ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಪುರುಷರು ತಿಳಿದುಕೊಳ್ಳಬೇಕಾದ ಅವಶ್ಯಕತೆಯಿದೆ, ಅದರ ಲಕ್ಷಣ ಮತ್ತು ಚಿಕಿತ್ಸೆ ಕುರಿತ ಮಾಹಿತಿ ಇಲ್ಲಿದೆ
ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯೊಂದರ ಪ್ರಕಾರ.‘ಜಗತ್ತಿನಾದ್ಯಂತ ಪ್ರಾಸ್ಟೇಟ್ ಕ್ಯಾನ್ಸರ್ ಪುರಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾರಕ ಕಾಯಿಲೆಯಾಗಿದ್ದು ಅವರಲ್ಲಿ ಕ್ಯಾನ್ಸರ್ ಮೂಲಕ ಆಗುವ ಸಾವುಗಳ ಪೈಕಿ ಆರನೇ ಸ್ಥಾನದಲ್ಲಿದೆ.
ವೈದ್ಯಕೀಯ ಲೋಕದಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನಿರಂತರವಾಗಿ ಚರ್ಚೆಗಳಾಗುತ್ತಿರುತ್ತವೆ. ವೈದ್ಯರ ಪ್ರಕಾರ ಪುರಷರಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಕಾಯಿಲೆಗಾಗಿದೆ ಮತ್ತು ಸಾವಿಗೆ ಕಾರಣವಾಗುವ ಅಪಾಯಕಾರಿ ಕ್ಯಾನ್ಸರ್ಗಳಲ್ಲಿ ಇದಕ್ಕೆ ಆರನೇ ಸ್ಥಾನವಿದೆ. ಅಮೇರಿಕಾದ ಸಿಡಿಸಿ ನೀಡಿರುವ ಮಾಹಿತಿ ಪ್ರಕಾರ ಪ್ರಾಸ್ಟೇಟ್ ಕ್ಯಾನ್ಸರ್ ಯಾಕೆ ಮತ್ತು ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ ಆದರೆ ನಿಶ್ಚಿತವಾಗಿ ಜೈವಿಕ ಆಯಾಮ ಇದರಲ್ಲಿ ಅಡಗಿದೆ. ಅನುವಂಶೀಯತೆ, ಜನಾಂಗ ಮತ್ತು ಕೌಟುಂಬಿಕ ಹಿನ್ನೆಲೆ ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ತಲೆದೋರುವ ಹಿಂದಿನ ಕಾರಣಗಳಾಗಿವೆ
ಪ್ರಾಸ್ಟೇಟ್ ಕ್ಯಾನ್ಸರ್ ಎಂದರೇನು?
ಪ್ರಾಸ್ಟೇಟ್ ಪುರುಷರಲ್ಲಿ ಸಣ್ಣ ಆಕ್ರೋಟಿನ ಗಾತ್ರದ ಒಂದು ಗ್ರಂಥಿಯಾಗಿದ್ದು ಇದು ಪುರುಷರಲ್ಲಿ ವೀರ್ಯಾಣಗಳನ್ನು ಪೋಷಿಸುವ ಮತ್ತು ಸಾಗಿಸುವ ಕೆಲಸ ಮಾಡುವ ವೀರ್ಯರಸವನ್ನು ಉತ್ಪಾದಿಸುತ್ತದೆ. ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾಸ್ಟೇಟ್ನಲ್ಲಿ ಕಂಡುಬರುವ ಕ್ಯಾನ್ಸರ್ ಆಗಿದ್ದು ಪ್ರಾಸ್ಟೇಟ್ ಮೂತ್ರಕೋಶದ ಕೆಳಗೆ ಮತ್ತು ಗುದನಾಳದ ಮುಂಭಾಗದಲ್ಲಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಪ್ರಾಸ್ಟೇಟ್ ಗ್ರಂಥಿಯಲ್ಲಿನ ಕೋಶಗಳ ಅನಿಯಂತ್ರಿತ (ಮಾರಕ) ಬೆಳವಣಿಗೆಯೆಂದು ಗುರುತಿಸಲಾಗುತ್ತದೆ. ಈ ಕ್ಯಾನ್ಸರ್ ಬಗ್ಗೆ ಜನಕ್ಕೆ ಹೆಚ್ಚು ಗೊತ್ತಿಲ್ಲವಾದರೂ ಇದು ಪುರುಷರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್ಗಳಲ್ಲಿ ಒಂದಾಗಿದೆ.
ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ವರದಿಯೊಂದರ ಪ್ರಕಾರ.‘ಜಗತ್ತಿನಾದ್ಯಂತ ಪ್ರಾಸ್ಟೇಟ್ ಕ್ಯಾನ್ಸರ್ ಪುರಷರಲ್ಲಿ ಸಾಮಾನ್ಯವಾಗಿ ಕಂಡುಬರುವ ಮಾರಕ ಕಾಯಿಲೆಯಾಗಿದ್ದು ಅವರಲ್ಲಿ ಕ್ಯಾನ್ಸರ್ ಮೂಲಕ ಆಗುವ ಸಾವುಗಳ ಪೈಕಿ ಆರನೇ ಸ್ಥಾನದಲ್ಲಿದೆ. 2012 ರಲ್ಲಿ ವಿಶ್ವದಾದ್ಯಂತ 11,00,000 ಹೊಸ ಪ್ರಕರಣಗಳು ಪತ್ತೆಯಾಗಿದ್ದವು ಮತ್ತು ಈ ಪೀಡೆಯು 3,07,000 ಜನರನ್ನು ಬಲಿತೆಗೆದುಕೊಂಡಿತ್ತು. ಅದೃಷ್ಟವಶಾತ್, ಹೆಚ್ಚಿನ ಪ್ರಾಸ್ಟೇಟ್ ಕ್ಯಾನ್ಸರ್ಗಗಳ ಬೆವಣಿಗೆ ನಿಧಾನ ಗತಿಯದ್ದಾಗಿರುತ್ತದೆ, ಮತ್ತು ಭೀತಿ ಹುಟ್ಟಿಸುವಷ್ಟು ಉಗ್ರ ಸ್ವರೂಪದ್ದಾಗಿರುವುದಿಲ್ಲ.’
ಪ್ರಾಸ್ಟೇಟ್ ಕ್ಯಾನ್ಸರ್ಗಳಲ್ಲಿ ಹೆಚ್ಚಿನವು ನಿಧಾನಗತಿಯಲ್ಲಿ ಬೆಳೆಯುತ್ತವೆ ಮತ್ತು ಪ್ರಾಸ್ಟೇಟ್ ಗ್ರಂಥಿಗೆ ಮಾತ್ರ ಸೀಮಿತವಾಗಿರುತ್ತವೆ. ಯುಸಿಎಲ್ಎ ಹೆಲ್ತ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ‘ಕೆಲವು ಪ್ರಾಸ್ಟೇಟ್ ಕ್ಯಾನ್ಸರ್ ತುಂಬಾ ನಿಧಾನವಾಗಿ ಬೆಳೆದು, ಅದು ದೇಹದಲ್ಲಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಮೊದಲೇ ಬಹಳಷ್ಟು ಪುರುಷರು ಬೇರೆ ಕಾಯಿಲೆಗಳಿಂದ ಸಾವನ್ನಪ್ಪುತ್ತಾರೆ. ಆದರೆ ಇದರಲ್ಲಿ ಕೆಲವು ಆಕ್ರಮಣಶೀಲ ಸ್ವರೂಪವುಗಳಾಗಿದ್ದು ಹತ್ತಿರದ ಅಂಗಗಳಿಗೆ ಬೇಗ ಹಬ್ಬಿಬಿಡುತ್ತವೆ. ಇಲ್ಲಿ ಮೊದಲು ಚರ್ಚಿಸಿದ ಬಗೆಯ ಪ್ರಾಸ್ಟೇಟ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿಯೇ ಪತ್ತೆಯಾಗಿ ಅದು ಪ್ರಾಸ್ಟೇಟ್ ಗ್ರಂಥಿಗೆ ಮಾತ್ರ ಸೀಮಿತವಾಗಿದ್ದರೆ ಬದುಕುಳಿಯುವ ಅವಕಾಶ ಜಾಸ್ತಿಯಿರುತ್ತದೆ,
ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು?
ದುಃಖಕರ ಸಂಗತಿಯೆಂದರೆ, ಪ್ರಾಸ್ಟೇಟ್ ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರುವುದಿಲ್ಲ. ವಿರಳ ಸಂದರ್ಭಗಳಲ್ಲಿ, ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಮುಂದುವರಿದ ಹಂತ ತಲುಪಿದ್ದರೆ ಕೆಲವು ನಿರ್ದಿಷ್ಟವಾದ ಲಕ್ಷಣಗಳು ಕಾಣಿಸಬಹುದು. ಆದರೆ, ಮೂತ್ರ ವಿಸರ್ಜಿಸುವಾಗ ತೊಂದರೆ, ಮೂತ್ರದಲ್ಲಿ ರಕ್ತ, ಮತ್ತು ಮೂಳೆ ನೋವು ಮುಂತಾದ ಲಕ್ಷಣಗಳು ಕ್ಯಾನ್ಸರ್ ಇಲ್ಲದ ಸಂದರ್ಭಗಳಲ್ಲೂ ಕಾಣಿಸಿಕೊಳ್ಳುವುದರಿಂದ ಕೂಡಲೇ ಯಾವುದೇ ತೀರ್ಮಾನಕ್ಕೆ ಬರುವುದು ಸಮಂಜಸವಲ್ಲ. ಕೆಲ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಜಾಸ್ತಿಯಿರುತ್ತದೆ.
-ಅಮೇರಿಕಾದಲ್ಲಿ ಬಿಳಿಯರಿಗಿಂತ ಜಾಸ್ತಿ ಕಪ್ಪು ಅಮೇರಿಕನ್ನರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಕಂಡುಬರುತ್ತದೆ
-ಸಾಮಾನ್ಯವಾಗಿ 50 ಕ್ಕಿಂತ ಹೆಚ್ಚು ವಯಸ್ಸಿನ ಪುರುಷರಲ್ಲಿ ಇದು ಕಂಡುಬರುತ್ತದೆ.
-ಕುಟುಂಬದ ಪುರುಷರು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲಿದ ಇತಿಹಾಸವಿದ್ದರೆ, ಅದು ಅನುವಂಶೀಯವಾಗಿ ಇತರ ಪುರುಷ ಸದಸ್ಯರಿಗೂ ಬರುವ ಸಾಧ್ಯತೆ ಇರುತ್ತದೆ. ಕುಟುಂಬದ ಮಹಿಳೆಯರು ಸ್ತನದ ಕ್ತಾನ್ಸರ್ನನಿಂದ ಬಳಲಿದ್ದರೂ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರಬಹುದು.
-ನಿಯಮಿತವಾಗಿ ಕೊಬ್ಬಿನಾಂಶ ಜಾಸ್ತಿಯಿರುವ ಆಹಾರ ಪದಾರ್ಥಗಳನ್ನು ತಿನ್ನುವ ಜನ ಮತ್ತು ಸ್ಥೂಲದೇಹಿಗಳು ಪ್ರಾಸ್ಟೇಟ್ ಕ್ಯಾನ್ಸರ್ನಿಂದ ಬಳಲುವ ಸಾಧ್ಯತೆ ಇರುತ್ತದೆ.
ನಿಯಮಿತವಾಗಿ ಸ್ಕ್ರೀನಿಂಗ್, ಪಿಎಸ್ಎ ರಕ್ತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಒಳ್ಳೆಯದು, ಯಾಕೆಂದರೆ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅತ್ಯವಶ್ಯಕವಾಗಿದೆ.
ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ ಮಾಡಲು ಸ್ಕ್ರೀನ್ ಟೆಸ್ಟ್
ಯುಎಸ್ ಸಿಡಿಸಿ ಹೇಳುವ ಹಾಗೆ, ಪ್ರಾಸ್ಟೇಟ್-ಸ್ಪೆಸಿಫಿಕ್ ಆಂಟಿಜೆನ್ (ಪಿಎಸ್ಎ) ಎಂಬ ರಕ್ತ ಪರೀಕ್ಷೆಯು ರಕ್ತದಲ್ಲಿನ ಪಿಎಸ್ಎ ಮಟ್ಟವನ್ನು ಅಳೆಯುತ್ತದೆ. ಪಿಎಸ್ಎ ಎಂಬುದು ಪ್ರಾಸ್ಟೇಟ್ನಲ್ಲಿ ಉತ್ಪತ್ತಿಯಾಗುವ ವಸ್ತುವಾಗಿದೆ. ಪ್ರಾಸ್ಟೇಟ್ ಕ್ಯಾನ್ಸರ್ ಹೊಂದಿರುವ ಪುರುಷರಲ್ಲಿ ರಕ್ತದಲ್ಲಿನ ಪಿಎಸ್ಎ ಮಟ್ಟವು ಹೆಚ್ಚಾಗಿರುತ್ತದೆ. ಪ್ರಾಸ್ಟೇಟ್ ಮೇಲೆ ಪರಿಣಾಮ ಬೀರುವ ಇತರ ಪರಿಸ್ಥಿತಿಗಳಲ್ಲಿ ಪಿಎಸ್ಎ ಮಟ್ಟವನ್ನು ಸಹ ಹೆಚ್ಚಿಸಬಹುದು, ನಿಮ್ಮ ಪಿಎಸ್ಎ ಪರೀಕ್ಷಾ ಫಲಿತಾಂಶಗಳ ಬಗ್ಗೆ ಹೆಚ್ಚಿನ ವಿವರಣೆ ನೀಡಲು ವೈದ್ಯರೇ ಅತ್ಯಂತ ಸೂಕ್ತ.
ವ್ಯಕ್ತಿಯೊಬ್ಬನಲ್ಲಿ ಪಿಎಸ್ಎ ಪರೀಕ್ಷೆ ಫಲಿತಾಂಶ ಅಸಹಜವಾಗಿದ್ದರೆ, ಆತ ಪ್ರಾಸ್ಟೇಟ್ ಕ್ಯಾನ್ಸರ್ ಬಳಲುತ್ತಿರುವನೇ ಎಂದು ಕಂಡುಹಿಡಿಯಲು ವೈದ್ಯರು ಬಯಾಪ್ಸಿಯ ಶಿಫಾರಸು ಮಾಡಬಹುದು.
ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯು ಒಂದೇ ತೆರನಾಗಿರದೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಯಾಕೆಂದರೆ ಪ್ರಾಸ್ಟೇಟ್ ಕ್ಯಾನ್ಸರ್ ಬಹಳ ನಿಧಾನವಾಗಿ ಬೆಳೆಯುತ್ತದೆ ಮತ್ತು ಗ್ರಂಥಿಯಲ್ಲಿ ಉಳಿಯುತ್ತದೆ: ಕ್ಲೀವ್ಲ್ಯಾಂಡ್ ಕ್ಲಿನಿಕ್ ಯುಎಸ್ಎ ಪ್ರಕಾರ, ಅನೇಕ ಪುರುಷರು ಚಿಕಿತ್ಸೆರಹಿತ ಎಚ್ಚರದಿಂದಿರಲು ಬಯಸುತ್ತಾರೆ. ವೇಗವಾಗಿ ಹರಡುವ ಕ್ಯಾನ್ಸರ್ಗಳಿಗೆ ಬ್ರಾಕಿಥೆರಪಿ (ಆಂತರಿಕ ವಿಕಿರಣ), ಪ್ರಾಸ್ಟಟೆಕ್ಟಮಿ ಶಸ್ತ್ರಚಿಕಿತ್ಸೆ ಮತ್ತು ಫೋಕಲ್ ಥೆರಪಿ ಚಿಕಿತ್ಸೆಗಳು ಲಭ್ಯವಿವೆ.
ಇದನ್ನೂ ಓದಿ: World Cancer Day 2021 ‘ಕ್ಯಾನ್ಸರ್ ಬಂದಾಕ್ಷಣ ಹೆದರಬೇಡ್ರಿ’- ಖ್ಯಾತ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ