Tokyo Olympics: ಟೊಕಿಯೊ ಒಲಂಪಿಕ್ಸ್ ಉದ್ಘಾಟನೆ ಬಾಹ್ಯಾಕಾಶ ಕೇಂದ್ರದಿಂದ ಹೇಗೆ ಕಾಣುತ್ತಿತ್ತು?; ಚಿತ್ರ ಹಂಚಿಕೊಂಡ ನಾಸಾ

NASA: ಟೊಕಿಯೊ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಹೇಗೆ ಕಾಣುತಿತ್ತು ಎಂಬುದನ್ನು ನಾಸಾ ಚಿತ್ರ ಸಮೇತ ಹಂಚಿಕೊಂಡಿದೆ. ಇದಕ್ಕೆ ಸುಂದರವಾದ ಅಡಿ ಬರಹವನ್ನೂ ನಾಸಾ ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Tokyo Olympics: ಟೊಕಿಯೊ ಒಲಂಪಿಕ್ಸ್ ಉದ್ಘಾಟನೆ ಬಾಹ್ಯಾಕಾಶ ಕೇಂದ್ರದಿಂದ ಹೇಗೆ ಕಾಣುತ್ತಿತ್ತು?; ಚಿತ್ರ ಹಂಚಿಕೊಂಡ ನಾಸಾ
ನಾಸಾ ಹಂಚಿಕೊಂಡಿರುವ ಚಿತ್ರ (ಕೃಪೆ: ನಾಸಾ ಇನ್ಸ್ಟಾಗ್ರಾಂ ಖಾತೆ)
Follow us
TV9 Web
| Updated By: shivaprasad.hs

Updated on: Jul 29, 2021 | 11:47 AM

ಟೊಕಿಯೊ ಒಲಂಪಿಕ್ಸ್(Tokyo Olympics) ಉದ್ಘಾಟನೆಯನ್ನು ಎಲ್ಲರೂ  ಹಲವಾರು ಮಾಧ್ಯಮಗಳ ಮುಖಾಂತರ ಕಣ್ತುಂಬಿಕೊಂಡಿರುತ್ತೀರಿ. ಅಂತೆಯೇ ಅದರ ಹಲವಾರು ದೃಷ್ಟಿಕೋನಗಳೂ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ ನಾಸಾ ಸಾಮಾನ್ಯರಿಗೆ ಯಾರಿಗೂ ನೋಡಲು ಸಾಧ್ಯವಾಗದ ದೃಷ್ಟಿಕೋನದಲ್ಲಿ ಉದ್ಘಾಟನಾ ಸಮಾರಂಭದ ದೃಶ್ಯ ಹೇಗೆ ಕಾಣುತ್ತಿತ್ತು ಎಂಬುದನ್ನು ಹಂಚಿಕೊಂಡಿದ್ದು, ಚಿತ್ರವು ಎಲ್ಲರ ಗಮನ ಸೆಳೆದಿದೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ(ISS) ಅಂತರಿಕ್ಷ ಯಾನಿಗಳು ತೆಗೆದ ಚಿತ್ರವನ್ನು ನಾಸಾ ಹಂಚಿಕೊಂಡಿದ್ದು, ಟೊಕಿಯೊ ಒಲಂಪಿಕ್ಸ್​ ಉದ್ಘಾಟನಾ ಸಂದರ್ಭದ ಮೊದಲ ಸ್ಯಾಟಲೈಟ್ ಚಿತ್ರ ಇದಾಗಿದೆ. ‘ಕತ್ತಲನ್ನು ಬೆಳಕಾಗಿಸಿದ ಒಲಂಪಿಕ್ ಗೇಮ್ಸ್’(The Olympic Games light up the night) ಎಂಬ ಅಡಿ ಬರಹದೊಂದಿಗೆ ನಾಸಾ(NASA) ಇನ್ಸ್ಟಾಗ್ರಾಂನಲ್ಲಿ ಚಿತ್ರವನ್ನು ಹಂಚಿಕೊಂಡಿದೆ. ಎಲ್ಲರ ಕಣ್ಮನ ಸೂರೆಗೊಂಡಿರುವ ಈ ಚಿತ್ರವನ್ನುಗಗನಯಾತ್ರಿ ಶೇನ್ ಕಿಂಬ್ರೋ (Shane Kimbrough) ಸೆರೆ ಹಿಡಿದಿದ್ದು ಎಂದು ನಾಸಾ ತನ್ನ ಪೋಸ್ಟ್​ನಲ್ಲಿ ತಿಳಿಸಿದೆ. ಶೇನ್ ಅವರು ನಾಸಾದ ಸ್ಪೇಸ್ ಎಕ್ಸ್ ಕ್ರ್ಯೂ-2 ಮಿಷನ್​ನ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಅವರು ತೆಗೆದ ಈ ಚಿತ್ರ ವೈರಲ್ ಆಗಿದೆ.

ನಾಸಾ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ:

View this post on Instagram

A post shared by NASA (@nasa)

ಇನ್ಸ್ಟಾಗ್ರಾಂನಲ್ಲಿ ನಾಸಾ ಹಂಚಿಕೊಂಡಿರುವ ಚಿತ್ರಕ್ಕೆ ನಾಸಾ ಸುಂದರ ಒಕ್ಕಣೆಯನ್ನೂ ಬರೆದಿದೆ. ಕತ್ತಲನ್ನು ಬೆಳಕಾಗಿಸಿದ ಟೊಕಿಯೊ ಒಲಂಪಿಕ್ಸ್ ಎಂದು ಬರೆದು, ಉದ್ಘಾಟನೆಯ ದಿನದಂದು ಸೆರೆಹಿಡಿಯಲಾದ ಅದ್ಭುತ ದೃಶ್ಯವಿದು ಎಂದು ಅದು ಹೇಳಿದೆ. ಜೊತೆಗೆ ಅಭಿಮಾನಿಗಳಿಗೆ ನಿಮ್ಮಿಷ್ಟದ ಟೊಕಿಯೊ ಒಲಂಪಿಕ್ಸ್​​ನ ಸಂದರ್ಭ ಏನು ಎಂಬುದನ್ನೂ ನಮಗೂ ತಿಳಿಸಿ ಎಂದು ಅದು ಹೇಳಿದೆ. ಇದಕ್ಕೆ ಅಭಿಮಾನಿಗಳು ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದು, ನಾಸಾದ ಕಾರ್ಯವನ್ನು ಶ್ಲಾಘಿಸುವುದರ ಜೊತೆಗೆ ತಮ್ಮಿಷ್ಟದ ಘಟನೆಯನ್ನು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು…’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?

ಇದನ್ನೂ ಓದಿ: 70 ಮಿಲಿಯನ್ ದಾಟಿದ ಮೋದಿ ಟ್ವಿಟರ್ ಫಾಲೋವರ್ಸ್ ಸಂಖ್ಯೆ; ಒಂದೇ ವರ್ಷದಲ್ಲಿ 10 ಮಿಲಿಯನ್​ ಹೆಚ್ಚಳ..

(NASA shares stunning view of Tokyo Olympic inauguration from International Space Station)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್