Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು…’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?

France: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ಎಲ್ಲರಂತೆ ನಡೆಯಲು ಇಂಜಿನಿಯರ್ ತಂದೆಯೊಬ್ಬ ಹೊಸ ತಂತ್ರಜ್ಞಾನವನ್ನೇ ಅಭಿವೃದ್ಧಿಪಡಿಸಿದ್ದಾನೆ. ಅದೀಗ ಭರ್ಜರಿ ಯಶಸ್ಸನ್ನೂ ಕಂಡಿದ್ದು, ಮಗ ಈಗ ಎಲ್ಲರಂತೆ ಆರಾಮವಾಗಿ ನಡೆದಾಡುತ್ತಾನೆ.

Video: ಕಾಲಿನ ಸ್ವಾಧೀನ ಕಳೆದುಕೊಂಡ ಮಗ ‘ಅಪ್ಪಾ, ನಾನೂ ಎಲ್ಲರಂತೆ ನಡೆಯಬೇಕು...’ ಎಂದಾಗ ಇಂಜಿನಿಯರ್ ತಂದೆ ಮಾಡಿದ್ದೇನು?
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
| Updated By: shivaprasad.hs

Updated on:Jul 29, 2021 | 10:33 AM

ಆತನ ಹೆಸರು ಆಸ್ಕರ್ ಕಾನ್ಸ್ಟಾಂಜಾ(Oscar Constanza). ಆನುವಂಶಿಕ ನರದ ಸಮಸ್ಯೆಯಿಂದಾಗಿ ಅವನಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕಾಲಿನ ನರಗಳಿಗೆ ಮೆದುಳಿನಿಂದ ಸಂದೇಶಗಳು ಬರದ ಕಾರಣ ಆತನ ಕಾಲುಗಳು ದುರ್ಬಲವಾಗಿದ್ದವು. ಇದನ್ನು ಸರಿಪಡಿಸುವುದಕ್ಕಾಗಿ ಆಸ್ಕರ್​ನ ತಂದೆ  ನಿರ್ಧರಿಸಿದ. ಆತ ವೃತ್ತಿಯಿಂದ ಇಂಜಿನಿಯರ್. ಹೆಸರು ಜೀನ್-ಲೂಯಿಸ್ ಕಾನ್ಸ್ಟಾಂಜಾ(Jean-Louis Constanza). ಮಗನ ಕಾಲಿನ ಸಮಸ್ಯೆಯ ಕುರಿತು ಅಧ್ಯಯನ ಮಾಡಿದ ಆತ ನಡೆಯಲು ಸಾಧ್ಯವಾಗಬಹುದಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ. ಇದು ಭರ್ಜರಿ ಯಶಸ್ಸನ್ನೂ ಕಂಡಿದ್ದು, ಆಸ್ಕರ್ ಈಗ ಎಲ್ಲರಂತೆ ಆರಾಮವಾಗಿ ನಡೆಯಬಲ್ಲ.

ಜೀನ್-ಲೂಯಿಸ್ ಕಾಲುಗಳ ಚಲನೆಯನ್ನು ಕಳೆದುಕೊಂಡವರಿಗೆ ನಡೆಯಲು ಸಾಧ್ಯವಾಗಿಸುವ ತಂತ್ರಜ್ಞಾನವನ್ನು ಆವಿಷ್ಕರಿಸುವ ತಂಡದ ಭಾಗವಾಗಿದ್ದರು. ಅಚ್ಚರಿಯ ವಿಷಯವೆಂದರೆ ಈ ತಂಡದಲ್ಲಿದ್ದ ಒಟ್ಟು ಮೂವರಲ್ಲಿ ಇಬ್ಬರ ಹತ್ತಿರದ ಸಂಬಂಧಿಕರು ಕಾಲಿನ ಸ್ವಾಧೀನ ಕಳೆದುಕೊಂಡಿದ್ದರು. ಆದ್ದರಿಂದ ತಂಡದಲ್ಲಿದ್ದವರಿಗೆ ತಮ್ಮ ಗುರಿಯ ಕುರಿತಾದ ಸ್ಪಷ್ಟ ಕಲ್ಪನೆಯಿತ್ತು. ಈ ಆವಿಷ್ಕಾರ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು, ಜೀನ್-ಲೂಯಿಸ್ ಪುತ್ರ ಆಸ್ಕರ್ ಈಗ ಎಲ್ಲರಂತೆ ನಡೆಯಲು ಸಾಧ್ಯವಾಗಿದೆ.

ಈ ಮೊದಲು ತಾನು ನಡೆಯುವುದಕ್ಕೆ ಮತ್ತೊಬ್ಬರ ಸಹಾಯ ಬೇಕಾಗುತ್ತಿತ್ತು. ಈಗ  ನಾನು ಸ್ವತಂತ್ರವಾಗಿರಲು ಸಾಧ್ಯವಾಗಿದೆ ಎನ್ನುವುದನ್ನು ಆಸ್ಕರ್ ಹೆಮ್ಮೆಯಿಂದ ಹೇಳುತ್ತಾರೆ. ಜೀನ್-ಲುಯಿಸ್ ತನ್ನ ಕಾರ್ಯದ ಬಗ್ಗೆ ಮಾತನಾಡುತ್ತಾ ಮಗ ಈ ಹಿಂದೆ ಕೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ. “ಅಪ್ಪಾ, ನೀನು ರೊಬಾಟಿಕ್ ಇಂಜಿನಿಯರ್ ಅಲ್ಲವೇ? ನನಗೆ ನಡೆಯಲು ಸಾಧ್ಯವಾಗುವ ರೊಬೊಟ್ ಒಂದನ್ನು ನೀನು ಕಂಡುಹಿಡಿಯುತ್ತೀಯಾ?” ಎಂದು ಆಸ್ಕರ್ ತಂದೆ ಜೀನ್​ಗೆ ಕೇಳಿದ್ದನಂತೆ. ಈಗ ಅದನ್ನು ಸಾಧ್ಯವಾಗಿಸಿದ್ದಕ್ಕೆ ಜೀನ್​ಗೆ ಹೆಮ್ಮೆಯಿದೆ. ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಯಾರೂ ವೀಲ್ ಚೇರ್ ಮೇಲೆ ಕೂರುವ ಪ್ರಸಂಗ ಬರುವುದೇ ಇಲ್ಲ ಎನ್ನುತ್ತಾರೆ ಜೀನ್. ಈ ತಂತ್ರಜ್ಞಾನ ಭವಿಷ್ಯದಲ್ಲಿ ಬಹಳ ಒಳ್ಳೆಯ ಪರಿಣಾಮ ಬೀರಲಿದೆ ಎಂಬುದು ಅವರ ಆತ್ಮವಿಶ್ವಾಸದ ನುಡಿ.

ಈ ತಂತ್ರಜ್ಞಾನವನ್ನು ವಾಂಡರ್​ಕ್ರಾಫ್ಟ್ ಕಂಪನಿ ಅಧಿಕೃತವಾಗಿ ಎಲ್ಲರಿಗೂ ಪರಿಚಯಿಸಿದ್ದು, ಆಸ್ಕರ್ ಸ್ವಯಂಚಾಲಿತ ಸಾಧನವನ್ನು ಧರಿಸಿ ನಡೆದಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ. ವಿಡಿಯೊದಲ್ಲಿ ಆಸ್ಕರ್ ತಾನಾಗಿಯೇ ಯಂತ್ರವನ್ನು ಚಾಲನೆ ಮಾಡಿಕೊಂಡು ದೈನಂದಿನ ಕಾರ್ಯಗಳನ್ನು ಮಾಡುತ್ತಿರುವುದನ್ನು ತೋರಿಸಲಾಗಿದೆ. ಅಲ್ಲದೇ ಅಡುಗೆ ಮನೆಯಲ್ಲಿ ಆರಾಮವಾಗಿ ಬಗ್ಗಿ ಪಾತ್ರೆಗಳನ್ನು ತೆಗೆದು, ಅಡುಗೆ ಮಾಡುತ್ತಿರುವುದನ್ನೂ ತೋರಿಸಲಾಗಿದ್ದು, ನಿಲ್ಲಲೂ ಸಾಧ್ಯವಾಗದ ವ್ಯಕ್ತಿ ನಡೆದಾಡುವುದಲ್ಲದೇ ಬಗ್ಗಿ ಕೆಲಸ ಮಾಡಲು ಸಾಧ್ಯವಾಗಿದೆ.

ವಾಂಡರ್​ಕ್ರಾಫ್ಟ್ ಹಂಚಿಕೊಂಡ ವಿಡಿಯೊ ಇಲ್ಲಿದೆ:

ಹತ್ತು ವರ್ಷಗಳ ಹಿಂದೆ ಸೈಕಲ್​ನಲ್ಲಿ ಪ್ರಯಾಣಿಸುವಾಗ ಅಪಘಾತದಲ್ಲಿ ಕಾಳುಗಳನ್ನು ಕಳೆದುಕೊಂಡ ಕೆವಿನ್ ಪೈಟ್ ಈ ತಂತ್ರಜ್ಞಾನದ ಕುರಿತು ಸಂತಸ ವ್ಯಕ್ತಪಡಿಸಿದ್ದು, “ನನ್ನಂತಹ ಹಲವಾರು ಜನರಿಗೆ ಇದು ಮೊದಲಿನಂತೆ ನಡೆಯಲು ಸಹಾಯ ಮಾಡಲಿದೆ ಎಂಬುದೇ ನನಗೆ ಅತ್ಯಂತ ಖುಷಿಯ ವಿಚಾರ” ಎಂದಿದ್ದಾರೆ. ವರದಿಗಳ ಪ್ರಕಾರ ಈ ತಂತ್ರಜ್ಞಾನವನ್ನು ವಾಂಡರ್​ಕ್ರಾಫ್ಟ್ ಮಾರುಕಟ್ಟೆಗೆ ಪರಿಚಯಿಸಿದ್ದು, ಈಗಾಗಲೇ ಹಲವು ಆಸ್ಪತ್ರೆಗಳಿಗೆ ಇದನ್ನು ತಲುಪಿಸಲಾಗಿದೆ. ಅಂದಾಜು 1,76,000 ಅಮೇರಿಕನ್ ಡಾಲರ್ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಸದ್ಯ ಆಸ್ಪತ್ರೆಯ ಉಪಯೋಗಕ್ಕೆ ಮಾತ್ರ ಇದನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: Gold Rate Today: ಇಂದು ಚಿನ್ನದ ದರ ಅಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ

(Father build exoskeleton robot for his son to walk normally)

Published On - 10:32 am, Thu, 29 July 21

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು