AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಇಂದು ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆಯಿಲ್ಲ! ಸತತ 11 ದಿನಗಳಿಂದ ಇಂಧನ ದರ ಸ್ಥಿರ

Petrol Rate Today: ಇಂಧನ ದರ ಏರಿಕೆ ಕಂಡಿಲ್ಲ ಎಂಬುದು ಸಮಾಧಾನದ ವಿಷಯವಾದರೆ, ಇಳಿಕೆಯ ಹಾದಿ ಹಿಡಿಯುವುದು ಯಾವಾಗ ಎಂಬುದು ಗ್ರಾಹಕರ ಪ್ರಶ್ನೆ.

Petrol Price Today: ಇಂದು ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆಯಿಲ್ಲ! ಸತತ 11 ದಿನಗಳಿಂದ ಇಂಧನ ದರ ಸ್ಥಿರ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 28, 2021 | 8:26 AM

Share

Petrol Diesel Rate Today | ದೆಹಲಿ: ಸತತವಾಗಿ ಹನ್ನೊಂದನೇ ದಿನವೂ ಸಹ ಪೆಟ್ರೋಲ್(Petrol Price), ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಇಂದು (ಜುಲೈ 28, ಬುಧವಾರ) ಇಂಧನ ದರದಲ್ಲಿ(Fuel Price) ಯಾವುದೇ ಬದಲಾವಣೆಗಳಿಲ್ಲ. ಜುಲೈ ತಿಂಗಳಲ್ಲಿ ಎರಡು ಬಾರಿ ಡೀಸೆಲ್ ದರ(Diesel Price) ಇಳಿಕೆ ಕಂಡಿದ್ದರಿಂದ ಇನ್ನೇನು ದಿನ ಕಳೆದಂತೆ ಇಂಧನ ದರ ಇಳಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ವಾಹನ ಸವಾರರಿದ್ದರು. ಆದರೆ ಇಂಧನ ದರ ಏರಿಕೆ ಕಂಡಿಲ್ಲ ಎಂಬುದು ಸಮಾಧಾನದ ವಿಷಯವಾದರೆ, ಇಳಿಕೆಯ ಹಾದಿ ಹಿಡಿಯುವುದು ಯಾವಾಗ ಎಂಬುದು ಗ್ರಾಹಕರ ಪ್ರಶ್ನೆ.

ಮೇ ತಿಂಗಳಿನಿಂದ ಇಂಧನ ದರ ಹೆಚ್ಚುತ್ತಲೇ ಇದೆ. 42 ದಿನಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 11.32 ರೂಪಾಯಿ ಏರಿಕೆ ಮಾಡಲಾಗಿದೆ. 19 ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ, ಜಮ್ಮು ಮತ್ತು ಕಾಶ್ಮೀರ, ಲಡಾಕ್ ಈ ಪಟ್ಟಿಯಲ್ಲಿ ಸೇರಿವೆ.

ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿಯೂ ಸಹ ಲೀಟರ್ ಪೆಟ್ರೋಲ್ ದರ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ಈ ಎಲ್ಲಾ ಪ್ರಮುಖ ಮಹಾ ನಗರಗಳಲ್ಲಿ ಹನ್ನೊಂದು ದಿನಗಳ ಕಾಲ ಇಣಧನ ದರದಲ್ಲಿ ಹೆಚ್ಚಳ ಕಂಡು ಬಂದಿಲ್ಲ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 101.84 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.87 ರೂಪಾಯಿ ಇದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.49 ರೂ. ಹಾಗೂ ಲೀಟರ್ ಡೀಸೆಲ್ ದರ 94.39 ರೂ. ಇದೆ.

ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 102.08 ರೂ. ಹಾಗೂ ಲೀಟರ್ ಡೀಸೆಲ್ ದರ 93.02 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್​ಗೆ 107.83 ರೂ. ಹಾಗೂ ಲೀಟರ್ ಡೀಸೆಲ್​ಗೆ 97.45 ರೂಪಾಯಿ ಇದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.25 ರೂ. ಹಾಗೂ ಲೀಟರ್ ಡೀಸೆಲ್ ದರ 95.26 ರೂ. ಇದೆ. ಭೋಪಾಲ್​ನಲ್ಲಿ ಲೀಟರ್ ಪೆಟ್ರೋಲ್ ದರ 110.20 ರೂ. ಹಾಗೂ ಲೀಟರ್ ಡೀಸೆಲ್ ದರ 98. 67 ರೂಪಾಯಿ ಇದೆ. ಅದೇ ರೀತಿ ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 98.92 ರೂ. ಹಾಗೂ ಲೀಟರ್ ಡೀಸೆಲ್ ದರ 90.26 ರೂಪಾಯಿ ಇದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್​ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್​ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 8:25 am, Wed, 28 July 21

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ