AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ

Gross GST collections of Rs 2.11 lakh crore in July: 2026ರ ಜುಲೈ ತಿಂಗಳಲ್ಲಿ ಒಟ್ಟು ಜಿಎಸ್​ಟಿ 2.11 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ನಿವ್ವಳ ಜಿಎಸ್​ಟಿ 1.81 ಲಕ್ಷ ಕೋಟಿ ರೂ ಇದೆ. ಒಟ್ಟು ಜಿಎಸ್​ಟಿಯಲ್ಲಿ ಶೇ. 15.4 ಏರಿಕೆಯಾದರೆ, ನಿವ್ವಳ ಜಿಎಸ್​ಟಿಯಲ್ಲಿ ಶೇ. 15.8ರಷ್ಟು ಹೆಚ್ಚಳವಾಗಿದೆ. ಜುಲೈನಲ್ಲಿ ಮಹಾರಾಷ್ಟ್ರ 32,000 ಕೋಟಿ ರೂಗೂ ಅಧಿಕ ಜಿಎಸ್​ಟಿ ಸಂಗ್ರಹಿಸಿದರೆ, ಕರ್ನಾಟಕ 13,854 ಕೋಟಿ ರೂನೊಂದಿಗೆ ಎರಡನೇ ಸ್ಥಾನ ಪಡೆದಿದೆ.

ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ
ದಿನಸಿ ಅಂಗಡಿImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 01, 2026 | 3:31 PM

Share

ನವದೆಹಲಿ, ಆಗಸ್ಟ್ 1: ಜುಲೈ ತಿಂಗಳ ಭಾರತದ ಜಿಎಸ್‌ಟಿ (GST) ಸಂಗ್ರಹಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು. ಒಟ್ಟು ಜಿಎಸ್​ಟಿ ಸಂಗ್ರಹ (Gross GST) ಜುಲೈನಲ್ಲಿ ಶೇ. 15.4ರಷ್ಟು ಹೆಚ್ಚಳವಾಗಿ ₹2.11 ಲಕ್ಷ ಕೋಟಿ ದಾಟಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್​ಟಿ (Net GST) ಆದಾಯವೂ ಶೇ. 15.8ರಷ್ಟು ಏರಿಕೆಯಾಗಿ ₹1.81 ಲಕ್ಷ ಕೋಟಿ ತಲುಪಿದೆ. ಇಲ್ಲಿ ಶೇಕಡಾವಾರು ಏರಿಕೆಯು ವಾರ್ಷಿಕ ಲೆಕ್ಕಾಚಾರದಲ್ಲಿ ಇದೆ. ಅಂದರೆ, ಕಳೆದ ವರ್ಷದ ಜುಲೈನಲ್ಲಿ ಸಂಗ್ರಹಣೆ ಆಗಿದ್ದ ಜಿಎಸ್​ಟಿಗೆ ಹೋಲಿಸಿದರೆ ಈ ಜುಲೈನಲ್ಲಿ ಆಗಿರುವ ತೆರಿಗೆ ಸಂಗ್ರಹದ ಹೆಚ್ಚಳ ಇದು.

ಜುಲೈ ತಿಂಗಳಲ್ಲಿ ದೇಶೀಯ ವಹಿವಾಟುಗಳಿಂದ ಜಿಎಸ್‌ಟಿ ಸಂಗ್ರಹವು 10.1% ಹೆಚ್ಚಿ ₹1.44 ಲಕ್ಷ ಕೋಟಿ ಆಗಿದೆ. ಆಮದು ಮಾಡಿಕೊಂಡ ಸರಕುಗಳ ಮೇಲಿನ ಜಿಎಸ್‌ಟಿ ಸಂಗ್ರಹವಂತೂ 28.8% ನಷ್ಟು ಭಾರಿ ಏರಿಕೆ ಕಂಡು ₹66,511 ಕೋಟಿಗೆ ತಲುಪಿದೆ.

ಇದನ್ನೂ ಓದಿ: ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ

ಪ್ರಮುಖ ರಾಜ್ಯಗಳ ಜಿಎಸ್‌ಟಿ ವೃದ್ಧಿ ದರ

ದೇಶದ ಪ್ರಮುಖ ರಾಜ್ಯಗಳಲ್ಲಿ ಹರಿಯಾಣ ಅತ್ಯಂತ ವೇಗದ ಬೆಳವಣಿಗೆ ಕಂಡರೆ, ಮಹಾರಾಷ್ಟ್ರ ಮತ್ತು ಕರ್ನಾಟಕ ಅಗ್ರಸ್ಥಾನ ಕಾಯ್ದುಕೊಂಡಿವೆ:

  1. ಮಹಾರಾಷ್ಟ್ರ: ₹32,210 ಕೋಟಿ (13% ಹೆಚ್ಚಳ)
  2. ಕರ್ನಾಟಕ: ₹13,854 ಕೋಟಿ (12% ಹೆಚ್ಚಳ)
  3. ಗುಜರಾತ್: ₹12,923 ಕೋಟಿ (19% ಹೆಚ್ಚಳ)
  4. ಹರಿಯಾಣ: ₹11,892 ಕೋಟಿ (25% ಹೆಚ್ಚಳ)
  5. ಉತ್ತರ ಪ್ರದೇಶ: ₹9,651 ಕೋಟಿ (15% ಹೆಚ್ಚಳ)
  6. ದೆಹಲಿ: ₹6,460 ಕೋಟಿ (8% ಹೆಚ್ಚಳ)

ಹಿನ್ನಡೆ ಕಂಡ ರಾಜ್ಯಗಳು: ಹಿಮಾಚಲ ಪ್ರದೇಶ (-22%), ಉತ್ತರಾಖಂಡ್ (-18%), ಆಂಧ್ರಪ್ರದೇಶ (-5%) ಮತ್ತು ತಮಿಳುನಾಡು (-1%) ರಾಜ್ಯಗಳು ಜಿಎಸ್‌ಟಿ ಸಂಗ್ರಹಣೆಯಲ್ಲಿ ಹಿಂದಿನ ವರ್ಷದಕ್ಕಿಂತ ಇಳಿಕೆ ದಾಖಲಿಸಿವೆ.

ಇದನ್ನೂ ಓದಿ: ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ

ಪ್ರಸಕ್ತ ಹಣಕಾಸು ವರ್ಷದ ಒಟ್ಟು ಸಂಗ್ರಹ

ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ (April – July) ಒಟ್ಟು ಜಿಎಸ್‌ಟಿ ಸಂಗ್ರಹ 10.1% ಹೆಚ್ಚಾಗಿ ₹8.42 ಲಕ್ಷ ಕೋಟಿ ತಲುಪಿದೆ. ನಿವ್ವಳ ಜಿಎಸ್‌ಟಿ ಸಂಗ್ರಹ 9.2% ಹೆಚ್ಚಾಗಿ ₹7.21 ಲಕ್ಷ ಕೋಟಿ ತಲುಪಿದೆ.

ದೇಶೀಯ ಬೇಡಿಕೆ ಉತ್ತಮವಾಗಿರುವುದು ಮತ್ತು ಆಮದು ಚಟುವಟಿಕೆಗಳು ಚುರುಕಾಗಿರುವುದು ಈ ಭಾರಿ ಜಿಎಸ್‌ಟಿ ಸಂಗ್ರಹಣೆಗೆ ಪ್ರಮುಖ ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ
ವಿಮಾನಯಾನ ಕ್ಷೇತ್ರದ ಪ್ರಗತಿ ಒತ್ತಿಹೇಳಿದ ಪ್ರಧಾನಿ ಮೋದಿ
ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ
ಕೊಡಗಿನಲ್ಲಿ ಭಾರಿ ಮಳೆ: ಭಾಗಮಂಡಲ‌ ತ್ರಿವೇಣಿ ಸಂಗಮ, ಸ್ನಾನಘಟ್ಟ ಜಲಾವೃತ
ಮೈಸೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ರೋಡ್ ಶೋ
ಮೈಸೂರಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭರ್ಜರಿ ರೋಡ್ ಶೋ
ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ
ಶಿರಸಿ ನಗರದ ಹಲವು ಬಡಾವಣೆಗಳು ಮುಳುಗಡೆ, ನಿವಾಸಿಗಳ ಪರದಾಟ
ರಾಜ್ಯದಲ್ಲಿ ನಾಳೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಬಿಗಿ ಭದ್ರತೆ
ರಾಜ್ಯದಲ್ಲಿ ನಾಳೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಬಿಗಿ ಭದ್ರತೆ
ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಟ್ಟುನಿಟ್ಟಿನ ಕ್ರಮ; ಖರ್ಗೆ ಘೋಷಣೆ
ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕಟ್ಟುನಿಟ್ಟಿನ ಕ್ರಮ; ಖರ್ಗೆ ಘೋಷಣೆ
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
ಖಾಲಿ ಸೈಟ್​ಗಳಲ್ಲಿ 5 ವರ್ಷದ ಒಳಗೆ ಕಟ್ಟಡ ಕಟ್ಟಲೇಬೇಕು: ಸಿಎಂ ಖಡಕ್ ಸೂಚನೆ
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
‘ಪ್ರಜ್ವಲ್​​ಗೆ ಜಿಮ್ ಟ್ರೇನರ್ ಕೊಟ್ಟಿದ್ವಿ, ಆದರೂ ಅಚಿವ್​ ಮಾಡಿಲ್ಲ’
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
'ತಮಿಳುನಾಡಿಗೆ ಇನ್ನೂ ನೀರು ಹರಿಸಿಲ್ಲ': ಡಿಕೆ ಶಿವಕುಮಾರ್
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ
ಮೋದಿ ಭೇಟಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್: ಭದ್ರತೆ ಹೇಗಿದೆ ನೋಡಿ