ಅಲರ್ಜಿ ಮತ್ತು ಕೊವಿಡ್​ ಲಕ್ಷಣಗಳ ಮಧ್ಯೆ ಗೊಂದಲವೇ? ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು

ಉಸಿರುಗಟ್ಟಿಕೊಳ್ಳುವುದು, ಮೂಗಿನಲ್ಲಿ ನೀರು ಸೋರುವುದು, ಸೀನುವುದು, ಚರ್ಮದ ತುರಿಕೆ, ಕಣ್ಣುಗಳ ತುರಿಕೆ ಮುಂತಾದವುಗಳು ಅಲರ್ಜಿಯ ಲಕ್ಷಣಗಳಾಗಿವೆ.

ಅಲರ್ಜಿ ಮತ್ತು ಕೊವಿಡ್​ ಲಕ್ಷಣಗಳ ಮಧ್ಯೆ ಗೊಂದಲವೇ? ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Jun 16, 2021 | 1:35 PM

ಕೊವಿಡ್​-19 ಹಾವಳಿ ಜನರ ಜೀವನವನ್ನೇ ಬದಲಾಯಿಬಿಟ್ಟಿದೆ. ಜನರ ಆರೋಗ್ಯದಲ್ಲಿ ವೈರಸ್​ನ ಹೊಡೆತವು ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಬದಲಾಯಿಸಿದೆ. ಜನರು ತಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಜಾಗೃತರಾಗಿದ್ದಾರೆ. ಆದರೆ, ಆರೋಗ್ಯದ ಕುರಿತಾಗಿ ಹೆಚ್ಚು ಗೊಂದಲಕ್ಕೀಡಾಗಿದ್ದಾರೆ. ಕೊವಿಡ್​-19 ರೋಗ ಲಕ್ಷಣಗಳು ಜ್ವರ, ನೆಗಡಿ, ತಲೆನೋವು ಆಗಿದ್ದರಿಂದ ಇದು ಅಲರ್ಜಿಯೇ? ಅಥವಾ ಕೊವಿಡ್​ ಲಕ್ಷಣವೇ? ಎಂದು ಜನರು ಹೆಚ್ಚು ತಳಮಳಗೊಂಡಿದ್ದಾರೆ. ಹಾಗಿರುವಾಗ ಕೊವಿಡ್​-19 ರೋಗಲಕ್ಷಣ ಮತ್ತು ಅರ್ಜಿಗೆ ಇರುವ ವ್ಯತ್ಯಾಸವೇನು?ಅವುಗಳನ್ನು ಹೇಗೆ ಗುರುತಿಸುವುದು ಎಂಬುದರ ಕುರಿತಾಗಿ ತಿಳಿಯೋಣ.

ಕೊವಿಡ್​-19 ಕೊವಿಡ್​ ಸೋಂಕು, ಉಸಿರಾಟ ಕ್ರಿಯೆಗೆ ಸಂಬಂಧಿಸಿದ ರೋಗ ಲಕ್ಷಣವನ್ನು ಹೊಂದಿದೆ. ಹೆಚ್ಚು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಗಾಳಿ ಮತ್ತು ದೈಹಿಕ ಸಂಪರ್ಕದ ಮೂಲಕ ಹರಡಬಹುದಾಗಿದೆ.

ಅಲರ್ಜಿ ಸಾಮಾನ್ಯವಾಗಿ ಯಾವುದೇ ಒಂದು ವಸ್ತುವಿಗೆ ಮನಷ್ಯನ ದೇಹ ಗೊಂದಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅಲರ್ಜಿ ಉಂಟಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಉದಾಹರಣೆಗೆ ವ್ಯಕ್ತಿಗೆ ಧೂಳು ತಗುಲಿದಾಗ ಶೀತ, ಜ್ವರ ಬರುವುದು. ಆತನಲ್ಲಿ ಧೂಳಿನ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಷ್ಟು ರೋಗನಿರೋಧಕ ಶಕ್ತಿ ಇಲ್ಲದಿರುವುದರಿಂದ ಅಲರ್ಜಿ ಸಮಸ್ಯೆ ಕಾಡತೊಡಗುತ್ತದೆ.

ಕೊವಿಡ್​-19 ಲಕ್ಷಣಗಳು ಆಯಾಸ, ಕೆಮ್ಮು, ಉಸಿರಾಟದ ತೊಂದರೆ ಮತ್ತು ವಾಸನೆ, ರುಚಿಯನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಇವುಗಳು ಕೊವಿಡ್​-19 ಸಾಮಾನ್ಯ ಲಕ್ಷಣಗಳಾಗಿವೆ.

ಅಲರ್ಜಿಯ ಲಕ್ಷಣಗಳು ಉಸಿರುಗಟ್ಟಿಕೊಳ್ಳುವುದು, ಮೂಗಿನಲ್ಲಿ ನೀರು ಸೋರುವುದು, ಸೀನುವುದು, ಚರ್ಮದ ತುರಿಕೆ, ಕಣ್ಣುಗಳ ತುರಿಕೆ ಮುಂತಾದವುಗಳು ಅಲರ್ಜಿಯ ಲಕ್ಷಣಗಳಾಗಿವೆ.

ಕೊವಿಡ್​19 ಮತ್ತು ಅಲರ್ಜಿ ಸಮಸ್ಯೆಯನ್ನು ತಡೆಗಟ್ಟುವ ಸಲಹೆಗಳು ಪ್ರಸ್ತುತ ಸಂದರ್ಭದಲ್ಲಿ ಕೊವಿಡ್​19 ಲಕ್ಷಣಗಳು ಬಾರದಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಆರೋಗ್ಯದ ಕುರಿತಾಗಿ ಹೆಚ್ಚು ಗಮನ ನೀಡಲೇ ಬೇಕಾಗಿದೆ. ಹೀಗಿರುವಾಗ ನಮ್ಮ ಆರೋಗ್ಯದ ಕಾಳಜಿ ಮಾಡಲು ನಾವು ಯಾವ ರೀತಿಯಲ್ಲಿ ಸಿದ್ಧರಾಗಬೇಕಿದೆ ಎಂಬುದನ್ನು ತಿಳಿಯೋಣ.

* ಮನೆಯಿಂದ ಹೊರಹೋಗುವಾಗ ಕಡ್ಡಾಯವಾಗಿ ಮುಖಗವಸು ಬಳಸಿ

*ಹೊರಗಡೆಯಿಂದ ಮನೆಗೆ ಬಂದ ತಕ್ಷಣವೇ ನಿಮ್ಮ ಕೈಗಳನ್ನು ಸ್ವಚ್ಛಗೊಳಿಸಿ

*ನೀರಿನಲ್ಲಿ ಕೈತೊಳೆಯುವ ಮುಂಚೆ ಸ್ಯಾನಿಟೈಸರ್​ ಬಳಸಿ. ಬಳಿಕ ನೀರಿನಲ್ಲಿ ಸಾಬೂನು ಹಚ್ಚಿ ಕೈ ತೊಳೆದುಕೊಳ್ಳಿ

*ಹಣ್ಣುಗಳು, ತರಕಾರಿಗಳು ಸೇರಿದಂತೆ ಯಾವುದೇ ವಸ್ತುವನ್ನು ಹೊರಗಡೆಯಿಂದ ತಂದಿದ್ದರೆ ಅದನ್ನು ಸ್ವಚ್ಛಗೊಳಿಸಿ

*ದಿನಕ್ಕೊಮ್ಮೆ ಬಿಸಿನೀರಿನ ಮೂಲಕ ಸ್ಟೀಮ್​(ಶಾಖ) ತೆಗೆದುಕೊಳ್ಳಿ. ನಿಮ್ಮಲ್ಲಿ ಶೀತ, ನೆಗಡಿ ಅಥವಾ ಕಫವಿದ್ದರೆ ಸ್ಟೋಮ್​ ತೆಗೆದುಕೊಳ್ಳುವ ಮೂಲಕ ವಾಸಿಯಾಗುತ್ತದೆ.

ಅಲರ್ಜಿ ಸಮಸ್ಯೆ ಪರಿಹಾರಕ್ಕೆ ಸಲಹೆಗಳು *ನಿಮ್ಮ ದೇಹಕ್ಕೆ ಯಾವ ಆಹಾರ ಪದಾರ್ಥ ಒಗ್ಗುತ್ತಿಲ್ಲ ಎಂಬುದನ್ನು ಗಮನಿಸಿ

*ಅಲರ್ಜಿ ಸಮಸ್ಯೆ ಕಾಡುತ್ತಿದೆ ಎಂದ ಮಾತ್ರಕ್ಕೆ ಯಾವ ಔಷಧವನ್ನೋ ಸೇವಿಸಲು ಮುಂದಾಗಬೇಡಿ. ಯಾವುದೇ ಔಷಧ ಸೆವಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ

*ಜನರು ರಸ್ತೆಯಲ್ಲಿನ ಧೂಳಿಗೆ ಹೆಚ್ಚು ಅಲರ್ಜಿಯಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಿದ್ದಾಗ ಆದಷ್ಟು, ವ್ಯಾಯಾಮ, ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ

*ಪೌಷ್ಠಿಕಾಂಶಯುಕ್ತ ಆಹಾರವನ್ನೇ ಸೇವಿಸುವದರ ಮೂಲಕವಾಗಿ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವತ್ತ ಗಮನಕೊಡಿ

ಇದನ್ನೂ ಓದಿ:

Covid 19: ಕೊವಿಡ್​ ಸಮಯದಲ್ಲಿ ಹೃದಯ ಸಂಬಂಧಿ ರೋಗಲಕ್ಷಣ ಹೊಂದಿರುವವರು ತಿಳಿದಿರಬೇಕಾದ ಕೆಲವು ಸಲಹೆಗಳು

Covid-19 ಕೊವಿಡ್ ಮೂರನೇ ಅಲೆ ಎದುರಿಸಲು ಭಾರತ ಹೇಗೆ ಸಿದ್ಧತೆ ನಡೆಸಬಹುದು?