Health Tips: ಹಸಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸದಿಂದ ಈ ನಾಲ್ಕು ಕಾಯಿಲೆಗಳನ್ನು ದೂರ ಇಡಬಹುದು
ಬೆಳ್ಳುಳ್ಳಿ ಅಡುಗೆಯನ್ನು ರುಚಿಕರವಾಗಿಸುತ್ತದೆ ಮತ್ತು ಹೆಚ್ಚು ಪರಿಮಳಯುಕ್ತ ಆಹಾರವಾಗಿಸುತ್ತದೆ. ಹೀಗಾಗಿ ಅನಾದಿಕಾಲದಿಂದಲೂ ಬೆಳ್ಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಆದಾಗ್ಯೂ ಇದನ್ನು ಬೇಯಿಸುವುದಕ್ಕಿಂತ ಹಸಿ ತಿನ್ನುವುದು ಉತ್ತಮ.
ಬೆಳ್ಳುಳ್ಳಿಗೆ ವಿಶಿಷ್ಟ ರುಚಿ ಇದ್ದು, ಅನೇಕ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಸಾಮಾನ್ಯವಾಗಿ ಅಡುಗೆಗಳಲ್ಲಿ ಬೆಳ್ಳುಳ್ಳಿ ಬಳಸುವಾಗ ಅದನ್ನು ಹುರಿದು ಹಾಕಲಾಗುತ್ತದೆ. ಹೀಗಾಗಿಯೇ ಅನೇಕರಿಗೆ ಹಸಿ ಬೆಳ್ಳುಳ್ಳಿ ತಿನ್ನುವ ಕ್ರಮದ ಬಗ್ಗೆ ತಿಳಿದಿಲ್ಲ. ಬೆಳ್ಳುಳ್ಳಿ ಅಡುಗೆಯನ್ನು ರುಚಿಕರವಾಗಿಸುತ್ತದೆ ಮತ್ತು ಹೆಚ್ಚು ಪರಿಮಳಯುಕ್ತ ಆಹಾರವಾಗಿಸುತ್ತದೆ. ಹೀಗಾಗಿ ಅನಾದಿಕಾಲದಿಂದಲೂ ಬೆಳ್ಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಆದಾಗ್ಯೂ ಇದನ್ನು ಬೇಯಿಸುವುದಕ್ಕಿಂತ ಹಸಿ ತಿನ್ನುವುದು ಉತ್ತಮ. ಬೇಯಿಸಿದ ಬೆಳ್ಳುಳ್ಳಿಗಿಂತ ಹಸಿ ಬೆಳ್ಳುಳ್ಳಿ ಹೆಚ್ಚು ಪ್ರಯೋಜನಕಾರಿ ಹೇಗೆ ಎಂದು ಹುಬ್ಬೇರಿಸುವವರ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ.
1. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಬೆಳ್ಳುಳ್ಳಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಬೆಳ್ಳುಳ್ಳಿ ಆಂಟಿಆಕ್ಸಿಡೆಂಟ್‌ಗಳು ಮತ್ತು ಆಲಿಸಿನ್‌ನಂತಹ ಸಲ್ಫರ್ ಹೊಂದಿರುವ ಸಂಯುಕ್ತಗಳಿಂದ ಕೂಡಿದೆ.
2. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ತಿಳಿಸಿದ್ದಾರೆ. ಅಲ್ಲದೆ ಬೆಳ್ಳುಳ್ಳಿ ಹೃದಯವನ್ನು ಆರೋಗ್ಯಯುತವಾಗಿ ಇಡಲು ಉಪಯುಕ್ತವಾಗಿದೆ.
3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಸಕ್ಕರೆ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ನಿರ್ವಹಣೆಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ.
4. ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಮೆದುಳಿನ ಆರೋಗ್ಯ ಚೆನ್ನಾಗಿದ್ದಾಗ ಮಾತ್ರ ಮನುಷ್ಯ ಆರೋಗ್ಯವಾಗಿರಲು ಸಾಧ್ಯ. ಬೆಳ್ಳುಳ್ಳಿಯ ಸೇವನೆಯು ಮೆದುಳಿನ ಆರೋಗ್ಯವನ್ನು ರಕ್ಷಿಸುತ್ತದೆ.
5. ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಹಸಿ ಬೆಳ್ಳುಳ್ಳಿ ಗ್ಯಾಸ್ಟಿಕ್ನಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಆಲಿಸಿನ್ ಇರುತ್ತದೆ. ಇದು ಗಂಧಕವನ್ನು ಒಳಗೊಂಡಿರುವ ಸಂಯುಕ್ತವಾಗಿದ್ದು, ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಇದನ್ನೂ ಓದಿ:
Omega-3: ರೋಗನಿರೋಧಕ ಶಕ್ತಿ ಹೆಚ್ಚಿಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಒಮೆಗಾ-3 ಆಹಾರಗಳ ಬಗ್ಗೆ ತಿಳಿಯಿರಿ
Health Tips: ವಿಟಮಿನ್ ಬಿ 12 ಕೊರತೆ ಎಂದರೇನು? ಈ ಸಮಸ್ಯೆಯಿಂದ ಹೊರಬರಲು ಸೇವಿಸಬೇಕಾದ ಆಹಾರ ಪದ್ಧತಿಗಳ ವಿವರ ಹೀಗಿದೆ