Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ! ಆಭರಣ ಕೊಳ್ಳುವ ವಿಚಾರವಿದ್ದರೆ ದರ ವಿವರ ಒಮ್ಮೆ ಗಮನಿಸಿ

Gold Rate Today: ಚಿನ್ನ ಖರೀದಿಸಬೇಕೆಂಬ ಆಸೆ ಇರುವುದು ಸಹಜ. ಜತೆಗೆ ಚಿನ್ನಾಭರಣ ಕೊಳ್ಳಲು ದರ ಕೊಂಚ ಇಳಿಕೆಯಾಗಲಿ ಎಂಬ ನಿರೀಕ್ಷೆಯೂ ತಪ್ಪಲ್ಲ. ಆದರೆ ಚಿನ್ನದ ದರ ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯವಾದ್ದರಿಂದ ನಿಮ್ಮಲ್ಲಿರುವ ಹಣದಲ್ಲಿ ಆಭರಣ ಕೊಳ್ಳಲು ಸರಿ ಹೊಂದುವುದಾದರೆ ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಿ.

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ! ಆಭರಣ ಕೊಳ್ಳುವ ವಿಚಾರವಿದ್ದರೆ ದರ ವಿವರ ಒಮ್ಮೆ ಗಮನಿಸಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shruti hegde

Updated on: Jul 27, 2021 | 9:16 AM

Gold Silver Price Today | ಬೆಂಗಳೂರು: ಆಭರಣ ಕೊಳ್ಳುವುದು ಕೇವಲ ತೊಟ್ಟು ಸಂತೋಷಪಡಲು ಮಾತ್ರವಲ್ಲ. ಹೂಡಿಕೆಯ ದೃಷ್ಟಿಯಿಂದಲೂ ಚಿನ್ನಾಭರಣ ಕೊಳ್ಳುವರಿದ್ದಾರೆ. ಹಾಗಾಗಿಯೇ ಚಿನ್ನದ ಆಭರಣವನ್ನು ಆಪತ್ಕಾಲದ ಬಂಧು ಎಂದು ಕರೆಯುವುದುಂಟು. ಚಿನ್ನ(Gold Price) ಖರೀದಿಸುವ ಮೊದಲು ನಾವು ವಾಸವಿರುವ ನಗರದ ಮಾರುಕಟ್ಟೆಯಲ್ಲಿ ದರ ವಿವರ ಎಷ್ಟಿದೆ? ಎಂಬ ಕುತೂಹಲ ಇದ್ದೇ ಇರುತ್ತದೆ. ಹಾಗಿರುವಾಗ ಇಂದು ಚಿನ್ನದ ದರದ ಮಾಹಿತಿ ತಿಳಿಯಿರಿ. ಬೆಳ್ಳಿ ದರದಲ್ಲಿಯೂ ಇಂದು ಅಲ್ವವೇ ಇಳಿಕೆ ಕಂಡು ಬಂದಿದೆ.

ಚಿನ್ನ ಖರೀದಿಸಬೇಕೆಂಬ ಆಸೆ ಇರುವುದು ಸಹಜ. ಜತೆಗೆ ಚಿನ್ನಾಭರಣ ಕೊಳ್ಳಲು ದರ ಕೊಂಚ ಇಳಿಕೆಯಾಗಲಿ ಎಂಬ ನಿರೀಕ್ಷೆಯೂ ತಪ್ಪಲ್ಲ. ಆದರೆ ಚಿನ್ನದ ದರ ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯವಾದ್ದರಿಂದ ನಿಮ್ಮಲ್ಲಿರುವ ಹಣದಲ್ಲಿ ಆಭರಣ ಕೊಳ್ಳಲು ಸರಿ ಹೊಂದುವುದಾದರೆ ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಮೌಲ್ಯ 44,800 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ದರ 4,48,000 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,000 ರೂಪಾಯಿ ಏರಿಕೆ ಕಂಡಿದೆ.

ಕಳೆದ ಎರಡು ದಿನಗಳಿಂದ ಚಿನ್ನಾಭರಣದ ದರ ಸ್ಥಿರತೆಯನ್ನು ಕಂಡಿತ್ತು. ಇದು ಬಂಗಾರ ಪ್ರಿಯರಿಗೆ ಸಮಾಧಾನ ತಂದಿರುವ ವಿಚಾರವಾಗಿತ್ತು. ಇಂದು ದರ ಕೊಂಚ ಏರಿಕೆ ಕಂಡು ಬಂದಿರುವುದು ಸ್ವಲ್ಪ ಬೇಸರವಾದರೂ ಸಹ 1 ಗ್ರಾಂ ಚಿನ್ನದಲ್ಲಿ 10 ರೂಪಾಯಿಯಷ್ಟು ಏರಿಕೆಯಾಗಿದೆ ಅಷ್ಟೆ. ಹಾಗಾಗಿ ಇಂದು ಚಿನ್ನಾಭರಣ ಕೊಳ್ಳುವ ಕುರಿತಾಗಿ ಯೋಚಿಸಬಹುದು.

ಚೆನ್ನೈನಲ್ಲಿಯೂ ಸಹ ಇಂದು ಚಿನ್ನದ ದರ ಕೊಂಚ ಏರಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,210 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,52,100 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂ. ಏರಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,320 ರೂಪಾಯಿಗೆ ಏರಿಕೆ ಆಗಿದೆ. ಸುಮಾರು 10 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರದಲ್ಲಿ 4,93,200 ರೂಪಾಯಿ ಏರಿಕೆ ಕಂಡು ಬಂದಿದ್ದು ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.

ಈ ವಾರದ ಪ್ರಾರಂಭದಲ್ಲಿ ಚಿನ್ನದ ದರ ಏರುತ್ತಲೇ ಇತ್ತು. ಬಳಿಕ ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಕೆ ಕಂಡಿತ್ತು. ಇಂದು ಮತ್ತೆ ಅಲ್ಪವೇ ಏರಿಕೆ ಆಗಿದೆ. ಸಾಮಾನ್ಯವಾಗಿ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಕೊಂಚ ಏರಿಕೆ ಆಗಿದೆ.

ಬೆಳ್ಳಿ ದರದಲ್ಲಿಯೂ ಸಹ ಇಂದು ದರ ಏರಿಕೆ ಕಂಡು ಬಂದಿದೆ. ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ 72,300 ರೂಪಾಯಿ ಏರಿಕೆಯಾಗಿದೆ. ಆದರೆ ಬೆಂಗಳೂರಿನಲ್ಲಿ ಇಂದು ಬೆಳ್ಳಿ ದರ ಕೊಂಚ ಇಳಿಕೆ ಕಂಡಿದೆ. ಕೆಜಿ ಬೆಳ್ಳಿಗೆ 67,100 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 400 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಮುಂಬೈನಲ್ಲಿಯು ಸಹ ಇಂದು ಬೆಳ್ಳಿ ದರ ಇಳಿಕೆ ಆಗಿದೆ. ಕೆಜಿ ಬೆಳ್ಳಿಗೆ 67,100 ರೂಪಾಯಿ ನಿಗದಿಯಾಗಿದೆ. ದೈನಂದಿನ ಬದಲಾವಣೆಯಲ್ಲಿ 400 ರೂಪಾಯಿ ಇಳಿಕೆ ಕಂಡು ಬಂದಿದೆ.

ಇದನ್ನೂ ಓದಿ:

Gold Rate Today: ಚಿನ್ನದ ದರ ಸ್ಥಿರತೆಯಲ್ಲಿದೆ, ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವುದಾದರೆ ಯೋಚಿಸಿ

Gold Rate Today: ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಪರಿಶೀಲಿಸಿ