AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತಿಶ್ರೀಮಂತನ ಅರ್ಧದಷ್ಟು ಸಂಪತ್ತು ಕರಗಿದರೂ ಆತನೇ ನಂಬರ್ ಒನ್

Elon Musk asset value down by almost half: ಇಲಾನ್ ಮಸ್ಕ್ ಅವರ ಒಟ್ಟಾರೆ ಶೇರು ಸಂಪತ್ತಿನ ಮೌಲ್ಯ ಗಣನೀಯವಾಗಿ ಕುಸಿದಿದೆ. ವಿಶ್ವದ ಮೊದಲ ಟ್ರಿಲಿಯನೇರ್ ಎನಿಸಿದ್ದ ಇಲಾನ್ ಮಸ್ಕ್ ಅವರ ಶ್ರೀಮಂತಿಕೆ ಅರ್ಧದಷ್ಟು ಕಡಿಮೆಯಾಗಿದೆ. 1.33 ಟ್ರಿಲಿಯನ್ ಡಾಲರ್ ಇದ್ದ ಅವರ ಆಸ್ತಿ ಮೌಲ್ಯ ಈಗ 684 ಬಿಲಿಯನ್ ಡಾಲರ್​ಗೆ ಇಳಿದಿದೆ. ಇದಕ್ಕೆ ಏನು ಕಾರಣ?

ವಿಶ್ವದ ಅತಿಶ್ರೀಮಂತನ ಅರ್ಧದಷ್ಟು ಸಂಪತ್ತು ಕರಗಿದರೂ ಆತನೇ ನಂಬರ್ ಒನ್
ಇಲಾನ್ ಮಸ್ಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2026 | 7:09 PM

Share

ವಾಷಿಂಗ್ಟನ್, ಆಗಸ್ಟ್ 1: ವಿಶ್ವದ ಮೊದಲ ಮತ್ತು ಏಕೈಕ ಟ್ರಿಲಿಯನೇರ್ ಎನಿಸಿದ್​ದ ಇಲಾನ್ ಮಸ್ಕ್ (Elon Musk) ಅವರ ಗರಿಷ್ಠ ಸಂಪತ್ತು ಅರ್ಧದಷ್ಟು ನಶಿಸಿದೆ. ಕಳೆದುಕೊಂಡಿದ್ದಾರೆ. ಸ್ಪೇಸ್‌ಎಕ್ಸ್ (SpaceX) ಶೇರುಗಳ ಭಾರಿ ಕುಸಿತದಿಂದಾಗಿ ಇಲಾನ್ ಮಸ್ಕ್ ತಮ್ಮ ಸಂಪತ್ತು ಗಣನೀಯವಾಗಿ ಕರಗಿದೆ. ಆದರೂ ಕೂಡ ಅವರು ಎರಡನೇ ಅತಿ ಶ್ರೀಮಂತನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತಿಕೆ ಹೊಂದಿದ್ದಾರೆ.

ಜೂನ್ 16 ರಂದು ಇಲಾನ್ ಮಸ್ಕ್ ಅವರ ಆಸ್ತಿ ಗರಿಷ್ಠ $1.33 ಟ್ರಿಲಿಯನ್ ಮುಟ್ಟಿತ್ತು. ಸ್ಪೇಸ್ ಎಕ್ಸ್ ಐಪಿಒ ಭರ್ಜರಿ ಯಶಸ್ಸು ಕಂಡು ಶೇರುಬೆಲೆ ಸಖತ್ ಏರಿದಾಗ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎನಿಸಿದ್ದರು. ಆದರೆ ಸ್ಪೇಸ್‌ಎಕ್ಸ್ ಶೇರುಗಳ ಕುಸಿತದಿಂದಾಗಿ ಪ್ರಸ್ತುತ ಅವರ ನಿವ್ವಳ ಆಸ್ತಿ ಮೌಲ್ಯ $684 ಬಿಲಿಯನ್‌ಗೆ ಕುಸಿದಿದೆ. ಅಂದರೆ, ಸುಮಾರು $600 ಬಿಲಿಯನ್‌ಗಿಂತಲೂ ಹೆಚ್ಚಿನ ನಷ್ಟ ಕಂಡಿದ್ದಾರೆ.

ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು?

ಸ್ಪೇಸ್‌ಎಕ್ಸ್ ಷೇರು ಕುಸಿತ ಯಾಕೆ?

ಸಾರ್ವಜನಿಕ ಶೇರು ಮಾರುಕಟ್ಟೆಗೆ (IPO) ಬಂದ ನಂತರ ಸ್ಪೇಸ್‌ಎಕ್ಸ್ ಷೇರಿನ ಬೆಲೆ ಸಾರ್ವಕಾಲಿಕ ಗರಿಷ್ಠ $201.80 ತಲುಪಿತ್ತು. ಆದಾಗ್ಯೂ, ಅಲ್ಲಿಂದ ಅದರ ಬೆಲೆ ಸುಮಾರು 46% ರಷ್ಟು ಕುಸಿದು ಪ್ರಸ್ತುತ $108.37 ತಲುಪಿದೆ. ಐಪಿಒದಲ್ಲಿ ಶೇರು ಪಡೆದಿದ್ದವರು ಪ್ರಾಫಿಟ್ ಬುಕಿಂಗ್ ಮಾಡಿದ್ದರಿಂದ ಈ ಕುಸಿತ ಉಂಟಾಗಲು ಮೊದಲ ಪ್ರಮುಖ ಕಾರಣ. ಹಾಗೆಯೇ, ಮುಂದಿನ ಹಣಕಾಸು ವರದಿಗಳ ಬಗ್ಗೆ ಆತಂಕ ಇರುವಂತಹವರು ಶೇರುಗಳನ್ನು ಮಾರಿ, ಮುಂದಿನ ಅವಕಾಶಗಳಿಗಾಗಿ ಕಾಯುತ್ತಿರಲು ನಿರ್ಧರಿಸಿರಬಹುದು. ಹಾಗೆಯೇ, ಸ್ಪೇಸ್​ಎಕ್ಸ್ ಶೇರು ಬೆಲೆ ಕುಸಿಯಲು ಇನ್ನೊಂದು ಕಾರಣವೆಂದರೆ ಕೋಟ್ಯಂತ ಶೇರುಗಳ ಲಾಕಿನ್ ಅವಧಿ ಮುಗಿದು ಮಾರುಕಟ್ಟೆಗೆ ಪ್ರವಹಿಸಲಿರುವುದು.

ಸಂಸ್ಥೆಯ ಉದ್ಯೋಗಿಗಳು ಹಾಗೂ ಆರಂಭಿಕ ಹೂಡಿಕೆದಾರರ ಶೇರು ಲಾಕ್-ಇನ್ ಅವಧಿ (Lockup Expiry) ಮುಕ್ತಾಯಗೊಳ್ಳಲಿದ್ದು, ಸುಮಾರು 911.5 ಮಿಲಿಯನ್ ಶೇರುಗಳು ಮಾರುಕಟ್ಟೆಗೆ ಬರಲಿವೆ. ಇದರಿಂದಾಗಿ ಶೇರು ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ

ಟೆಸ್ಲಾ (Tesla) ಷೇರುಗಳ ಕುಸಿತ: ಸ್ಪೇಸ್‌ಎಕ್ಸ್ ಜೊತೆಗೆ ಮಸ್ಕ್ ಅವರ ಮತ್ತೊಂದು ಕಂಪನಿಯಾದ ಟೆಸ್ಲಾದ ಶೇರುಗಳು ಕೂಡ ಜುಲೈ 22 ರ ದ್ವಿತೀಯ ತ್ರೈಮಾಸಿಕ ವರದಿಯ ನಂತರ 17% ನಷ್ಟು ಕುಸಿದಿವೆ.

ಎಐ ಮತ್ತು ರೊಬೊಟಿಕ್ಸ್ ವೆಚ್ಚ: ಟೆಸ್ಲಾ ಕಂಪನಿಯು ಆಟೋಮೇಷನ್, ಎಐ ರೋಬೋಟಿಕ್ಸ್ ಮತ್ತು ಸ್ವಯಂ ಚಾಲಿತ ವಾಹನಗಳ (Robotaxis) ತಂತ್ರಜ್ಞಾನಕ್ಕಾಗಿ ಈ ವರ್ಷ $25 ಬಿಲಿಯನ್‌ಗಿಂತಲೂ ಹೆಚ್ಚು ಬಂಡವಾಳ ವೆಚ್ಚ ಮಾಡುತ್ತಿರುವುದು ಕಂಪನಿಯ ಲಾಭಾಂಶದ ಮೇಲೆ ಪರಿಣಾಮ ಬೀರಿದೆ. ಇವೆಲ್ಲವೂ ಕೂಡ ಇಲಾನ್ ಮಸ್ಕ್ ಅವರ ಒಟ್ಟಾರೆ ಶೇರು ಸಂಪತ್ತಿನ ಮೌಲ್ಯವನ್ನು ಕಡಿಮೆ ಮಾಡಲು ಕಾರಣಗಳಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us