AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ವಿಟಮಿನ್ ಬಿ 12 ಕೊರತೆ ಎಂದರೇನು? ಈ ಸಮಸ್ಯೆಯಿಂದ ಹೊರಬರಲು ಸೇವಿಸಬೇಕಾದ ಆಹಾರ ಪದ್ಧತಿಗಳ ವಿವರ ಹೀಗಿದೆ

ವಯಸ್ಸಾದವರಲ್ಲಿ ಗೊಂದಲ ಮತ್ತು ಮರೆವಿನ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಅದಕ್ಕೆ ಕಾರಣ ವಿಟಮಿನ್ ಬಿ 12 ಕೊರತೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ 12 ಇರುವುದು ಅವಶ್ಯಕ.

Health Tips: ವಿಟಮಿನ್ ಬಿ 12 ಕೊರತೆ ಎಂದರೇನು? ಈ ಸಮಸ್ಯೆಯಿಂದ ಹೊರಬರಲು ಸೇವಿಸಬೇಕಾದ ಆಹಾರ ಪದ್ಧತಿಗಳ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 17, 2021 | 8:32 AM

Share

ವಿಟಮಿನ್ ಬಿ 12 ನಮ್ಮ ದೇಹದ ಕಾರ್ಯಚಟುವಟಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾದವರಲ್ಲಿ ಗೊಂದಲ ಮತ್ತು ಮರೆವಿನ ಲಕ್ಷಣಗಳು ಸಾಮಾನ್ಯವಾಗಿರುತ್ತದೆ. ಅದಕ್ಕೆ ಕಾರಣ ವಿಟಮಿನ್ ಬಿ 12 ಕೊರತೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ 12 ಇರುವುದು ಅವಶ್ಯಕ. ಇದನ್ನು ಸೈನೊಕೊಬಾಲಾಮಿನ್, ಕೋಬಾಲಾಮಿನ್ ಎಂದೂ ಕೂಡ ಕರೆಯುತ್ತಾರೆ. ಈ ವಿಟಮಿನ್ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಇದರ ಸೇವನೆಯಿಂದ ನರಮಂಡಲದ ಕಾರ್ಯಚಟುವಟಿಕೆಯಲ್ಲಿ ಮೆದುಳು ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೆ, ದೇಹದಲ್ಲಿನ ಕೆಂಪು ರಕ್ತ ಕಣಗಳ ಉತ್ಪಾದನೆ, ಡಿಎನ್‌ಎ ಉತ್ಪಾದನೆ, ನಿಯಂತ್ರಣ ಮತ್ತು ಕೊಬ್ಬಿನಾಮ್ಲಗಳಿಗೆ ವಿಟಮಿನ್ ಬಿ 12 ಅವಶ್ಯಕವಾಗಿದೆ.

ವಿಟಮಿನ್ ಬಿ 12 ಉಪಯೋಗ ನಮ್ಮ ನರಮಂಡಲವನ್ನು ಆರೋಗ್ಯವಾಗಿಡಲು ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ 12 ಅವಶ್ಯಕ. ಇದರ ಕೊರತೆಯು ಸಣ್ಣ ಪ್ರಮಾಣದಲ್ಲಿ ಇದ್ದರೆ, ಅದು ಸ್ನಾಯು ದೌರ್ಬಲ್ಯ, ಆಲಸ್ಯ, ನಡುಕ, ಮೂತ್ರ ಸಮಸ್ಯೆ, ಕಡಿಮೆ ರಕ್ತದೊತ್ತಡ, ರೋಗಗ್ರಸ್ತತೆ ಮತ್ತು ಮರೆವಿಗೆ ಕಾರಣವಾಗಬಹುದು. ವಿಟಮಿನ್ ಬಿ 12ನ ಕೊರತೆ ತುಂಬಾ ತೀವ್ರವಾಗಿದ್ದರೆ, ಅದು ರಕ್ತಹೀನತೆಗೆ ಕಾರಣವಾಗಬಹುದು. ಎಲ್ಲಾ ಬಿ ಜೀವಸತ್ವಗಳಂತೆ ಬಿ 12 ನೀರಿನಲ್ಲಿ ಕರಗುತ್ತದೆ.

ಶೇಖರಣಾ ಪ್ರಮಾಣ ಕಡಿಮೆಯಿದ್ದರೆ ಬಿ 12 ಕೊರತೆ ಬಹಳ ಬೇಗನೆ ಸಂಭವಿಸುತ್ತದೆ. ಮಕ್ಕಳಲ್ಲಿ ಇದು ಮೊದಲು ಪರಿಣಾಮವನ್ನು ಬೀರುತ್ತದೆ. ವಿಟಮಿನ್ ಮಟ್ಟವನ್ನು ತಿಳಿಯಲು ರಕ್ತ ಪರೀಕ್ಷೆ ಮಾಡಬೇಕು. ವಿಟಮಿನ್ ಬಿ 12 ಕೊರತೆಯಿರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಹಾರದಲ್ಲಿ ಬದಲಾವಣೆಗಳನ್ನು ಮಾಡಿದ ನಂತರ ಯಾವುದೇ ಬದಲಾವಣೆಗಳಿಲ್ಲದಿದ್ದರೆ, ವಿಟಮಿನ್ ಬಿ 12 ಕೊರತೆಯ ವೈದ್ಯಕೀಯ ಕಾರಣಗಳನ್ನು ಕಂಡುಹಿಡಿಯಲು ವೈದ್ಯರನ್ನು ಸಂಪರ್ಕಿಸಿ.

ಆಹಾರ ಪದ್ಧತಿಯಲ್ಲಿ ಬದಲಾವಣೆ ಕೆಲವು ಆಹಾರವನ್ನು ಸೇವಿಸುವುದರಿಂದ ಜೀವಸತ್ವಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಲು, ಮೀನು, ಏಡಿಗಳು, ಸೋಯಾ ಉತ್ಪನ್ನಗಳು, ಚೀಸ್, ಮೊಟ್ಟೆ, ಕೆಂಪು ಮಾಂಸ, ಹಾಲು ಮತ್ತು ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ವಿಟಮಿನ್ ಬಿ 12 ಅಧಿಕವಾಗಿರುತ್ತದೆ ಮತ್ತು ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ.

ಇದನ್ನೂ ಓದಿ:

Toothpaste Benefits: ಹಲ್ಲುಗಳನ್ನು ಸ್ವಚ್ಛಗೊಳಿಸುವುದರ ಜತೆಗೆ ಟೂತ್​ಪೇಸ್ಟ್ ಮುಖದ ಸೌಂದರ್ಯವನ್ನೂ ಹೆಚ್ಚಿಸುತ್ತದೆ

Mouth Ulcers: ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಈ ಸರಳ ವಿಧಾನವನ್ನು ಅನುಸರಿಸಿ ನೋವಿನಿಂದ ಮುಕ್ತಿ ಪಡೆಯಿರಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್