Gold Rate Today: ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಪರಿಶೀಲಿಸಿ

Gold Silver Price Today: ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಕೆಯತ್ತ ಸಾಗಿತ್ತು. ಆದರೆ ಇಂದು ( ಜುಲೈ 24, ಶನಿವಾರ) ಕೊಂಚ ಏರಿದೆ. ದೈನಂದಿನ ದರ ಬದಲಾವಣೆಯಲ್ಲಿ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ 22 ಕ್ಯಾರೆಟ್​ 1 ಗ್ರಾಂ ಚಿನ್ನದ ದರದಲ್ಲಿ 15 ರೂಪಾಯಿ ಏರಿಕೆ ಕಂಡು ಬಂದಿದೆ.

Gold Rate Today: ಇಂದು ಚಿನ್ನದ ದರದಲ್ಲಿ ಕೊಂಚ ಏರಿಕೆ; ಪ್ರಮುಖ ನಗರಗಳಲ್ಲಿ ಆಭರಣದ ಬೆಲೆ ಎಷ್ಟಿದೆ? ಪರಿಶೀಲಿಸಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on:Jul 24, 2021 | 8:56 AM

Gold Silver Price Today | ಬೆಂಗಳೂರು: ಚಿನ್ನದ ದರ ಏರಿಳಿತ ಕಾಣುತ್ತಿರುವುದು ಸಹಜ. ಚಿನ್ನದ ದರ (Gold Price) ಇಳಿಕೆಯತ್ತ ಸಾಗಿದಾಗ ಆಭರಣ ಕೊಳ್ಳಬೇಕು ಎಂದೆನಿಸುವುದೂ ತಪ್ಪಲ್ಲ. ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಕೆಯತ್ತ ಸಾಗಿತ್ತು. ಆದರೆ ಇಂದು ( ಜುಲೈ 24, ಶನಿವಾರ) ಕೊಂಚ ಏರಿದೆ. ದೈನಂದಿನ ದರ ಬದಲಾವಣೆಯಲ್ಲಿ ಪರಿಶೀಲಿಸಿದಾಗ ಬೆಂಗಳೂರಿನಲ್ಲಿ 22 ಕ್ಯಾರೆಟ್​ 1 ಗ್ರಾಂ ಚಿನ್ನದ ದರದಲ್ಲಿ 15 ರೂಪಾಯಿ ಏರಿಕೆ ಕಂಡು ಬಂದಿದೆ. ಅದರಂತೆ ಪ್ರಮುಖ ಎಲ್ಲಾ ನಗರಗಳಲ್ಲಿಯೂ ಕಳೆದ ಎರಡು ದಿನಗಳಿಂದ ಬೆಳ್ಳಿ ದರ (Silver Price) ಇಳಿಕೆ ಕಾಣುತ್ತಿತ್ತು. ಆದರೆ ಇಂದು ಬೆಳ್ಳಿ ದರ ಸಹ ಏರಿಕೆಯತ್ತ ಸಾಗಿದೆ.

ಚಿನ್ನ ಖರೀದಿಸಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಮಹಿಳೆಯರಂತೂ ಚಿನ್ನದ ಆಭರಣ ತೊಟ್ಟು ಸಂತೋಷದಿಂದ ಆಚರಣೆಗಳನ್ನು ಆಚರಿಸುತ್ತಾರೆ. ಅದರಲ್ಲಿಯೂ ಮದುವೆ ಸಮಾರಂಭಗಳು ಮನೆಯಲ್ಲಿದ್ದರೆ ಮೊದಲು ನೆನಪಾಗುವುದೇ ಚಿನ್ನದ ಸರ, ಬಳೆಗಳು. ಹೊಸ ಡಿಸೈನ್​ ಕಂಡಾಗ ನಮ್ಮ ಬಳಿಯೂ ಈ ತರಹದ ಬಳೆಗಳು ಇರಬೇಕಿತ್ತು ಎಂದೆನಿಸುವುದು ಸಹಜ. ಹಾಗಾಗಿಯೇ ಹಣವನ್ನು ಕೂಡಿಟ್ಟು ಆಭರಣ ಕೊಳ್ಳಲು ಮುಂದಾಗುತ್ತಾರೆ. ಇಷ್ಟೆಲ್ಲಾ ಆಸೆ ಇದ್ದಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ? ಎಂಬ ಕುತೂಹಲ ಇದ್ದೇ ಇರುತ್ತದೆ.

ಕೇವಲ ಆಭರಣಗಳನ್ನು ತೊಟ್ಟು, ಅಲಂಕಾರಗೊಂಡು ಖುಷಿ ಪಡುವುದು ಮಾತ್ರವಲ್ಲ. ಹೂಡಿಕೆಯ ದೃಷ್ಟಿಯಿಂದಲೂ ಚಿನ್ನ ಖರೀದಿಸಲಾಗುತ್ತದೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂಬ ಭರವಸೆಯೊಂದಿಗೆ ಕೈಯಲ್ಲಿ ಹಣವಿದ್ದಾಗ ಚಿನ್ನ ಕೊಳ್ಳುವತ್ತ ಯೋಚಿಸುತ್ತಾರೆ. ಹಾಗಿರುವಾಗ ಇಂದಿನ ಮಾರುಕಟ್ಟೆಯಲ್ಲಿ ಆಭರಣದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ. ಬಳಿಕ ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಿ.

ಚಿನ್ನದ ದರ ವಿವರ ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನದ ದರ 4,47,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 1,500 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,770 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನದ ದರ 4,87,700 ರೂಪಾಯಿ ಆಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,850 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,68,500 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 51,110 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 5,11,100 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 160 ರೂಪಾಯಿಯಷ್ಟು ಏರಿಕೆ ಕಂಡಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,060 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,50,600 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 60 ರೂಪಾಯಿ ಏರಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,160 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,91,600 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 150 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಬೆಳ್ಳಿ ದರ ವಿವರ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ಬೆಲೆ 67,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 500 ರೂಪಾಯಿ ಏರಿಕೆ ಕಂಡಿದೆ. ಚೆನ್ನೈನಲ್ಲಿ 400 ರೂಪಾಯಿ ಏರಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 72,300 ರೂಪಾಯಿಗೆ ನಿಗದಿಯಾಗಿದೆ. ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆ 67,400 ರೂಪಾಯಿ ಇದೆ. ಅದೇ ರೀತಿ ಮುಂಬೈನಲ್ಲಿ ಕೆಜಿ ಬೆಳ್ಳಿ ಬೆಲೆ 67,400ರೂಪಾಯಿಗೆ ನಿಗದಿಯಾಗಿದೆ. ಮುಂಬೈ, ಛಂಡೀಗಢ, ಹೈದರಾಬಾದ್​, ಕೇರಳ, ಕೋಲ್ಕತ್ತಾ, ಲಕ್ನೋ ನಗರಗಳಲ್ಲಿಯೂ ಚಿನ್ನದ ದರ ಏರಿಕೆ ಕಂಡಿದೆ. ಅದೇ ರೀತಿ ಬೆಳ್ಳಿ ದರದಲ್ಲಿ ಕೂಡ ಏರಿಕೆಯಾಗಿದೆ.

ಇದನ್ನೂ ಓದಿ: Gold Rate Today: ಪ್ರೀತಿಪಾತ್ರರಿಗಾಗಿ ಚಿನ್ನದ ಉಂಗುರ ಕೊಡಲು ಯೋಚಿಸಿದ್ದೀರಾ? ದರ ಇಳಿಕೆ ಕಂಡಿದೆ ಖರೀದಿಯತ್ತ ಯೋಚಿಸಬಹುದು

Gold Rate Today: ಚಿನ್ನದ ದರ ಏರಿಕೆ, ಬೆಳ್ಳಿ ದರ ಇಳಿಕೆ; ಯಾವ ಯಾವ ನಗರಗಳಲ್ಲಿ ಎಷ್ಟೆಷ್ಟು? ಮಾಹಿತಿ ಇಲ್ಲಿದೆ

(Gold Price increased Today on 2021 July 24 check silver price in Bangalore Delhi Mumbai and major city )

Published On - 8:55 am, Sat, 24 July 21

ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್