Kerala Lockdown: ಕೇರಳದಲ್ಲಿ ಕೊರೊನಾ ಮತ್ತೆ ಹೆಚ್ಚಳ; ವಾರಾಂತ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಿದ ರಾಜ್ಯ ಸರ್ಕಾರ

ಕಳೆದವಾರ ಕೇರಳದಲ್ಲಿ ಈದ್​-ಉಲ್​ಗಾಗಿ ಮೂರುದಿನಗಳ ಕೊವಿಡ್ 19 ನಿಯಂತ್ರಣಾ ನಿಯಮಗಳಲ್ಲಿ ನಿರ್ಬಂಧವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿತ್ತು. ಹೀಗೆ ಕೇರಳದಲ್ಲಿ ಲಾಕ್​ಡೌನ್​ನಲ್ಲಿ ನಿರ್ಬಂಧ ಸಡಿಲಿಸಿದ್ದಕ್ಕೆ ಸುಪ್ರೀಂಕೋರ್ಟ್​ ತೀಕ್ಷ್ನವಾಗಿ ಪ್ರತಿಕ್ರಿಯೆ ನೀಡಿತ್ತು.

Kerala Lockdown: ಕೇರಳದಲ್ಲಿ ಕೊರೊನಾ ಮತ್ತೆ ಹೆಚ್ಚಳ; ವಾರಾಂತ್ಯದಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಿದ ರಾಜ್ಯ ಸರ್ಕಾರ
ಸಾಂಕೇತಿಕ ಚಿತ್ರ

ಕೇರಳದಲ್ಲಿ ಕೊವಿಡ್​ 19 (Covid 19 Virus) ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಬೆನ್ನಲ್ಲೇ ಜು.31 ಮತ್ತು ಆಗಸ್ಟ್​ 1 (ಶನಿವಾರ ಹಾಗೂ ಭಾನುವಾರ) ಸಂಪೂರ್ಣ ಲಾಕ್​ಡೌನ್ (Lockdown) ಹೇರಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ. ಈ ಮಧ್ಯೆ ಕೇಂದ್ರ ಸರ್ಕಾರ (Central Government) ಆರು ತಜ್ಞರನ್ನೊಳಗೊಂಡ ತಂಡವನ್ನು ಕೇರಳಕ್ಕೆ ಕಳಿಸಿದೆ. ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರದ ನಿರ್ದೇಶಕರ ನೇತೃತ್ವದ ಈ ತಂಡ, ರಾಜ್ಯದಲ್ಲಿ ಕೊವಿಡ್​ 19 ನಿರ್ವಹಣೆಗೆ ಕೇರಳ ಸರ್ಕಾರ (Kerala)ಕ್ಕೆ ನೆರವು ನೀಡುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ತಿಳಿಸಿದ್ದಾರೆ.

ಕಳೆದವಾರ ಕೇರಳದಲ್ಲಿ ಈದ್​-ಉಲ್​ಗಾಗಿ ಮೂರುದಿನಗಳ ಕೊವಿಡ್ 19 ನಿಯಂತ್ರಣಾ ನಿಯಮಗಳಲ್ಲಿ ನಿರ್ಬಂಧವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿತ್ತು. ಹೀಗೆ ಕೇರಳದಲ್ಲಿ ಲಾಕ್​ಡೌನ್​ನಲ್ಲಿ ನಿರ್ಬಂಧ ಸಡಿಲಿಸಿದ್ದಕ್ಕೆ ಸುಪ್ರೀಂಕೋರ್ಟ್​ ತೀಕ್ಷ್ನವಾಗಿ ಪ್ರತಿಕ್ರಿಯೆ ನೀಡಿತ್ತು. ಹಾಗಂತ ಕೇರಳದ ಲಾಕ್​ಡೌನ್​ ಸಡಿಲಿಕೆ ಅಧಿಸೂಚನೆಯನ್ನೇನೂ ರದ್ದುಗೊಳಿಸಿರಲಿಲ್ಲ. ಅದಾದ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್​ ಭೂಷಣ್​, ಈ ಬಗ್ಗೆ ಕೇರಳ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಲಾಕ್​ಡೌನ್​ ನಿಯಮ ಸಡಿಲಿಕೆ ಮಾಡಿದ್ದು ಸರಿಯಲ್ಲ. ಈ ಕಾರ್ಯಕ್ರಮ ಸೂಪರ್​ ಸ್ಪ್ರೆಡ್ಡರ್​ ಆಗಬಹುದು. ಹಾಗಾಗಿ ಎಂಥ ಸಮಯದಲ್ಲೂ ಕೊವಿಡ್​ 19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಹೇಳಿದ್ದರು.

ಕೇರಳ ಮೊದಲಿನಿಂದಲೂ ಕೊರೊನಾ ನಿಯಂತ್ರಣದಲ್ಲಿ ಅಚ್ಚುಕಟ್ಟಾಗಿತ್ತು. ಹಾಗಾಗಿ ಹೆಚ್ಚಿನ ಪ್ರಕರಣಗಳು ಪತ್ತೆಯಾದರೂ ಇಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಹೊಗಳಿಸಿಕೊಂಡಿತ್ತು. ಆದರೆ ಈಗ ದೇಶದಲ್ಲಿ ಒಂದುದಿನದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸಂಖ್ಯೆಯಲ್ಲಿ ಶೇ.40ರಷ್ಟು ಕೇರಳದ ಪಾಲೇ ಇರುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಸಂಗತಿಯೂ ಹೌದು. ಕೇರಳದಲ್ಲಿ ಬುಧವಾರ 22,056 ಹೊಸ ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಇಲ್ಲೀಗ ಒಟ್ಟಾರೆ ಸೋಂಕಿತರ ಸಂಖ್ಯೆ 33,27,301ಕ್ಕೆ ಏರಿಕೆಯಾಗಿದೆ. ಹಾಗೇ ಬುಧವಾರ ಒಂದೇ ದಿನ 131ಜನ ಕೊವಿಡ್​ 19ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,457ಕ್ಕೆ ಏರಿದೆ.

ಇದನ್ನೂ ಓದಿ: Tokyo Olympics: ಟೊಕಿಯೊ ಒಲಂಪಿಕ್ಸ್ ಉದ್ಘಾಟನೆ ಬಾಹ್ಯಾಕಾಶ ಕೇಂದ್ರದಿಂದ ಹೇಗೆ ಕಾಣುತ್ತಿತ್ತು?; ಚಿತ್ರ ಹಂಚಿಕೊಂಡ ನಾಸಾ

Complete Lockdown to be imposed for two days in Kerala

Read Full Article

Click on your DTH Provider to Add TV9 Kannada