Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್​ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ

ಟೂತ್‌ಪೇಸ್ಟ್ ಹಲ್ಲುಗಳನ್ನು ಸಂರಕ್ಷಿಸುವುದರ ಜತೆಗೆ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ ಇನ್ನಿತರ ದಿನಬಳಕೆಯ ವಸ್ತುಗಳ ಹೊಳಪನ್ನು ಕಾಪಾಡಲು ಕೂಡಾ ಟೂತ್​ಪೇಸ್ಟ್ ಬಳಕೆಯಾಗುತ್ತದೆ.

Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್​ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ
ಸಾಂಕೇತಿಕ ಚಿತ್ರ
Follow us
preethi shettigar
| Updated By: Skanda

Updated on: Jun 16, 2021 | 7:22 AM

ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಹಲ್ಲುಗಳನ್ನು ಪ್ರತಿದಿನ ಸ್ವಚ್ಛವಾಗಿರಿಸಿಕೊಳ್ಳಲು ಟೂತ್‌ಪೇಸ್ಟ್ ಬಳಸುತ್ತಾರೆ. ಆದರೆ ಟೂತ್‌ಪೇಸ್ಟ್ ಹಲ್ಲುಗಳನ್ನು ಸಂರಕ್ಷಿಸುವುದರ ಜತೆಗೆ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ ಇನ್ನಿತರ ದಿನಬಳಕೆಯ ವಸ್ತುಗಳ ಹೊಳಪನ್ನು ಕಾಪಾಡಲು ಕೂಡಾ ಟೂತ್​ಪೇಸ್ಟ್ ಬಳಕೆಯಾಗುತ್ತದೆ. ಟೂತ್​ಪೇಸ್ಟ್ ಬಳಕೆಯಿಂದ ಇದು ಸಾಧ್ಯವೇ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಮೊಡವೆಗಳನ್ನು ನಿವಾರಿಸುತ್ತದೆ ಮೊಡವೆಗಳಿಂದಾಗಿ ನಿಮ್ಮ ಮುಖದಲ್ಲಿ ಕಲೆಗಳಾಗಿದ್ದರೆ ಅಥವಾ ಮೊಡವೆ ಸಮಸ್ಯೆಯಿಂದ ಚಿಂತೆಗೀಡಾಗಿದ್ದರೆ ಟೂತ್​ಪೇಸ್ಟ್​ ಬಳಸಿ. ಮಲಗುವ ವೇಳೆಗೆ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ ಮತ್ತು ಗುಳ್ಳೆಗಳು ಅಥವಾ ಮೊಡವೆಗಳ ಮೇಲೆ ಟೂತ್‌ಪೇಸ್ಟ್ ಹಚ್ಚಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ.

ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು ನೀವು ಮುಖದ ಸುಕ್ಕುಗಳಿಂದ ಬಳಲುತ್ತಿದ್ದರೆ, ಟೂತ್‌ಪೇಸ್ಟ್‌ ಬಳಸಿ ಫೇಸ್ ಪ್ಯಾಕ್ ಅನ್ನು ಮಾಡಿಕೊಳ್ಳಬೇಕು. ಇದನ್ನು ಮಾಡಲು ಟೂತ್‌ಪೇಸ್ಟ್‌ ಜತೆಗೆ ನಿಂಬೆ ಹಣ್ಣಿನ ರಸವನ್ನು ಬಳಸಬಹುದು.

ಉಗುರಿನ ಹೊಳಪನ್ನು ಹೆಚ್ಚಿಸಲು ಟೂತ್​ಪೇಸ್ಟ್ ಬಳಸಿ ಉಗುರಿಗೆ ಪದೇ ಪದೇ ನೈಲ್​ಪಾಲಿಶ್ ಹಾಕುವುದರಿಂದ ಉಗುರು ಹೊಳಪನ್ನು ಕಳೆದುಕೊಳ್ಳುತ್ತದೆ. ಹೀಗಾಗಿ ನೈಲ್​ಪಾಲಿಶ್ ತೆಗೆದ ನಂತರ, ಟೂತ್‌ಪೇಸ್ಟ್‌ನೊಂದಿಗೆ ಉಗುರುಗಳನ್ನು ಐದು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಹತ್ತಿಯಿಂದ ವರೆಸಿ ಅದನ್ನು ತೆಗೆಯಿರಿ. ವಾರದಲ್ಲಿ ಎರಡು ಅಥವಾ ಮೂರು ಬಾರಿ ಇದನ್ನು ಮಾಡುವುದರಿಂದ ಉಗುರಿನ ಹೊಳಪನ್ನು ಹೆಚ್ಚಿಸಬಹುದು.

ಸುಟ್ಟ ಗಾಯಗಳ ಮೇಲೆ ಬಳಸಿ ಮೊದಲು ಸುಟ್ಟ ಗಾಯವನ್ನು ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ. ತದನಂತರ ತಕ್ಷಣ ಆ ಪ್ರದೇಶದ ಮೇಲೆ ಟೂತ್​ಪೇಸ್ಟ್ ಅನ್ನು ಹಚ್ಚಿರಿ. ಟೂತ್‌ಪೇಸ್ಟ್ ಸುಟ್ಟ ಗಾಯದ ಉರಿ ಕಡಿಮೆ ಮಾಡುತ್ತದೆ ಮತ್ತು ತಂಪನ್ನು ನೀಡುತ್ತದೆ ಈ ಸಂದರ್ಭದಲ್ಲಿ ಬಿಳಿ ಟೂತ್‌ಪೇಸ್ಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಬೆಳ್ಳಿ ಆಭರಣಗಳನ್ನು ಸ್ವಚ್ವಗೊಳಿಸಿ ಮಹಿಳೆಯರು ಬೆಳ್ಳಿ ಉಂಗುರಗಳು ಮತ್ತು ಗೆಜ್ಜೆಗಳನ್ನು ಬಳಸುತ್ತಾರೆ. ಇದನ್ನು ದಿನಂಪ್ರತಿ ಬಳಕೆ ಮಾಡುವುದರಿಂದ ಬೆಳ್ಳಿ ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಟೂತ್​ಪೇಸ್ಟ್​ನಿಂದ ಬೆಳ್ಳಿ ಆಭರಣಗಳನ್ನು ಸ್ವಚ್ಛಗೊಳಿಸಿ ಆಗ ಅದರ ಹೊಳಪು ಮಾಸದೆ ಹಾಗೆ ಇರುತ್ತದೆ.

ಗೋಡೆಗಳಲ್ಲಿನ ರಂಧ್ರವನ್ನು ಮುಚ್ಚಲು ಸಹಕಾರಿ ಮನೆಯ ಅಲಂಕಾರವನ್ನು ಹೆಚ್ಚಿಸಲು ಕೆಲವು ಫೋಟೊ ಫ್ರೇಮ್ ಮತ್ತು ಇನ್ನಿತರ ವಸ್ತುಗಳಿಗಾಗಿ ಗೋಡೆಗಳಲ್ಲಿ ರಂಧ್ರ ಮಾಡುತ್ತಾರೆ. ಇದು ಗೋಡೆಯ ನೋಟವನ್ನು ಹಾಳು ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಈ ರಂಧ್ರಗಳನ್ನು ತುಂಬಲು ಟೂತ್‌ಪೇಸ್ಟ್ ಬಳಸಬಹುದು.

ಬಟ್ಟೆಯಿಂದ ಕಲೆಗಳನ್ನು ತೆಗೆದುಹಾಕುತ್ತದೆ ಬಟ್ಟೆಯ ಮೇಲೆ ಕಲೆಗಳು ಹೆಚ್ಚಾಗಿ ಕಂಡುಬರುತ್ತವೆ. ಅವುಗಳನ್ನು ತೆಗೆದುಹಾಕುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಟೂತ್‌ಪೇಸ್ಟ್‌ನ ಸಹಾಯದಿಂದ ಆ ಕಲೆಗಳನ್ನು ತೆಗೆಯಬಹುದು.

ಇದನ್ನೂ ಓದಿ:

Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ

ಬಿಳಿ ಜಂಬೂ ಅಥವಾ ಪನ್ನೇರಳೆ ಹಣ್ಣು ರುಚಿಯಷ್ಟೇ ಆರೋಗ್ಯಕರ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣನ್ನು ಒಮ್ಮೆ ತಿಂದು ನೋಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ