Liver Disease: ಪಿತ್ತಜನಕಾಂಗದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಮದ ಮೇಲಿನ ಈ 6 ಲಕ್ಷಣಗಳು ಮುನ್ನೆಚ್ಚರಿಕೆ ನೀಡುತ್ತದೆ

ಚರ್ಮದ ಮೇಲೆ ಕಾಣಿಸಿಕೊಳ್ಳುವ ಕಲೆಗಳು ಪಿತ್ತಜನಕಾಂಗದ ಸಮಸ್ಯೆಗಳ ಲಕ್ಷಣಗಳಾಗಿರುತ್ತದೆ. ಹೀಗಾಗಿ ಈ ಮುನ್ನೆಚ್ಚರಿಕೆಯ ಸಂಕೇತಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಉತ್ತಮ.

Liver Disease: ಪಿತ್ತಜನಕಾಂಗದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಮದ ಮೇಲಿನ ಈ 6 ಲಕ್ಷಣಗಳು ಮುನ್ನೆಚ್ಚರಿಕೆ ನೀಡುತ್ತದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jun 23, 2021 | 1:19 PM

ಚರ್ಮದ ಮೇಲೆ ತುರಿಕೆ, ಉರಿಯೂತ ಮತ್ತು ದದ್ದುಗಳಂತಹ ಸಮಸ್ಯೆಗಳನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ ಮತ್ತು ಯಾವುದಾದರೂ ತಾತ್ಕಾಲಿಕ ನಿವಾರಕವನ್ನು ಬಳಸಿ ಅದರಿಂದ ಹೊರಬರಲು ಪ್ರಯತ್ನಿಸುತ್ತೇವೆ. ಆದಾಗ್ಯೂ ಕೆಲವೊಮ್ಮೆ ಈ ಸಮಸ್ಯೆಗಳು ಅಥವಾ ಚರ್ಮದ ಮೇಲೆ ಕಾಣಿಸುವ ಈ ಲಕ್ಷಣಗಳು ಕೆಲವು ರೋಗದ ಸಂಕೇತವಾಗಿರುತ್ತದೆ ಎಂಬುವುದು ಎಷ್ಟು ಜನರಿಗೆ ತಿಳಿದಿದೆ. ಅದರಲ್ಲೂ ಚರ್ಮದ ಮೇಲೆ ಕಾಣಿಸಿಕೊಳ್ಳುವ ಕಲೆಗಳು ಪಿತ್ತಜನಕಾಂಗದ ಸಮಸ್ಯೆಗಳ ಲಕ್ಷಣಗಳಾಗಿರುತ್ತದೆ. ಹೀಗಾಗಿ ಈ ಮುನ್ನೆಚ್ಚರಿಕೆಯ ಸಂಕೇತಗಳ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಉತ್ತಮ.

1. ಚರ್ಮದಲ್ಲಿ ತುರಿಕೆ ರಕ್ತದಲ್ಲಿನ ಪಿತ್ತರಸ ರಚನೆಯಾದಾಗ ಅಥವಾ ಪಿತ್ತಜನಕಾಂಗ ಹಾನಿಯಾದ ಪರಿಸ್ಥಿತಿಯಲ್ಲಿ ಚರ್ಮದ ಮೇಲೆ ತುರಿಕೆ ಸಮಸ್ಯೆ ಪ್ರಾರಂಭವಾಗುತ್ತದೆ. ವಾಸ್ತವವಾಗಿ ಪಿತ್ತಜನಕಾಂಗವು ವಿಫಲಗೊಳ್ಳಲು ಪ್ರಾರಂಭಿಸಿದಾಗ ಪಿತ್ತರಸವು ರಕ್ತದೊಂದಿಗೆ ಬೆರೆಯಲು ಪ್ರಾರಂಭಿಸುತ್ತದೆ. ಇದು ತುರಿಕೆ ಸಮಸ್ಯೆಯನ್ನು ಉಂಟುಮಾಡುತ್ತದೆ.

2. ಮೂತ್ರದ ಹಳದಿ ಬಣ್ಣ ಕಣ್ಣು, ಚರ್ಮ ಮತ್ತು ಉಗುರುಗಳ ಹಳದಿ ಬಣ್ಣವು ಪಿತ್ತಜನಕಾಂಗದ ಕಾಯಿಲೆಯ ಲಕ್ಷಣವಾಗಿದೆ. ಮೂತ್ರದ ಹಳದಿ ಬಣ್ಣವು ಪಿತ್ತಜನಕಾಂಗದ ಅಪಸಾಮಾನ್ಯ ಕ್ರಿಯೆಯನ್ನು ಸಹ ಸೂಚಿಸುತ್ತದೆ.

3. ಚರ್ಮದ ಮೇಲೆ ಕಪ್ಪು ಕಲೆ ಪಿತ್ತಜನಕಾಂಗ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಈಸ್ಟ್ರೊಜೆನ್ ಮಟ್ಟ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ಟೈರೊನೇಸ್ ಎಂಬ ಅಂಶವು ದೇಹದಲ್ಲಿ ಬೆಳೆಯುತ್ತದೆ. ಆದ್ದರಿಂದ ಚರ್ಮದ ಮೇಲೆ ಕಂದು ಅಥವಾ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಚರ್ಮದ ಮೇಲೆ ಈ ರೀತಿಯ ಸಮಸ್ಯೆಗಳು ಕಾಣಿಸಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರನ್ನು ಭೇಟಿ ಮಾಡಿ.

4. ಸ್ಪೈಡರ್ ಆಂಜಿಯೋಮಾಸ್ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟ ಹೆಚ್ಚಾದಂತೆ, ಸ್ಪೈಡರ್ ವೆಬ್ ನಂತಹ ಸಣ್ಣ ಕೋಶಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಸ್ಪೈಡರ್ ಆಂಜಿಯೋಮಾಸ್ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಪಿತ್ತಜನಕಾಂಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಸಂಕೇತವಾಗಿದೆ.

5. ಚರ್ಮದ ಮೇಲಿನ ನೀಲಿ ದದ್ದು ನೀಲಿ ದದ್ದುಗಳು ಹೆಚ್ಚಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇದು ಸಂಭವಿಸಿದಲ್ಲಿ ಪಿತ್ತಜನಕಾಂಗದ ಸಮಸ್ಯೆ ಇದೆ ಎಂದರ್ಥ. ನಿಮ್ಮ ಪಿತ್ತಜನಕಾಂಗ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತಿಲ್ಲ ಎಂಬ ಸೂಚನೆ ಇದಾಗಿದೆ.

6. ಉರಿಯೂತ ಅಂಗೈಯಲ್ಲಿ ಆಗಾಗ್ಗೆ ಉರಿಯೂತ ಮತ್ತು ತುರಿಕೆ ಉಂಟಾದರೆ, ನಿಮ್ಮ ದೇಹದಲ್ಲಿನ ಹಾರ್ಮೋನುಗಳು ಅಸಮತೋಲಿತವಾಗಿರುತ್ತದೆ. ಇವು ಪಿತ್ತಜನಕಾಂಗದ ವೈಫಲ್ಯದಿಂದ ಬಳಲುತ್ತಿರುವ ಬಗ್ಗೆ ಸೂಚಿಸುತ್ತವೆ. ಹೊಟ್ಟೆಯ ಕೆಳಭಾಗದಲ್ಲಿ ಉರಿಯೂತವು ಪಿತ್ತಜನಕಾಂಗ ವೈಫಲ್ಯದ ಸಂಕೇತವಾಗಿದೆ. ಈ ವೈಶಿಷ್ಟ್ಯವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ ಮತ್ತು ತಕ್ಷಣ ತಜ್ಞರನ್ನು ಸಂಪರ್ಕಿಸಿ.

ಇದನ್ನೂ ಓದಿ:

ರಾತ್ರಿ ಊಟ ಮಾಡಿದ ಬಳಿಕ ಸ್ನಾನ ಮಾಡುವ ಅಭ್ಯಾಸ ಇದೆಯೇ? ಹಾಗಿದ್ದರೆ ಅದರಿಂದ ಉಂಟಾಗುವ ಸಮಸ್ಯೆ ಬಗ್ಗೆ ಗಮನಿಸಿ

Mouth Ulcers: ಬಾಯಿ ಹುಣ್ಣಿನಿಂದ ಬಳಲುತ್ತಿದ್ದೀರಾ? ಈ ಸರಳ ವಿಧಾನವನ್ನು ಅನುಸರಿಸಿ ನೋವಿನಿಂದ ಮುಕ್ತಿ ಪಡೆಯಿರಿ

Published On - 12:08 pm, Wed, 23 June 21