Viral Video: ಟೋಲ್ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಬಿಜೆಪಿ ಶಾಸಕ; ವಿಡಿಯೋ ವೈರಲ್

BJP MLA Pooran Prakash: ಉತ್ತರ ಪ್ರದೇಶದ ಬಿಜೆಪಿ ಶಾಸಕ ಪೂರ್ಣ ಪ್ರಕಾಶ್​ ಟೋಲ್ ಪ್ಲಾಜಾದ ಸಿಬ್ಬಂದಿಯ ಕಪಾಲಕ್ಕೆ ಹೊಡೆದಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು?

Viral Video: ಟೋಲ್ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ ಬಿಜೆಪಿ ಶಾಸಕ; ವಿಡಿಯೋ ವೈರಲ್
ಮಥುರಾದ ಟೋಲ್ ಪ್ಲಾಜಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 27, 2021 | 8:16 PM

ಮಥುರಾ: ಅಧಿಕಾರ ಬಂದಕೂಡಲೆ ಕೆಲವರು ಸರ್ವಾಧಿಕಾರಿಗಳಂತೆ ವರ್ತಿಸತೊಡಗುತ್ತಾರೆ. ಉತ್ತರ ಪ್ರದೇಶದ ಮಥುರಾದ ಬಲ್ಡಿಯೋ (Baldeo Constituency) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣ ಪ್ರಕಾಶ್​ (Pooran Prakash) ಟೋಲ್ ಪ್ಲಾಜಾದ (Toll Plaza) ಸಿಬ್ಬಂದಿಯ ಕಪಾಲಕ್ಕೆ ಹೊಡೆದಿರುವ ವಿಡಿಯೋವೊಂದು ಭಾರೀ ವೈರಲ್ (Video Viral) ಆಗಿದೆ. ಅಷ್ಟಕ್ಕೂ ಕೆನ್ನೆಗೆ ಹೊಡೆಸಿಕೊಳ್ಳುವಂತಹ ತಪ್ಪು ಆತ ಮಾಡಿದ್ದಾದರೂ ಏನು? ಇಲ್ಲಿದೆ ಮಾಹಿತಿ…

ಕಾರಿನಲ್ಲಿ ಬೇರೆ ಊರಿಗೆ ಹೋಗುತ್ತಿದ್ದ ಬಿಜೆಪಿ ಶಾಸಕ ಪೂರ್ಣ ಪ್ರಕಾಶ್ ಅವರ ಕಾರೆಂದು ತಿಳಿಯದ ಟೋಲ್ ಪ್ಲಾಜಾದ ಸಿಬ್ಬಂದಿ ಬೂಮ್ ಬ್ಯಾರಿಯರ್ ಅನ್ನು ಕ್ಲೋಸ್ ಮಾಡಿದ್ದಾನೆ. ಮಾಮೂಲಿ ಜನರಿಗೆ ಟೋಲ್ ಕಟ್ಟಿದ ಬಳಿಕ ಬ್ಯಾರಿಯರ್ ಓಪನ್ ಆಗುತ್ತದೆ. ಆದರೆ, ತಕ್ಷಣ ಶಾಸಕರ ಕಾರಿನ ಮುಂದಿದ್ದ ಬೋರ್ಡ್ ನೋಡಿದ ಆತ ಬ್ಯಾರಿಯರ್ ಓಪನ್ ಮಾಡಿದ್ದಾನೆ. ಇದರಿಂದ ಕೆಲವು ಸೆಕೆಂಡುಗಳ ಕಾಲ ಪೂರ್ಣ ಪ್ರಕಾಶ್ ಅವರ ಕಾರು ಟೋಲ್​ನಲ್ಲಿ ನಿಂತಿದೆ. ತಕ್ಷಣ ಎಚ್ಚೆತ್ತುಕೊಂಡು ಟೋಲ್​ನ ಗೇಟ್ ಓಪನ್ ಮಾಡಿದರೂ ಸುಮ್ಮನಾಗದ ಶಾಸಕ ಪೂರ್ಣ ಪ್ರಕಾಶ್ ಕಾರಿನಿಂದ ಕೆಳಗಿಳಿದು ಬಂದು ಟೋಲ್ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದಾರೆ.

ಈ ದೃಶ್ಯ ಟೋಲ್ ಪ್ಲಾಜಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 14ನೇ ಲೇನ್​ನಲ್ಲಿ ಸಾಗುತ್ತಿದ್ದ ಶಾಸಕರ ಕಾರಿಗೆ ಅಡ್ಡಲಾಗಿ ಟೋಲ್​ನ ಬ್ಯಾರಿಯರ್ ಹಾಕಲಾಗಿದೆ. ಅದಾದ ಕೆಲವೇ ಸೆಕೆಂಡಿನಲ್ಲಿ ಆ ಗೇಟನ್ನು ಓಪನ್ ಮಾಡಲಾಗಿದೆ. ಅಷ್ಟರೊಳಗೆ ಕೋಪಗೊಂಡ ಶಾಸಕ ಆ ಗೇಟ್ ಪಕ್ಕದಲ್ಲಿ ನಿಂತಿದ್ದ ಹುಡುಗನಿಗೆ ಕಪಾಲಮೋಕ್ಷ ಮಾಡಿದ್ದಾರೆ.

ಶಾಸಕ ಪೂರ್ಣ ಪ್ರಕಾಶ್ ಈ ರೀತಿ ಟೋಲ್ ಸಿಬ್ಬಂದಿಯ ಮೇಲೆ ಕೈ ಮಾಡಿರುವುದಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಗೊತ್ತಿಲ್ಲದೆ ಮಾಡಿದ ತಪ್ಪನ್ನು ಕ್ಷಣಮಾತ್ರದಲ್ಲಿ ತಿದ್ದಿಕೊಂಡರೂ ದರ್ಪ ತೋರಿರುವ ಶಾಸಕರ ವಿರುದ್ಧ ಹಲವು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೂ ಮೊದಲು 2018ರಲ್ಲಿ ಕೂಡ ಇದೇ ಟೋಲ್ ಪ್ಲಾಜಾ ಸಿಬ್ಬಂದಿಯ ಕೆನ್ನೆಗೆ ಹೊಡೆದು ಅವರು ಸುದ್ದಿಯಾಗಿದ್ದರು.

ಇದನ್ನೂ ಓದಿ: Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

(Viral Video: BJP MLA Pooran Prakash slaps toll plaza worker in Mathura Watch CCTV Trending Video)

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ