುವುದರಿಂದ ಮುಖ, ತೋಳು ಮತ್ತು ಕಾಲುಗಳಲ್ಲಿ ಅಲರ್ಜಿ ಉಂಟಾಗುತ್ತದೆ. ಇದಲ್ಲದೆ, ದದ್ದು ಮತ್ತು ತುರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸೋರೆಕಾಯಿ ಜ್ಯೂಸ್ ಕಹಿಯಾಗದಂತೆ ನೋಡಿಕೊಳ್ಳಿ ಮತ್ತು ಕಹಿಯನ್ನು ಕಡಿಮೆ ಮಾಡಲು ಉಪ್ಪು, ಕರಿಮೆಣಸು ಪುಡಿ, ಪುದೀನ ಮತ್ತು ನಿಂಬೆ ರಸ ಸೇರಿಸಿ.
3. ಸೋರೆಕಾಯಿ ಜ್ಯೂಸ್ ಕುಡಿದ ನಂತರ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅತಿಯಾಗಿ ಬೆವರುವುದು, ಹಸಿವು ಕಡಿಮೆಯಾಗುವುದು, ತುರಿಕೆ, ಕಣ್ಣುಗಳ ಕೆಳಗೆ ಕಪ್ಪು ವಲಯಗಳು, ಅಪಸ್ಮಾರ, ಖಿನ್ನತೆ, ಭಯ ಇತ್ಯಾದಿಗಳನ್ನು ಹೊಂದಬಹುದು. ಸೋರೆಕಾಯಿ ಜ್ಯೂಸ್ ಅತಿಯಾಗಿ ಸೇವಿಸಿ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
4. ಎಷ್ಟು ಪ್ರಮಾಣದಲ್ಲಿ ಸೋರೆಕಾಯಿ ಜ್ಯೂಸ್ ಕುಡಿಯಬೇಕು ಒಂದು ದಿನಕ್ಕೆ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿಯಿರಿ. ಇದಕ್ಕಿಂತ ಹೆಚ್ಚು ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ನಿನ್ನೆ ಮಾಡಿದ ಸೋರೆಕಾಯಿ ಜ್ಯೂಸ್ ಅನ್ನು ಇಂದು ಸೇವಿಸುವ ಅಭ್ಯಾಸ ಬಿಟ್ಟುಬಿಡಿ. ಯಾವಾಗಲೂ ತಾಜಾ ಜ್ಯೂಸ್ ತಯಾರಿಸಿ ಕುಡಿಯಿರಿ.
ಇದನ್ನೂ ಓದಿ:
Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ