AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate Today: ಇಂದು ಚಿನ್ನದ ದರ ಅಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ

Gold Price Today: ಚಿನ್ನ ಇಳಿಕೆಯ ಹಾದಿ ಹಿಡಿಯಲಿ ಎಂಬ ನಿರೀಕ್ಷೆ ತಪ್ಪೇನಲ್ಲ. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನ, ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸಹಜ. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಪರಿಶೀಲಿಸಿ.

Gold Rate Today: ಇಂದು ಚಿನ್ನದ ದರ ಅಲ್ಪ ಏರಿಕೆ, ಬೆಳ್ಳಿ ಬೆಲೆ ಇಳಿಕೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ
TV9 Web
| Edited By: |

Updated on: Jul 29, 2021 | 9:20 AM

Share

Gold silver Price Today | ಬೆಂಗಳೂರು: ಕಳೆದ ಎರಡು ದಿನಗಳಿಂದ ಚಿನ್ನದ ದರ ಕೊಂಚ ಇಳಿಕೆ ಕಂಡಿತ್ತು. ಇಂದು ಅಲ್ಪವೇ ಏರಿಕೆ ಆಗಿದೆ. ಚಿನ್ನ(Gold Price) ಖರೀದಿಸುವ ಕುರಿತಾಗಿ ಯೋಚನೆ ಇರಬಹುದು. ಆದರೆ ಚಿನ್ನ ಇಳಿಕೆಯ ಹಾದಿ ಹಿಡಿಯಲಿ ಎಂಬ ನಿರೀಕ್ಷೆ ತಪ್ಪೇನಲ್ಲ. ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನ, ಬೆಳ್ಳಿ ದರ(Silver Price) ಏರಿಳಿತ ಕಾಣುತ್ತಿರುವುದು ಸಹಜ. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,810 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,48,100 ರೂಪಾಯಿ ಇದೆ. ದೈನಂದಿನ ದರ ಪರಿಶೀಲನೆಯಲ್ಲಿ 4,48,100 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,890 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,88,900 ರೂಪಾಯಿ ಆಗಿದೆ. ಸರಿಸುಮಾರು 100 ರೂಪಾಯಿ ಹೆಚ್ಚಳವಾಗಿದೆ.

ಚೆನ್ನೈನಲ್ಲಿಯೂ ಸಹ ದರ ಏರಿಕೆ ಕಂಡು ಬಂದಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,220 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,52,200 ರೂಪಾಯಿ ಆಗಿದೆ. ದರ ಏರಿಕೆಯಲ್ಲಿ ಸುಮಾರು 100 ರೂಪಾಯಿ ಹೆಚ್ಚಳವಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರದಲ್ಲಿ 49,330 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,93,300 ರೂಪಾಯಿ ಆಗಿದೆ. ಸರಿಸಮಾರು 100 ರೂಪಾಯಿ ಹೆಚ್ಚಳವಾಗಿದೆ.

ಅದೆಷ್ಟೋ ವರ್ಷಗಳಿಂದ ಕಷ್ಟಪಟ್ಟು ದುಡಿದ ಹಣವನ್ನು ಚಿನ್ನಾಭರಣ ಖರೀದಿಗೆಂದು ಕೂಡಿರುತ್ತೀರಿ. ಹಾಗಿರುವಾಗ ಒಳ್ಳೆಯ ಗುಣಮಟ್ಟದ ಚಿನ್ನವನ್ನು ಖರೀದಿಸಿ. ಜತೆಗೆ ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಕೊಳ್ಳಲು ಸರಿಹೊಂದುವುದಾರೆ ಆಭರಣ ಖರೀದಿಸುವತ್ತ ಯೋಚಿಸಿ. ಪ್ರಮುಖ ಎಲ್ಲಾ ನಗರಗಳಲ್ಲಿ ಇಂದು ಚಿನ್ನದ ದರ ಅಲ್ಪವೇ ಏರಿಕೆಯಾಗಿದೆ ಅಷ್ಟೆ!

ಬೆಳ್ಳಿ ದರ ಮಾಹಿತಿ ಕಳೆದ ಒಂದು ವಾರದಿಂದಲೂ ಬೆಳ್ಳಿ ದರ ಇಳಿಕೆ ಕಾಣುತ್ತಿದೆ. ಅದೇ ರೀತಿ ಇಂದೂ ಸಹ ಬೆಳ್ಳಿ ದರ ಇಳಿಕೆ ಕಂಡಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ ದರ 200 ರೂಪಾಯಿ ಇಳಿಕೆ ಕಂಡಿದೆ. ಆ ಮೂಲಕ 71,200 ರೂಪಾಯಿ ನಿಗದಿಯಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯಾವುದೇ ಏರಿಳಿತಗಳು ಕಂಡು ಬಂದಿಲ್ಲ. ಕೆಜಿ ಬೆಳ್ಳಿಗೆ 66,400 ರೂಪಾಯಿ ಇದೆ. ಅದೇ ರೀತಿ ಕೆಲವು ನಗರಗಳಲ್ಲಿ ಬೆಳ್ಳಿ ದರ ಇಳಿಕೆಯ ಹಾದಿ ಹಿಡಿದಿದ್ದರೆ, ಕೆಲವೆಡೆ ಸ್ಥಿರತೆಯಲ್ಲಿದೆ.

ಇದನ್ನೂ ಓದಿ:

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ! ಆಭರಣ ಕೊಳ್ಳುವ ವಿಚಾರವಿದ್ದರೆ ದರ ವಿವರ ಒಮ್ಮೆ ಗಮನಿಸಿ

Gold Rate Today: ಚಿನ್ನದ ದರ ಸ್ಥಿರತೆಯಲ್ಲಿದೆ, ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ

Follow Us
TV9 Web
TV9 Web

TV9 Kannada

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್