ಜಾರ್ಖಂಡ ನ್ಯಾಯಾಧೀಶರು ಸತ್ತಿದ್ದು ಅಪಘಾತದಿಂದಲ್ಲ.. ಅವರದ್ದು ಹತ್ಯೆ; ಸಿಸಿಟಿವಿ ಫೂಟೇಜ್​ ಬಿಚ್ಚಿಟ್ಟ ಭಯಾನಕ ಸತ್ಯ, ಶಾಕಿಂಗ್​ ದೃಶ್ಯ ವೈರಲ್

Jharkhand Judge Murder: ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಟೋ ಚಾಲಕನೊಬ್ಬನನ್ನು ಗಿರಿಡಿಹ್​ ಪೊಲೀಸರು ಬಂಧಿಸಿದ್ದಾರೆ. ಹಾಗೇ, ಈತನ ಇಬ್ಬರು ಸಹಾಯಕರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಜಾರ್ಖಂಡ ನ್ಯಾಯಾಧೀಶರು ಸತ್ತಿದ್ದು ಅಪಘಾತದಿಂದಲ್ಲ.. ಅವರದ್ದು ಹತ್ಯೆ; ಸಿಸಿಟಿವಿ ಫೂಟೇಜ್​ ಬಿಚ್ಚಿಟ್ಟ ಭಯಾನಕ ಸತ್ಯ, ಶಾಕಿಂಗ್​ ದೃಶ್ಯ ವೈರಲ್
ಮೃತ ನ್ಯಾಯಾಧೀಶ ಉತ್ತಮ್ ಆನಂದ್​
Follow us
TV9 Web
| Updated By: Lakshmi Hegde

Updated on:Jul 29, 2021 | 1:06 PM

ಜಾರ್ಖಂಡ್​ನ ಧನ್​ಬಾದ್​ನ ಹೆಚ್ಚುವರಿ ಮತ್ತು ಸೆಷನ್ಸ್​ ನ್ಯಾಯಾಧೀಶ (Jharkhand Judge) ಉತ್ತಮ್ ಆನಂದ್ (Uttam Anand)​ ಅವರು ಇಂದು ಬೆಳಗ್ಗೆ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ, ವಾಹನವೊಂದು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಇದರ ಸಿಸಿಟಿವಿ ದೃಶ್ಯ (CCTV Footage) ಸೆರೆಯಾಗಿದ್ದು, ಅಪರಿಚಿತ ಟೆಂಪೋ​ವೊಂದು ಉದ್ದೇಶಪೂರ್ವಕವಾಗಿಯೇ ಅವರಿಗೆ ಡಿಕ್ಕಿಹೊಡೆದಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಸದ್ಯ ಈ ಪ್ರಕರಣದ ತನಿಖೆ ಪ್ರಾರಂಭವಾಗಿದೆ. ಇನ್ನು ಹಾಡುಹಗಲಲ್ಲಿ ಈ ನ್ಯಾಯಾಧೀಶರನ್ನು ಹತ್ಯೆ ಮಾಡಿದ ವಿಚಾರವನ್ನು ಸುಪ್ರೀಂಕೋರ್ಟ್ ಬಾರ್​ ಅಸೋಸಿಯೇಶನ್​ನ ಹಿರಿಯ ನ್ಯಾಯವಾದಿ ವಿಕಾಸ್​ ಸಿಂಗ್ ಅವರು, ಸುಪ್ರೀಂಕೋರ್ಟ್(Supreme Court)​ನ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದ​ ​ಗಮನಕ್ಕೂ ತಂದಿದ್ದಾರೆ. ಹಾಗೇ, ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ನಿರ್ದಾಕ್ಷಿಣ್ಯ ದಾಳಿ ಇದು. ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದೂ ಹೇಳಿದ್ದಾರೆ.

ಇನ್ನು ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂಜಾನೆ 5ಗಂಟೆ ಹೊತ್ತಿಗೆ ನ್ಯಾಯಾಧೀಶ ಉತ್ತಮ್​ ಆನಂದ್ ರಸ್ತೆಯ ಒಂದು ಬದಿಯಲ್ಲಿ ಜಾಗಿಂಗ್ ಮಾಡುತ್ತ ಹೋಗುತ್ತಿರುತ್ತಾರೆ. ಹಿಂದಿನಿಂದ ಬಂದ ಟೆಂಪೋವಾಹನ ಬೇಕಂತಲೇ ಜಡ್ಜ್​ ಕಡೆಗೆ ಹೋಗಿ ಅವರಿಗೆ ಡಿಕ್ಕಿ ಹೊಡೆದು, ವೇಗವಾಗಿ ಮುಂದೆ ಹೋಗುತ್ತದೆ. ಈ ಸಿಸಿಟಿವಿ ಫೂಟೇಜ್ ಸಿಗುವುದಕ್ಕೂ ಮೊದಲು ನ್ಯಾಯಾಧೀಶರು ಸತ್ತಿದ್ದು ರಸ್ತೆ ಅಪಘಾತದಲ್ಲಿ ಎಂದೇ ಹೇಳಲಾಗಿತ್ತು. ಆದರೆ ಸಿಸಿಟಿವಿ ಫೂಟೇಜ್​ ಈ ಭಾಯನಕ ಸತ್ಯವನ್ನು ಬಿಚ್ಚಿಟ್ಟಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಟೋ ಚಾಲಕನೊಬ್ಬನನ್ನು ಗಿರಿಡಿಹ್​ ಪೊಲೀಸರು ಬಂಧಿಸಿದ್ದಾರೆ. ಹಾಗೇ, ಈತನ ಇಬ್ಬರು ಸಹಾಯಕರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಡಿಕ್ಕಿಯಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಇದರ ಮಾಲೀಕರು ಬೇರೆ..ಕದ್ದು ತಂದು ನ್ಯಾಯಾಧೀಶರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್​ ತನಿಖೆಯಿಂದ ವಿಷಯ ಬೆಳಕಿಗೆ ಬಂದಿದೆ. ನ್ಯಾಯಾಧೀಶ ಉತ್ತಮ್​ ಆನಂದ್​, ಇತ್ತೀಚೆಗೆ ಹೈಪ್ರೊಫೈಲ್ ಕೇಸ್​ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಇದೇ ಸಿಟ್ಟಿಗೆ ಹತ್ಯೆ ಮಾಡಿರಬಹುದೆಂದು ಪೊಲೀಸರು ಹೇಳಿದ್ದಾರೆ.

ಸಿಜೆಐ ಗಮನಕ್ಕೆ ಕೇಸ್ ಜಾರ್ಖಂಡ ಜಡ್ಜ್​ ಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​. ವಿ.ರಮಣ ಗಂಭೀರವಾಗಿ ಪರಿಗಣಿಸಿದ್ದಾರೆ. ಹತ್ಯೆ ಬಗ್ಗೆ ತನಿಖೆ ನಡೆಯುತ್ತಿದೆ. ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶರೊಂದಿಗೆ ಮಾತನಾಡಿದ್ದೇನೆ. ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿಯಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಆರ್​​ಟಿ ನಗರದ ಈ ರಸ್ತೆಯಿಂದ ಮೂವರಿಗೆ ಕರ್ನಾಟಕದ ಮುಖ್ಯಮಂತ್ರಿ ಭಾಗ್ಯ! ಏನಿದು ವಾಸ್ತು ಲೆಕ್ಕಾಚಾರ?

Jharkhand judge death is not by Accident it is murder CCTV Footage viral

Published On - 1:04 pm, Thu, 29 July 21