Viral Video: ಮನುಷ್ಯರಂತೆಯೇ ತಾಯಿ ಮಂಗ ಮರಿಗೆ ಸ್ನಾನ ಮಾಡಿಸುತ್ತಿದೆ! ಮರಿ ಮಂಗನ ರಗಳೆಯ ವಿಡಿಯೋ ವೈರಲ್
ತಾಯಿ ಮಂಗ ಕೊಳದಲ್ಲಿ ಸ್ನಾನ ಮಾಡಿಸಲು ಮರಿಯನನ್ನು ಕೊಳದೊಳಗೆ ಬಿಡುತ್ತಿದೆ. ಆದರೆ ಮರಿ ತಾಯಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದೆ.
ಸೋಷಿಯಲ್ ಮೀಡಿಯಾಗಳಲ್ಲಿ(Social Media) ಪ್ರಾಣಿಗಳ ತಮಾಷೆಗಳ ವಿಡಿಯೋ ಹರಿದಾಡುತ್ತಲೇ ಇರುತ್ತವೆ. ಅದರಲ್ಲಿಯೂ ಮಂಗಗಳ ಚೇಷ್ಟೆಯ ವಿಡಿಯೋ ಮನಸ್ಸು ಗೆಲ್ಲುವುದಂತೂ ನಿಜ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ಕೂಡಾ ಅಂಥದ್ದೇ. ತಾಯಿ ಮಂಗ(Monkey) ತನ್ನ ಮರಿರನ್ನು ಕೊಳದೊಳಗೆ ಇಳಿಯಲು ಹೇಳುತ್ತಿದೆ. ಆದರೆ ಮರಿ ಮಾತ್ರ ತಾಯಿಯನ್ನು ಬಿಟ್ಟು ಕೆಳಗಿಳಿಯುತ್ತಲೇ ಇಲ್ಲ. ತಾಯಿ ಮಂಗ, ಮರಿಗೆ ಸ್ನಾನ ಮಾಡಿಸಲು ಪ್ರಯತ್ನಿಸುತ್ತಿದ್ದರೂ ಮರಿ ತಪ್ಪಿಸಿಕೊಳ್ಳುತ್ತಿದೆ. ಈ ತಮಾಷೆಯ ವಿಡಿಯೋ ಇದೀಗ ಫುಲ್ ವೈರಲ್(Viral Video) ಆಗಿದೆ.
ಕೊಳದಲ್ಲಿ ಸ್ನಾನ ಮಾಡಿಸಲು ಮರಿಯನನ್ನು ಕೊಳದೊಳಗೆ ಬಿಡುತ್ತಿದೆ. ಆದರೆ ಮರಿ ತಾಯಿಯನ್ನು ಗಟ್ಟಿಯಾಗಿ ತಬ್ಬಿಕೊಂಡಿದೆ. ನೀರಿನಲ್ಲಿ ಇಳಿಸಿದ ಹಾಗೆಯೂ ಮೇಲೆದ್ದು ಆಚೆ_ಈಚೆಗೆ ತಿರುಗಾಡುತ್ತಿದೆ. ತಾಯಿ ಮಕ್ಕಳ ನಡುವಿನ ಈ ತಮಾಷೆಯ ವಿಡಿಯೋ ಎಲ್ಲರಿಗೂ ಇಷ್ಟವಾಗುವಂತಿದೆ.
This is the way mother teaches their kid that no one else can take a bath for you… pic.twitter.com/bMko4N4hXk
— Susanta Nanda IFS (@susantananda3) July 27, 2021
ತಾಯಿ, ಮಗುವಿಗೆ ಸ್ನಾನ ಮಾಡುವುದನ್ನು ಹೇಳಿಕೊಡುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಐಎಫ್ಎಸ್ ಅಧಿಕಾರಿ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ತಮಾಷೆಯ ವಿಡಿಯೋ ನೋಡಿದ ನೆಟ್ಟಿಗರು ನಗುವ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ.
ಅದ್ಭುತ ಸರ್… ಪ್ರಕೃತಿಯ ಮೇಲಿನ ನಿಮ್ಮ ಪ್ರೀತಿ ನಮಗೂ ಸ್ಪೂರ್ತಿ ತುಂಬುತ್ತದೆ. ವನ್ಯಜೀವಿ ಸಂರಕ್ಷಕನಾಗಲು ನಾನು ನಿಮ್ಮ ಹಾದಿಯಲ್ಲೆಯೇ ನಡೆಯುತ್ತೇನೆ ಎಂದು ಓರ್ವ ಟ್ವಿಟರ್ ಬಳಕೆದಾರರು ಅಧಿಕಾರಿಗೆ ಹೇಳಿದ್ದಾರೆ. ಭಾರತೀಯರು ಮಗುವನ್ನು ಕಾಲುಗಳಲ್ಲಿ ಮಲಗಿಸಿಕೊಂಡು ಸ್ನಾನ ಮಾಡಿಸುತ್ತಾರೆ ಎಂದು ಇನ್ನೋರ್ವರು ಹೇಳಿದ್ದಾರೆ. ಒಟ್ಟಿನಲ್ಲಿ ತಾಯಿ ಮಂಗ ಮತ್ತು ಮರಿಯ ವಿಡಿಯೋ ಇದೀಗ ನೆಟ್ಟಿಗರಿಗೆ ಖುಷಿ ನೀಡಿದೆ.
mother is the first teacher of their children
— ଗୋଲି ମାଷ୍ଟ୍ରେ (Goli Mastre) (@GoliMastre) July 27, 2021
ಇದನ್ನೂ ಓದಿ:
Viral Video: ಟೋಲ್ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಬಿಜೆಪಿ ಶಾಸಕ; ವಿಡಿಯೋ ವೈರಲ್
Viral Video: ಕೆಸರಲ್ಲಿ ತುಂಟಾಟವಾಡುತ್ತಿರುವ ಈ ಆನೆಮರಿಯನ್ನು ನೋಡಿದರೆ ಮುದ್ದಾಡಬೇಕೆನಿಸೋದು ಗ್ಯಾರಂಟಿ!
Published On - 1:59 pm, Wed, 28 July 21