ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಇನ್ನು ದೆಹಲಿ ಪೊಲೀಸ ಕಮೀಶನರ್, ಗೃಹ ಇಲಾಖೆಯಿಂದ ಆದೇಶ

ಅಪರಾಧಗಳ ತನಿಖೆಯಲ್ಲಿ ನಿಸ್ಸೀಮರೆನಿಸಿಕೊಂಡಿರುವ ಅಸ್ಥಾನಾ ಅವರು ದಶಕದ ಹಿಂದೆ ಗುಜರಾತಿನಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸದೆಬಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಬಿಎಸ್​ಎಫ್ ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಇನ್ನು ದೆಹಲಿ ಪೊಲೀಸ ಕಮೀಶನರ್, ಗೃಹ ಇಲಾಖೆಯಿಂದ ಆದೇಶ
ರಾಕೇಶ್ ಅಸ್ಥಾನಾ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 28, 2021 | 1:12 AM

ನವದೆಹಲಿ: ಗಡಿ ಭದ್ರತಾ ದಳದ (ಬಿ ಎಸ್ ಎಫ್) ಮಹಾ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ದೆಹಲಿ ಪೋಲಿಸ್ ಅಯುಕ್ತರಾಗಿ ನೇಮಕ ಮಾಡಿ ನರೇಂದ್ರ ಮೋದಿ ಅವರ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದೆ. ಸೇವೆಯಿಂದ ನಿವೃತ್ತರಾಗಲು ಕೇವಲ ಮೂರು ದಿನ ಬಾಕಿಯಿರುವಾಗ 1984ರ ಬ್ಯಾಚ್​ನ ಐಪಿಎಸ್​ ಅಧಿಕಾರಿ (ಗುಜರಾತ್ ಕೇಡರ್) ಅಸ್ಥಾನಾ ಅವರನ್ನು ದೆಹಲಿ ಪೊಲೀಸ್ ಕಮೀಶನರ್ ಆಗಿ ಸರ್ಕಾರ ನೇಮಕ ಮಾಡಿದೆ.

‘ಅಸ್ಥಾನಾ ಅವರನ್ನು ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿರುವ ಹಿನ್ನೆಲೆಯಲ್ಲಿ, ಒಬ್ಬ ಹೊಸ ಮಹಾ ನಿರ್ದೇಶಕರ ನೇಮಕ ಇಲ್ಲವೇ ಈ ಕಚೇರಿಯಿಂದ ಮುಂದಿನ ಆದೇಶ ಹೊರಡಿಸುವವರೆಗೆ 1984 ರ ಬ್ಯಾಚ್​ನ ಐಪಿಎಸ್ ಅಧಿಕಾರಿ (ಹರಿಯಾಣ ಕೇಡರ್) ಮತ್ತು ಇಂಡೊ-ಟಿಬೆಟನ್ ಬಾರ್ಡರ್ ಪೊಲೀಸ್ ಮಹಾ ನಿರ್ದೇಶಕ ಎಸ್​ ಎಸ್​ ದೇಸ್ವಾಲ್ ಅವರು ಹೆಚ್ಚುವರಿಯಾಗಿ ಬಿ ಎಸ್ ಎಫ್ ಮಹಾ ನಿರ್ದೇಶಕನ ಜವಾಬ್ದಾರಿಯನ್ನು ನಿರ್ವಹಿಸಲು ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ,’ ಎಂದು ಕೇಂದ್ರ ಗೃಹ ಖಾತೆ ಸಚಿವಾಲಯದಿಂದ ಹೊರಬಿದ್ದಿರುವ ಆದೇಶದಲ್ಲಿ ತಿಳಿಸಲಾಗಿದೆ.

ವೃತ್ತಿಪರ ದಕ್ಷತೆ ಮತ್ತು ಸಮಗ್ರತೆಗೆ ಹೆಸರಾಗಿರುವ ಅಸ್ಥಾನಾ ಅವರು ಹಿಂದೆ ಕೇಂದ್ರೀಯ ತನಿಖಾ ದಳ (ಸಿಬಿಐ) ನಿರ್ದೇಶಕರಾಗಿದ್ದ ಅಲೋಕ್ ವರ್ಮ ಅವರೊಂದಿಗೆ ಉನ್ನತ ಪ್ರೊಫೈಲ್ ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಒಬ್ಬ ವಿಶೇಷ ಅಧಿಕಾರಿಯಾಗಿ ಕೆಲಸ ಮಾಡುವಾಗ ಇಬ್ಬರ ನಡುವೆ ತಗಾದೆ ಶುರುವಾಗಿ ವಿವಾದಕ್ಕೀಡಾಗಿದ್ದರು. ಜನೆವರಿ 10, 2019ರಂದು ಅಲೋಕ್ ವರ್ಮ ಅವರೊಂದಿಗೆ ಸಿಬಿಐನಿಂದ ಹೊರಬಿದ್ದ ಅಸ್ಥಾನಾ ಅವರನ್ನು ನಾಗರಿಕ ವಿಮಾನಯಾನ ಭದ್ರತೆ ಮತ್ತು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​ಸಿಬಿ) ಮಹಾ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು.

ಜೂನ್ 30 ರಂದು ದೆಹಲಿ ಪೊಲೀಸ್ ಕಮೀಶನರ್ ಆಗಿದ್ದ ಎಸ್​ ಎನ್ ಶ್ರೀವಾಸ್ತವ ಅವರು ನಿವೃತ್ತರಾದ ನಂತರ ದೆಹಲಿ ಪೊಲೀಸ್​ನ ಹೆಚ್ಚುವರಿ ಹೊಣೆಗಾರಿಕೆಯನ್ನು ಬಾಲಾಜಿ ಶ್ರೀವಾಸ್ತವ ಅವರಿಗೆ ವಹಿಸಲಾಗಿದೆಯಾದರೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್​ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಅದನ್ನು ಮತ್ತಷ್ಟು ವೃತ್ತಿಪರ ಮತ್ತು ಸ್ಪಂದನಾಶೀಲವನ್ನಾಗಿಸುವ ಇಚ್ಛೆ ಇಟ್ಟುಕೊಂಡಿರುವುರಿಂದ ಅಸ್ಥಾನಾ ಅವರನ್ನು ನೇಮಕ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಪರಾಧಗಳ ತನಿಖೆಯಲ್ಲಿ ನಿಸ್ಸೀಮರೆನಿಸಿಕೊಂಡಿರುವ ಅಸ್ಥಾನಾ ಅವರು ದಶಕದ ಹಿಂದೆ ಗುಜರಾತಿನಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆಯನ್ನು ಸದೆಬಡಿಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಿಷಿ ಶುಕ್ಲಾ ಅವರ ನಂತರ ಸಿಬಿಐ ನಿರ್ದೇಶಕನ ಹುದ್ದೆಗೆ ಅಸ್ಥಾನಾ ನೇಮಕಗೊಳ್ಳವುದು ಖಚಿತವೆನಿಸಿದ್ದರೂ ಸಮಿತಿಯ ಸದಸ್ಯರು ಎತ್ತಿದ್ದ ತಾಂತ್ರಿಕ ಮತ್ತು ಕಾನೂನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಅದನ್ನು ತಡೆಯಲಾಗಿತ್ತು.

ಎನ್​ಸಿಬಿಯ ಮಹಾ ನಿರ್ದೇಶಕರಾಗಿದ್ದಾಗ ಅನೇಕ ಕಡೆಗಳಲ್ಲಿ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡ ಆಸ್ಥಾನ ಅವರು ಮುಂಬೈ ಸಿನಿಮಾ ಉದ್ಯಮಕ್ಕೆ ಸರಬರಾಜಾಗುತ್ತಿದ್ದ ಕೋಕೇನ್ ಮತ್ತು ಸಿಂಥೆಟಿಕ್ ಡ್ರಗ್​ಗಳ ತನಿಖೆ ನಡೆಸಲು ಆದೇಶ ನೀಡಿದ್ದರು. ಬಿಎಸ್​ಎಫ್ ಡಿಜಿ ಆಗಿಯೂ ಅವರು ಬಾರತದ ಗಡಿಗಳನ್ನು ಹೆಚ್ಚು ಸುಭದ್ರಗೊಳಿಸಿದರಲ್ಲದೆ ಪಾಕಿಸ್ತಾನ ನೆಲೆಯ ಉ್ರಗಾಮಿಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್​ಗಳಲ್ಲಿ ಬಳಸುತ್ತಿದ್ದ ಸುರಂಗ ಮಾರ್ಗಗಳನ್ನು ಪತ್ತೆ ಮಾಡಿದರು.

ಇದನ್ನೂ ಓದಿ: ಮುಂಗಾರು ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ಸಂಸತ್ ಬದಲು ಬೇರೆ ಸ್ಥಳ ಆಯ್ಕೆ ಮಾಡಿ: ರೈತರಿಗೆ ದೆಹಲಿ ಪೊಲೀಸ್ ಸಲಹೆ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ