Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ

ತಣ್ಣಗಿರುವ ವಾತಾವರಣದಿಂದಾಗಿ ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಾರೆ. ಇದರಿಂದ ತೀವ್ರ ತಲೆನೋವಿನಿಂದ ಬಳಲುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

Health Tips: ಸೈನಸ್ ಸಮಸ್ಯೆಯ ನಿವಾರಣೆಗೆ ಸರಳ ಉಪಾಯ; ಮನೆಯಲ್ಲೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ಗಮನಹರಿಸಿ
ಪ್ರಾತಿನಿಧಿಕ ಚಿತ್ರ
Follow us
| Updated By: preethi shettigar

Updated on: Jun 15, 2021 | 2:32 PM

ಸೈನಸ್ ಸಮಸ್ಯೆಯನ್ನು ಕಡಿಮೆ ಮಾಡಲು ಸಲಹೆಗಳು: ಮಳೆಗಾಲ ಆರಂಭವಾಗುತ್ತಿದ್ದು, ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಅದರಲ್ಲೂ ತಣ್ಣಗಿರುವ ವಾತಾವರಣದಿಂದಾಗಿ ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಸಂಕಷ್ಟವನ್ನು ಅನುಭವಿಸುತ್ತಾರೆ. ಇದರಿಂದ ತೀವ್ರ ತಲೆನೋವಿನಿಂದ ಬಳಲುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ವಿಶೇಷವಾಗಿ ಸೈನೋಟಿಸ್‌ನಿಂದ ಬಳಲುತ್ತಿರುವವರು ತಲೆನೋವು, ಮುಖದ ನೋವು, ಸ್ರವಿಸುವ ಮೂಗು, ಕಿವಿ, ಹಲ್ಲುನೋವು, ಜ್ವರ, ಗಂಟಲು ನೋವು, ಮೂಗು ಬಂದ್ ಆಗುವುದು ಮತ್ತು ಕೆಮ್ಮಿನಂತಹ ಲಕ್ಷಣಗಳಿಂದಾಗಿ ಕಿರಿಕಿರಿ ಅನುಭವಿಸುತ್ತಾರೆ. ಆದರೆ ಕೆಲವು ನೈಸರ್ಗಿಕ ವಿಧಾನದೊಂದಿಗೆ ನೀವು ಸೈನಸ್ ಸಮಸ್ಯೆಗಳಿಂದ ದೂರವಿರಬಹುದು. ಅವುಗಳು ಈ ಕೆಳಗಿನಂತಿವೆ.

* ಸೈನಸ್ ನೋವು ಕಡಿಮೆ ಮಾಡಲು ಅರ್ಧ ಚಮಚ ಆ್ಯಪಲ್ ಸೈಡರ್ ವಿನೆಗರ್ ಅನ್ನು ನೀರಿನಲ್ಲಿ ಬೆರೆಸಿ ಸೇವಿಸಿ. ಇಲ್ಲವಾದಲ್ಲಿ ಆ್ಯಪಲ್ ಸೈಡರ್ ವಿನೆಗರ್ ಅನ್ನು ಚಹಾ ರೂಪದಲ್ಲಿ ಕೂಡ ತೆಗೆದುಕೊಳ್ಳಬಹುದು.

* ಶುಂಠಿಯಿಂದ ಮಾಡಿದ ಕಷಾಯವನ್ನು ಸೇವಿಸುವುದರಿಂದ ಸೈನಸ್ ಸಮಸ್ಯೆ ದೂರವಾಗುತ್ತದೆ. ಜತೆಗೆ ಒಂದು ಚಮಚೆ ಶುಂಠಿ ರಸ, ಒಂದು ಚಮಚೆ ಜೇನುತುಪ್ಪವನ್ನು ದಿನಕ್ಕೆ ಮೂರು ಬಾರಿ ತೆಗೆದುಕೊಳ್ಳುವುದರಿಂದಲೂ ಈ ಸಮಸ್ಯೆ ದೂರವಾಗುತ್ತದೆ.

* ಸೈನಸ್ ಸಮಸ್ಯೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಬಿಸಿ ಸೂಪ್ ತೆಗೆದುಕೊಳ್ಳಬೇಕು. ಏಕೆಂದರೆ ಇದು ಮೂಗು ಕಟ್ಟುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಸರಿಯಾದ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಅಲ್ಲದೆ ಸೈನಸ್​ನಿಂದ ಉಂಟಾಗುವ ನೋವಿನಿಂದ ಪರಿಹಾರ ನೀಡುತ್ತದೆ.

* ಸೈನಸ್ ಸಮಸ್ಯೆಯಿರುವ ಜನರು ಯಾವಾಗಲೂ ತಮ್ಮ ದೇಹವನ್ನು ಹೈಡ್ರೀಕರಿಸಬೇಕು. ಇದರಿಂದ ದೇಹದಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಆದಷ್ಟು ಬಿಸಿ ನೀರನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಸೂಕ್ತ.

* ಸೈನೋಟಿಸ್‌ನಿಂದ ಬಳಲುತ್ತಿರುವವರು ಪುದೀನ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಮತ್ತು ಅದನ್ನು ಸ್ಟೀಮ್ ರೂಪದಲ್ಲಿ ತೆಗೆದುಕೊಳ್ಳಿ. ಹೀಗೆ ದಿನಕ್ಕೆ ಎರಡು ಬಾರಿ ಇದನ್ನು ಮಾಡುವುದರಿಂದ ಸೈನಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

Health Tips: ಮೊಸರಿನೊಂದಿಗೆ ಇತರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಇದೆಯೇ? ನಿಮ್ಮ ಆಹಾರ ಸೇವನೆ ಬಗ್ಗೆ ಎಚ್ಚರ ಇರಲಿ

Salt: ಹೆಚ್ಚು ಉಪ್ಪು ಸೇವಿಸುವ ಅಭ್ಯಾಸವಿದೆಯೇ? ಹಾಗಿದ್ದರೆ ಈ ರೋಗಲಕ್ಷಣಗಳ ಬಗ್ಗೆ ಎಚ್ಚರವಹಿಸಿ